ಕೊರೊನಾನಿಂದ ಗುಣಮುಖರಾದ ಐಶ್ವರ್ಯ ರೈ ಮತ್ತು ಆರಾಧ್ಯ

ಮುಂಬೈ, ಜುಲೈ 27: ಕೊರೊನಾ ವೈರಸ್‌ಗೆ ತುತ್ತಾಗಿದ್ದ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಮತ್ತು ಆಕೆಯ ಮಗಳು ಆರಾಧ್ಯ ಬಚ್ಚನ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

Recommended Video

      India - Bangladesh ಸಂಬಂಧಕ್ಕೆ ಹುಳಿ ಹಿಂಡಿದ China | Oneindia Kannada

      ಸುಮಾರು ಹತ್ತು ದಿನಗಳ ಬಳಿಕ ಮುಂಬೈ ನಾನಾವತಿ ಆಸ್ಪತ್ರೆಯಿಂದ ಅಮ್ಮ ಮತ್ತು ಮಗಳು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದಿರುವ ಐಶ್ವರ್ಯ ರೈ ಮತ್ತು ಮಗಳಿಗೆ ಸ್ವಲ್ಪ ದಿನಗಳ ಹೋಮ್‌ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

      ಈ ಬಗ್ಗೆ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದು, ''ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಯಿಂದ ಐಶ್ವರ್ಯ ಮತ್ತು ಆರಾಧ್ಯ ಸೋಂಕಿನಿಂದ ಗುಣಮುಖರಾಗಿದ್ದು, ಮನೆ ತಲುಪಿದ್ದಾರೆ. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ'' ತಿಳಿಸಿದ್ದಾರೆ.

      Aishwarya Rai Bachchan, her daughter Aaradhya test negative for COVID19

      ಇನ್ನು ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ಗೂ ಕೊರೊನಾ ಸೋಂಕು ತಗುಲಿತ್ತು. ಇವರಿಬ್ಬರ ಚಿಕಿತ್ಸೆ ಮುಂದುವರಿದಿದೆ ಎಂದು ಸ್ವತಃ ಜೂನಿಯರ್ ಬಚ್ಚನ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

      ಮೊದಲು ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ಗೆ ಕೊವಿಡ್ ಸೋಂಕು ದೃಢವಾಗಿತ್ತು. ಬಳಿಕ ಐಶ್ವರ್ಯ ರೈ ಮತ್ತು ಆರಾಧ್ಯಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಜಯಾ ಬಚ್ಚನ್‌ಗೆ ಕೊರೊನಾ ನೆಗಿಟಿವ್ ಬಂದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+