ಮಂಗಳೂರಿನಲ್ಲಿ ಕಾರ್ಗಿಲ್ ಯೋಧನಿಗೆ ಭವ್ಯ ಸ್ವಾಗತ
ಮಂಗಳೂರು, ಆಗಸ್ಟ್, 10 : ಪರಮ ವೀರ ಚಕ್ರ ಪುರಸ್ಕೃತ ಯೋಗಿಂದರ್ ಸಿಂಗ್ ಶನಿವಾರ ಮಂಗಳೂರಿಗೆ ಆಗಮಿಸಿದ್ದು, ಅವರನ್ನು ಯುವ ಬ್ರಿಗೇಡ್ ಮುಖಂಡ ಮಂಗಲ್ಪಾಡಿ ನರೇಶ್ ಶೆಣೈ ಹಾರ್ದಿಕವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿಂದರ್ ಅವರು ಪ್ರಪಂಚದೆಲ್ಲೆಡೆ ಸೈನಿಕರ ಬಗ್ಗೆ ಪೂಜನೀಯ ಭಾವ ಇದೆ. ಇತ್ತೀಚಿನ ದಿನಗಳಲ್ಲಿ ಯೋಧರ ತ್ಯಾಗ, ಬಲಿದಾನ ಅರ್ಥಮಾಡಿಕೊಂಡ ಭಾರತ ಯೋಧರ ಸೇವೆ ಗುರುತಿಸಿ, ಗೌರವಿಸುವ ಪ್ರವೃತ್ತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್ ನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.[[ಕಾಲೇಜು ಎಲೆಕ್ಷನ್ ಬ್ಯಾನರ್ ಆದ ಮಂಗಳೂರು ಎಂಜಿ ರಸ್ತೆ ಸೂಚನಾ ಫಲಕ]

ಯುವ ಬ್ರಿಗೇಡ್ ನ ಮುಂಖಡರಾದ ನರೇಶ್ ಶೆಣೈ ಅವರು ಸದೃಢ ದೇಶಕ್ಕಾಗಿ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯೂ ಯೋಧನಾಗುತ್ತಾನೆ. ಗಡಿಯಲ್ಲಿ ಹೋರಾಡುವ ಅವಕಾಶ ಸಿಗಲಿಲ್ಲ ಎಂದು ಕೊರಗುವುದಕ್ಕಿಂತ ರಾಷ್ಟ್ರಕ್ಕಾಗಿ ಪ್ರಾಣ ಅರ್ಪಿಸಿದ ಸೈನಿಕರನ್ನು ಗೌರವಿಸುವ ಮೂಲಕ, ಅವರ ತ್ಯಾಗವನ್ನು ಸ್ಮರಿಸುವುದರ ಮೂಲಕ ಅವರ ಹೋರಾಟದ ಸ್ಥೈರ್ಯವನ್ನು ಹೆಚ್ಚಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ತಿಳಿಸಿದರು.
ಯುದ್ದ ಭೂಮಿಯಲ್ಲಿ ಸೈನಿಕರು ಹುಟ್ಟಿರುವುದು ವೀರ ಮರಣವನ್ನಪ್ಪಲು ಎಂದು ತೀರ್ಮಾನಿಸಿಯೇ ಎದುರಾಳಿಗೆ ಎದೆಯೊಡ್ಡಿ ನಡೆಯುತ್ತಾರೆ. ಯಾವ ಯೋಧರು ಬಿರುದು, ಸನ್ಮಾನಗಳನ್ನು ಬಯಸುವುದಿಲ್ಲ, ಅವರ ಚಿತ್ತ ಯಾವಾಗಲೂ ಭಾರತಾಂಬೆಯ ರಕ್ಷಣೆ ಕಡೆಗೆ ಇರುತ್ತದೆ.
ಯೋಧನನ್ನು ಗೌರವಿಸುವುದೆಂದರೆ ಭಾರತಾಂಬೆಯನ್ನು ಗೌರವಿಸಿದಂತೆ. ಸೈನಿಕರನ್ನು ಸನ್ಮಾನಿಸುವುದು ಈ ಮಣ್ಣಿನ ಗುಣ. ಭರತ ಭೂಮಿಯಲಿ ಹುಟ್ಟಿದ ನಮ್ಮ ಜನ್ಮ ಸಾರ್ಥಕವಾಗಬೇಕಾದರೆ ಸಾಧ್ಯವಾದಷ್ಟು ಸೈನಿಕರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ. ಅಂತಹ ಒಂದು ಶ್ರೇಷ್ಠ ಕಾರ್ಯಕ್ಕೆ ನಮ್ಮ ತನು ಮನ ಸಿದ್ಧಗೊಳಿಸೋಣ ಎಂದು ಕರೆ ನೀಡಿದರು.
ಈ ಅಪರೂಪದ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥೆಯ ಸದಸ್ಯರು, ಯುವ ಬ್ರಿಗೇಡ್ ನ ಮಾರ್ಗದರ್ಶಕರಾಗಿರುವ ಚಕ್ರವರ್ತಿ ಸೂಲಿಬೆಲೆ ಮತ್ತು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.












Click it and Unblock the Notifications