Muddebihal Elections: ಕಾಂಗ್ರೆಸ್ ಪ್ರಾಬಲ್ಯ ಕೊನೆ, ಈ ಸಲವು ಗೆಲ್ಲಲು ಬಿಜೆಪಿ ಪ್ಲಾನ್, ಕಾಂಗ್ರೆಸ್‌ ತಂತ್ರವೇನು?

ಬೆಂಗಳೂರು, ಮಾರ್ಚ್ 24: ಮುದ್ದೇಬಿಹಾಳ ಇದು ಕರ್ನಾಟಕ ರಾಜ್ಯದ ಒಟ್ಟು 224 ಕ್ಷೇತ್ರಗಳಲ್ಲಿ ಹಾಗೂ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. 2018ರ ಒಮ್ಮೆ ಹೊರತಾಗಿ ಇತಿಹಾಸದಲ್ಲೇ ಬಿಜೆಪಿಗೆ ಈ ಕ್ಷೇತ್ರದ ಆಡಳಿತ ಚುಕ್ಕಾಣೆ ಹಿಡಿಯುವ ಅವಕಾಶ ಲಭಿಸಿರಲಿಲ್ಲ.

ತಾಲೂಕು ಕೇಂದ್ರವಾಗಿರುವ ಮುದ್ದೇಬಿಹಾಳವು, ಶಿಕ್ಷಣ, ವ್ಯಾಪಾರ ಕೇಂದ್ರವು ಆಗಿದೆ. ವಿಜಯಪುರ ಜಿಲ್ಲೆಯ ಪಡುಮೂಲೆಯಲ್ಲಿರುವ ಈ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಎರಡು ವ್ಯಾಪಾರ ಕೇಂದ್ರಗಳಾಗಿವೆ. 1670ರಲ್ಲಿ ಹುಚ್ಚಪ್ಪ ಮನೆತನದವರು ಇಲ್ಲಿ ಕೋಟೆ ಕಟ್ಟಿದ್ದು, ಅಲ್ಲಿಂದ ಈ ಕೇಂದ್ರ ಆರಂಭವಾಯಿತು ಎಂಬ ಪ್ರತೀತಿ ಇದೆ.

muddebihal-karnataka-elections-2023-analysis

ಉತ್ತರ ಕರ್ನಾಟಕ ಭಾಗದ ಗಡಿಯಲ್ಲಿ ಬರುವ ಈ ಮುದ್ದೇಬಿಹಾಳವು ಉತ್ತರಕ್ಕೆ ಸಿಂದಗಿ ಜಿಲ್ಲೆ, ಪಶ್ಚಿಮಕ್ಕೆ ಬಸವನ ಬಾಗೇವಾಡಿ ಇದೆ. 32 ಗ್ರಾಮ ಪಂಚಾಯಿತಿ ಒಳಗೊಂಡ ಬೃಹತ್ ಕೇಂದ್ರವು ಆಗಿದೆ. ಧಾರ್ಮಿಕವಾಗಿ, ಜಾನಪದ, ಕಲೆ-ಸಾಂಸ್ಕೃತಿಕವಾಗಿ ಹೆಸರು ಮಾಡಿರುವ ಈ ಕ್ಷೇತ್ರದ ಜನರು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿ ನಿಂಬೆ, ದಾಳಿಂಬೆ, ದ್ರಾಕ್ಷಿ, ಸೂರ್ಯಕಾಂತಿ, ಉಳ್ಳಾಗಡ್ಡಿ ಸೆರಿದಂತೆ ಇನ್ನಿತರ ಆಹಾರ ಉತ್ಪನ್ನ ಬೆಳೆಯುತ್ತಾರೆ.

2018ರಲ್ಲಿ ಮಾತ್ರ ಕಾಂಗ್ರೆಸ್‌ ವಿಫಲ

ಈ ಕ್ಷೇತ್ರದ ರಾಜಕೀಯ ಇತಿಹಾಸ ನೋಡುವುದಾದರೆ, ಇಲ್ಲಿ ಕಾಂಗ್ರೆಸ್‌ ಪಕ್ಷ ಪ್ರಾಬಲ್ಯವಿದೆ. ಸ್ವಾತಂತ್ರ್ಯಾ ನಂತರದಿಂದಲೂ ಈವರೆಗೆ ಬಹುತೇಕ ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳೇ ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆ ಅಂತಲೂ ಮುದ್ದೇಬಿಹಾಳ ಕ್ಷೇತ್ರವನ್ನು ಕರೆಯುತ್ತಾರೆ. ಆದರೆ ಕಾಂಗ್ರೆಸ್‌ ಇಲ್ಲಿ 2018ರಲ್ಲಿ ಗೆಲ್ಲುವಲ್ಲಿ ವಿಫಲವಾಗಿದ್ದು, ಈ ಸಲ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ.

ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿ ಕಳೆದ ಬಾರಿಯಂತೆ ಈ ಸಲವು ಗೆಲ್ಲಲ್ಲು ಸರ್ವಸನ್ನದ್ಧರಾಗಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ತಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಸಹಿತ ಜನರ ಮುಂದೆ ನಿಂತು ಮತಯಾಚನೆಗೆ ನಿರ್ಧರಿಸಿದ್ದಾರೆ. ಪನಃ ಕಮಲ ಪಕ್ಷದಿಂದ ಚುನಾವಣೆ ಎದುರಿಸಲು ಅಗತ್ಯ ಸಿದ್ಧತೆಯನ್ನು ಅವರು ಮಾಡಿಕೊಂಡಿದ್ದಾರೆ. ಶಾಸಕರಿಗೆ ಹೋಲಿಕೆ ಮಾಡಿದರೆ ವಿಪಕ್ಷಗಳ ಅಭ್ಯರ್ಥಿಗಳು/ಸ್ಪರ್ಧಿಗಳು ನಡಹಳ್ಳಿ ಅವರಿಂಗಿಂತ ಸಾಕಷ್ಟು ಪಟ್ಟು ಹಿಂದಿದ್ದಾರೆ. ಹೀಗಾಗಿ ಈ ಬಾರಿಯು ಇಲ್ಲಿ ಕಮಲ ಅರಳುವ ನಿರೀಕ್ಷೆ ಎಂಬ ಮಾತುಗಳು ಕೇಳಿ ಬಂದಿವೆ.

muddebihal-karnataka-elections-2023-analysis

ಕಾಂಗ್ರೆಸ್‌-ಬಿಜೆಪಿಗೆ ಬೀಗ್ ಫೈಟ್

ಕಾಂಗ್ರೆಸ್‌ನಿಂದ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಹಾಗೂ ಗುತ್ತಿಗೆದಾರ, ಸಮಾಜಸೇವಕ ಎಂ.ಎನ್‌.ಮದರಿ ಟಿಕೆಟ್ ಬಯಸಿದ್ದಾರೆ. ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ 'ಪ್ರಜಾಧ್ವನಿ' ಸಮಾವೇಶದಲ್ಲಿ ಕಾಂಗ್ರೆಸ್‌ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 'ನಾಡಗೌಡರಿಗೆ ಆಶೀರ್ವದಿಸಿ' ಎಂದು ಹೇಳಿದ್ದರು. ಇದು ಪಕ್ಷದೊಳಗಿನ ಅಸಮಧಾನಕ್ಕೆ ಕಾರಣವಾಗಿತ್ತು. ಸಮಾವೇಶದಲ್ಲಿ ಅಪ್ಪಾಜಿ ನಾಡಗೌಡ ಅವರು ಇದು ನನ್ನ ಕೊನೆಯ ಚುನಾವಣೆ ಎನ್ನುವ ಮೂಲಕ ಅನುಕಂಪದ ಒಲೈಕೆಗೆ ಮುಂದಾಗಿದ್ದರು.

ಇನ್ನೂ ಇಲ್ಲಿ ಜೆಡಿಎಸ್ ಮುಖಪರಿಚಯವೇ ಇಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಡಾ.ಸೋಲಾಪುರಕರ್ ಎಂಬುವವರನ್ನು ಚುನಾವಣೆ ಅಖಾಡಕ್ಕೆ ಇಳಿಸಿದೆ. ಬಿಜೆಪಿಯ ನಾಯಕ ಮತ್ತು ಹಾಲಿ ಶಾಸಕ ‌ಪಾಟೀಲ ನಡಹಳ್ಳಿ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ಸಿ.ಎಸ್‌.ನಾಡಗೌಡ ಅವರ ನಡುವೆ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಉಂಟಾಗುವ ಲಕ್ಷಣಗಳು ಇವೆ. ಪುನಃ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಸಜ್ಜಾಗುತ್ತಿದೆ.

ಅಭಿವೃದ್ಧಿಯಿಂದಲೇ ಬಿಜೆಪಿಗೆ ಜನಮನ್ನಣೆ

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದ್ದಕ್ಕೆ ಕಾಂಗ್ರೆಸ್‌ ಕಣ್ಣು ಕೆಂಪಾಗಿದೆ. ಈ ಬಾರಿ ಹೇಗಾದರೂ ಮಾಡಿ ತಮ್ಮ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಸನ್ನದ್ಧವಾಗಿದೆ. ಆದರೆ ಹಾಲಿ ಶಾಸಕ ನಡಹಳ್ಳಿಯ ರಾಜ್ಯ ಸರ್ಕಾರದಿಂದ ಅತ್ಯಧಿಕ ಅನುದಾನ ತಂದು ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹೀಗಾಗಿ ಜನರ ಗಮನ ಅವರ ಮೇಲೆ ನೆಟ್ಟಿದೆ ಎನ್ನಲಾಗಿದೆ.

muddebihal-karnataka-elections-2023-analysis

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ (2018)

ಒಟ್ಟು ಮತದಾರರು - 2,00,882

ಪುರುಷರು - 1,03,038

ಮಹಿಳೆಯರು- 97,844

ಮುದ್ದೇಬಿಹಾಳ ಫಲಿತಾಂಶ ಪಟ್ಟಿ

ವರ್ಷ ಗೆದ್ದವರು ಮತಗಳು ಸೋತವರು ಮತಗಳು

2018 ಎಎಸ್‌ ಪಾಟೀಲ್ ನಡಹಳ್ಳಿ 63,512 ಅಪ್ಪಾಜಿಗೌಡ 54,8733

2013 ಚನ್ನಬಸವರಾಜ ನಾಡಗೌಡ 34,747 ವಿಮಲಾಬಾಯಿ ಜೆ.ದೇಶಮುಖ 22,545

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+