ಐಶ್ವರ್ಯಾ ರೈ ಮೇಲೆ ಜನಾಂಗೀಯ ನಿಂದನೆ ಆರೋಪ
ಮುಂಬೈ, ಏ.23: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹೆಸರಿಗೆ ಮತ್ತೊಂದು ವಿವಾದ ತಗುಲಿ ಹಾಕಿಕೊಂಡಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆ ರಾಯಭಾರಿಯಾಗಿರುವ ಕುಡ್ಲದ ಬೆಡಗಿ ಇರುವ ಜಾಹೀರಾತು ಜನಾಂಗೀಯ ವಿವಾದ ಎಬ್ಬಿಸಿತ್ತು. ಇದಕ್ಕೆ ಐಶ್ವರ್ಯಾ ಅವರ ಮ್ಯಾನೇಜರ್ ಉತ್ತರ ನೀಡಿದ್ದು, ಈಗ ಸಮಸ್ಯೆ ಬಗೆಹರಿದಿದೆ.
ಪ್ರಮುಖ ಆಭರಣ ತಯಾರಿಕಾ ಸಂಸ್ಥೆ ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆ ಪರ ಬಿಗ್ ಬಿ ಅಮಿತಾಬ್ ಜೊತೆಗೆ ಐಶ್ವರ್ಯಾ ರೈ ಕೂಡಾ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಇತ್ತೀಚಿಗೆ ಚೆನ್ನೈನಲ್ಲಿ ಮಳಿಗೆ ಭರ್ಜರಿಯಾಗಿ ಆರಂಭವಾಗಿತ್ತು. ಇದಕ್ಕೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಜೊತೆಗೆ ಐಶ್ವರ್ಯಾ ಹಾಗೂ ಅಮಿತಾಬ್ ಕೂಡಾ ಪಾಲ್ಗೊಂಡಿದ್ದರು.
ಇದಾದ ಬಳಿಕ ಕಲ್ಯಾಣ್ ಜ್ಯುವೆಲ್ಲರ್ಸ್ ಮುದ್ರಣ ಮಾಧ್ಯಮದಲ್ಲಿ ಐಶ್ವರ್ಯಾ ರೈ ಇರುವ ಜಾಹೀರಾತು ನೀಡಿತ್ತು. ಇದರಲ್ಲಿ ಕಪ್ಪು ವರ್ಣದ ಬಾಲಕನೊಬ್ಬ ಛತ್ರಿ ಹಿಡಿದುಕೊಂಡು ನಿಂತಿರುತ್ತಾನೆ. ಶ್ವೇತವರ್ಣೆ ಐಶ್ವರ್ಯಾ ಆಭರಣ ಧರಿಸಿ ಕುಳಿತಿರುತ್ತಾರೆ. ನೋಡಿದರೆ ಈಜಿಪ್ಟಿನ ಕ್ಲಿಯೋಪಾತ್ರ ನೆನಪಿಸುವಂತಿರುವ ಈ ಜಾಹೀರಾತು ಕಪ್ಪು ವರ್ಣ ಜನರಿಗೆ ಅವಹೇಳನ ಮಾಡಿದೆ.
ಬಾಲಕನನ್ನು ಬಳಸಿರುವುದು ಬಾಲ ಕಾರ್ಮಿಕ ವ್ಯವಸ್ಥೆ ಬಗ್ಗೆ ಸೂಚಿಸಿದ್ದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು, ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು., ಇದಕ್ಕೆ ಐಶ್ವರ್ಯಾ ಅವರ ಮ್ಯಾನೇಜರ್ ಉತ್ತರ ನೀಡಿದ್ದು, ಈಗ ಸಮಸ್ಯೆ ಬಗೆಹರಿದಿದೆ.

ರಾಷ್ಟ್ರೀಯ ಮಕ್ಕಳ ಹಕ್ಕು ಸಮಿತಿಯ ಮಾಜಿ ಅಧ್ಯಕ್ಷರ ಹೇಳಿಕೆ
ನಿಮ್ಮ ಜಾಹಿರಾತು ಪರಿಕಲ್ಪನೆಯಿಂದ ನಮಗೆ ತೀರಾ ನಿರಾಶೆಯಾಗಿದೆ, ಒಂದು ಸಮುದಾಯದ ಪ್ರಮುಖ ವ್ಯಕ್ತಿಯಾಗಿ, ದೇಶದ ಪ್ರತಿಷ್ಟಿತ ಕುಟುಂಬದ ಸೊಸೆಯಾಗಿ, ಸಾಕಷ್ಟು ಮಂದಿ ಅಭಿಮಾನಿಗಳನ್ನು ಹೊಂದಿರುವ ನೀವು ಇಂಥ ಕೆಳಮಟ್ಟದ ಸಂದೇಶ ನೀಡುವ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವುದು ವಿಷಾದನೀಯ ಎಂದಿದ್ದಾರೆ.

ಜಾಹೀರಾತು ನನ್ನ ಕಲ್ಪನೆಯಲ್ಲ : ಐಶ್ವರ್ಯಾ
ವಿವಾದಿತ ಜಾಹೀರಾತು ನೋಡಿ.. ಇದಕ್ಕೆ ಐಶ್ ನೀಡಿದ ಪ್ರತಿಕ್ರಿಯೆ: ಇದರ ಕಲ್ಪನೆ ಸಂಪೂರ್ಣ ಜಾಹೀರಾತು ವಿಭಾಗದವರಿಗೆ ಸೇರುತ್ತದೆ. ಇದು ಅವರದ್ದೇ ಹಕ್ಕು, ಆದರೂ, ಜನರ ಮನಸ್ಸಿಗೆ ನೋವಾಗಿದ್ದರೆ, ನನ್ನಿಂದ ತಪ್ಪಾಗಿದ್ದಾರೆ ನಾನು ತಿದ್ದುಕೊಳ್ಳುತ್ತೇನೆ. ಈ ಬಗ್ಗೆ ಮುಂದಿನ ಕ್ರಮವನ್ನು ಕಲ್ಯಾಣ್ ಸಂಸ್ಥೆ ತೆಗೆದುಕೊಳ್ಳಲಿದೆ ಎಂದು ಐಶ್ವರ್ಯಾ ಪರವಾಗಿ ಅವರ ಮ್ಯಾನೇಜರ್ ಉತ್ತರಿಸಿದ್ದಾರೆ.

ಜಾಹೀರಾತು ಹಿಂಪಡೆದ ಕಲ್ಯಾಣ್ ಜ್ಯುವೆಲ್ಲರ್ಸ್
ಈ ಜಾಹಿರಾತಿನಿಂದ ಯಾರಿಗಾದರೂ ಬೇಸರ ಉಂಟಾಗಿದ್ದರೆ ನಾವು ವಿಷಾದಿಸುತ್ತೇವೆ. ಈಗಾಗಲೇ ಜಾಹಿರಾತುಗಳನ್ನು ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆ ಹೇಳಿದೆ.

ಕಲ್ಯಾಣ್ ಜ್ಯುವೆಲ್ಲರ್ಸ್ ಸಂಸ್ಥೆ ಪ್ರಕಟಣೆ
"With regard to the item Open letter to Aishwarya Rai Bachchan: This ad you figure in is insidiously racist, the creative was intended to present the royalty, timeless beauty and elegance. However, if we have inadvertently hurt the sentiments of any individual or organization, we deeply regret the same. We have started the process of withdrawing this creative from our campaign."
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications