'ವಿಜ್ಞಾನಿಗಳಿಗೆ ಅಪಮಾನ ಮಾಡುತ್ತಿರುವ ರಾಜ್ಯ ಸರ್ಕಾರ?
ಮಂಗಳೂರು, ಅಕ್ಟೋಬರ್. 23: ಎತ್ತಿನಹೊಳೆ ಯೋಜನೆಯ ಸಕಲ ಅಂಶಗಳನ್ನು ಕೂಲಂಕಷವಾಗಿ ಸಂಶೋಧನೆಗೊಳಪಡಿಸಿ ಸತ್ಯನಿಷ್ಠ ವರದಿ ಸಿದ್ಧಪಡಿಸಿದ್ದ ವಿಜ್ಞಾನಿ ಡಾ. ಟಿ.ವಿ ರಾಮಚಂದ್ರ ಮತ್ತು ತಂಡಕ್ಕೆ ಸರ್ಕಾರ ಅಪಮಾನ ಮಾಡುತ್ತಿದೆ ಎಂದು ಮಂಗಳೂರಿನ ಸಿಟಿಜನ್ಸ್ ಕೌನ್ಸಿಲ್ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೌನ್ಸಿಲ್ ನ ಸಂಚಾಲಕ ನರೇಶ್ ಶೆಣೈ, ಎತ್ತಿನಹೊಳೆ ಹೋರಾಟವನ್ನು ಚಳವಳಿಯಾಗಿ ರೂಪಿಸಲು ಕರಾವಳಿ ಭಾಗದ ಜನ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ . ಇದೇ ಹಿನ್ನೆಲೆಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿ ರಾಮಚಂದ್ರ ಅವರನ್ನು ಕರೆಸಿ ಮಂಗಳೂರಿನಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಜತೆಗೆ ಅವರ ತಂಡ ಹೊರ ತಂದ ವರದಿಯನ್ನು ಚರ್ಚೆ ಮಾಡಲಾಗಿತ್ತು. ಸರ್ಕಾರಕ್ಕೆ ವರದಿಯನ್ನು ನೀಡಲಾಗಿತ್ತು.[ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಆತುರ ಬೇಡ]

ತಂಡದ ವರದಿಗೆ ರಾಜ್ಯ ಸರ್ಕಾರ ಯಾವುದೇ ಬೆಲೆ ನೀಡುತ್ತಿಲ್ಲ. ಟಿ.ವಿ ರಾಮಚಂದ್ರರ ಮೇಲೆ ಇಲ್ಲ ಸಲ್ಲದ ಆರೋಪ, ಅಪಪ್ರಚಾರಗಳನ್ನು ಮಾಡಲು ತೊಡಗಿದೆ. ರಾಮಚಂದ್ರ ಅವರು ಪತ್ರ ಬರೆದರೂ ಉತ್ತರಿಸುವ ಸೌಜನ್ಯ ತೋರುತ್ತಿಲ್ಲ ಎಂದು ಆರೋಪಿಸಿದರು.[ಕರಾವಳಿಗರಿಗೆ ಎತ್ತಿನ ಹೊಳೆ ಬೇಡ]
ಇದು ದೇಶದ ವಿಜ್ಞಾನಿಗಳಿಗೆ, ಕರಾವಳಿಗರಿಗೆ ಮಾಡಿದ ಅವಮಾನ. ಇಂಥ ಕ್ರಮವನ್ನು ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಖಂಡಿಸಲಾಗುವುದು ಎಂದು ನರೇಶ್ ಶೆಣೈ ಎಚ್ಚರಿಸಿದ್ದಾರೆ.












Click it and Unblock the Notifications