ಮುಂಬೈಯಲ್ಲಿ ಭಾರೀ ಕಾಳ್ಗಿಚ್ಚು: ನಾಲ್ಕು ಕಿಮೀ ವ್ಯಾಪಿಸಿದ ಬೆಂಕಿ!
ಮುಂಬೈ, ಡಿಸೆಂಬರ್ 04: ವಾಣಿಜ್ಯ ನಗರಿ ಮುಂಬೈಯ ಗೊರೆಗಾಂವ್ ಎಂಬಲ್ಲಿಯ ಆರೆ ಕಾಲೋನಿ ಪ್ರದೇಶದಲ್ಲಿ ಕಂಡು ಬಂದ ಕಾಳ್ಗಿಚ್ಚು ಜನರಲ್ಲಿ ಭೀತಿ ಮೂಡಿಸಿದೆ.
ಕಾಳ್ಗಿಚ್ಚು 4 ಕಿ.ಮೀ.ವ್ಯಾಪ್ತಿಯಲ್ಲಿ ಹರಡಿದ್ದು, ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ.
ಬೆಂಕಿಯ ಜ್ವಾಲೆ ಜನವಸತಿ ಇರುವ ಪ್ರದೇಶಗಳಿವೆ ವ್ಯಾಪಿಸುವ ಮೊದಲೇ ಆರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೆಂಕಿಯ ಆರ್ಭಟ ತಹಬಂದಿಗೆ ಬಂದಿದೆ ಎನ್ನಲಾಗಿದೆ.

ಆದರೆ ಕಾಳ್ಗಿಚ್ಚಿನಿಂದಾಗಿ ಸಹಸ್ರಾರು ವನ್ಯಜೀವಿಗಳ ಪ್ರಾಣಕ್ಕೆ ಅಪಾಯವಾಗಿರಬಹುದು ಎನ್ನಲಾಗಿದೆ. ಮುಂಬೈಯ ಪ್ರಸಿದ್ಧ ಫಿಲ್ಮ್ ಸಿಟಿಯೊಂದೂ ಇದೇ ಪ್ರದೇಶದಲ್ಲಿದ್ದು, ಅದಕ್ಕೂ ಹಾನಿಯಾಗಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications