ಆಜಾನ್-ಹನುಮಾನ್ ಚಾಲೀಸಾ ಗದ್ದಲ: 150 MNS ಕಾರ್ಯಕರ್ತರ ಬಂಧನ
ನಾಸಿಕ್ ಮೇ 5: ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಿದ್ದಕ್ಕಾಗಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಒಟ್ಟು 150 ಮಹಾರಾಷ್ಟ್ರ ನವನಿರ್ಮಾಣ ಸೇನಾ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಸೀದಿಗಳ ಹೊರಗೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸುವಂತೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಮನವಿಯ ಮಧ್ಯೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರಾಜ್ಯ ಪೊಲೀಸರು ಕೈಗೊಂಡಿರುವ 'ತಡೆಗಟ್ಟುವ ಕ್ರಮಗಳ' ಭಾಗವಾಗಿ ಈ ಬಂಧನಗಳು ನಡೆದಿವೆ.
ನಾಸಿಕ್‌ನಲ್ಲಿ ಕೋಮುಗಲಭೆ ಸೃಷ್ಟಿಸಿದ್ದಕ್ಕಾಗಿ ಇದುವರೆಗೆ 150 ಎಂಎನ್‌ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಕಾಪಾಡಲು ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಾಸಿಕ್ ಇನ್‌ಸ್ಪೆಕ್ಟರ್ ಬಿ.ಜಿ.ಶೇಖರ್ ಪಾಟೀಲ್ ಹೇಳಿದ್ದಾರೆ.
ಅಕ್ರಮ ಧ್ವನಿವರ್ಧಕಗಳ ತೆರವು ವಿಚಾರವಾಗಿ ಮಾತನಾಡಿದ ಐಜಿಪಿ, 'ಕಾನೂನು ರೂಪಿಸಿರುವ ನಿಯಮಗಳ ಪ್ರಕಾರವೇ ಕ್ರಮಕೈಗೊಳ್ಳುತ್ತಿದ್ದೇವೆ, ಅಧಿಕಾರಿಗಳ ಅನುಮತಿ ಪಡೆಯದೆ ಧ್ವನಿವರ್ಧಕ ಕಾರ್ಯನಿರ್ವಹಿಸುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದರು.

ರಾಜ್ ಠಾಕ್ರೆ ಧ್ವನಿವರ್ಧಕಗಳ ವಿರುದ್ಧ ಪ್ರತಿಭಟಿಸಿದರು. "ಸರ್ಕಾರ ಧ್ವನಿವರ್ಧಕ ತೆಗೆದು ಹಾಕುವವರೆಗೆ ಮತ್ತು ಧ್ವನಿವರ್ಧಕಗಳ ಕುರಿತು ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಪರಿಹರಿಸುವವರೆಗೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾವನ್ನು ಹಾಕಲಾವುದು" ಎಂದು ಹೇಳಿದರು.
"ನನಗೆ ತಿಳಿದಿರುವಂತೆ, ಮುಂಬೈನಲ್ಲಿ 1,140 ಕ್ಕೂ ಹೆಚ್ಚು ಮಸೀದಿಗಳಿವೆ. ಇವುಗಳಲ್ಲಿ 135 ಮಸೀದಿಗಳು ಮುಂಜಾನೆ 5 ಗಂಟೆಗೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಜಾನ್ ನುಡಿಸಿದವು. ನಮಗೆ ರಾಜ್ಯದಲ್ಲಿ ಶಾಂತಿ ಬೇಕು. ನಾನು ಪೊಲೀಸರನ್ನು ಕೇಳಲು ಬಯಸುತ್ತೇನೆ, ನೀವು ಕ್ರಮ ತೆಗೆದುಕೊಳ್ಳುತ್ತಿರುವಿರಾ? ನಮ್ಮ ಕಾರ್ಯಕರ್ತರು ಹಾಗೂ ನನ್ನ ಉದ್ದೇಶವೆಂದರೆ ಎಲ್ಲಾ ಅಕ್ರಮ ಧ್ವನಿವರ್ಧಕಗಳನ್ನು ಮಸೀದಿಗಳಿಂದ ತೆಗೆದುಹಾಕಬೇಕು. ಅವುಗಳನ್ನು ತೆಗೆದುಹಾಕುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ" ಎಂದು ರಾಜ್ ಠಾಕ್ರೆ ಹೇಳಿದರು.

ಜೊತೆಗೆ "ಇದು ಮಸೀದಿಗಳ ಬಗ್ಗೆ ಮಾತ್ರವಲ್ಲ, ಹಲವಾರು ದೇವಾಲಯಗಳಲ್ಲಿ ಅಕ್ರಮ ಧ್ವನಿವರ್ಧಕಗಳು ಕಾರ್ಯನಿರ್ವಹಿಸುತ್ತಿವೆ. ಇದು (ಅಕ್ರಮ ಧ್ವನಿವರ್ಧಕಗಳು) ಧಾರ್ಮಿಕ ವಿಷಯವಲ್ಲ ಆದರೆ ಸಾಮಾಜಿಕ ಸಮಸ್ಯೆ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಎಲ್ಲಾ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕುವವರೆಗೆ ಎಂಎನ್ಎಸ್ ನಾಯಕರು ಆಜಾನ್ ಸಮಯದಲ್ಲಿ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾವನ್ನು ನುಡಿಸುವುದನ್ನು ಮುಂದುವರಿಸುತ್ತಾರೆ" ಎಂದು ಅವರು ಹೇಳಿದರು.
ಏಪ್ರಿಲ್ 12 ರಂದು ಎಂಎನ್‌ಎಸ್ ಮುಖ್ಯಸ್ಥರು ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಟಿಮೇಟಮ್ ನೀಡಿದಾಗ ಧ್ವನಿವರ್ಧಕಗಳ ಗದ್ದಲ ಪ್ರಾರಂಭವಾಗಿದೆ. ಇದು ವಿಫಲವಾದರೆ, ಎಂಎನ್‌ಎಸ್ ಕಾರ್ಯಕರ್ತರು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುತ್ತಾರೆ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ. 'ಆಜಾನ್'ಗಾಗಿ ಧ್ವನಿವರ್ಧಕಗಳನ್ನು ಬಳಸುವ ಪ್ರದೇಶಗಳಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುವಂತೆ ಜನರಿಗೆ ಮನವಿ ಮಾಡಿದ ರಾಜ್ ಠಾಕ್ರೆ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications