• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ:ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ

|

ಮಂಗಳೂರು, ಮಾರ್ಚ್ 03:ವಾಯುದಾಳಿಯಿಂದ ಬಿಜೆಪಿಗೆ ಲಾಭ ಎಂದು ಯಡಿಯೂರಪ್ಪ ಹೇಳಿಕೆ ಕೊಟ್ಟಿರುವುದು ಅವರ ವೈಯುಕ್ತಿಕ ಹೇಳಿಕೆ.ಯಡಿಯೂರಪ್ಪ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿಚಾರವನ್ನು ಬಿಜೆಪಿಯ ಅಗ್ರಗಣ್ಯ ನಾಯಕರು ಮಾತನಾಡುತ್ತಾರೆ. ಮುಂಬೈ ಮೇಲೆ ಉಗ್ರರ ದಾಳಿ ಸಂದರ್ಭ ಕಾಂಗ್ರೆಸ್ ಬೇಜವಾಬ್ದಾರಿಯಾಗಿ ನಡೆದುಕೊಂಡಿತ್ತು. ಈಗ ಮೋದಿ ಸರ್ಕಾರಕ್ಕೆ ಪಾಠ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಯ್ಯೋ, ನಾ ಹೇಳಿದ್ದು ಹಾಗಲ್ಲ ಹೀಗೆ ಎಂದರಪ್ಪ ಯಡಿಯೂರಪ್ಪ

ನಾವು ಸೇನಾ ದಾಳಿಯ ರಾಜಕೀಯ ಲಾಭ ಪಡೆಯುತ್ತಿಲ್ಲ. ಆದರೆ ಕಾಂಗ್ರೆಸ್ ನ ಪ್ರಶ್ನೆಗೆ ಉತ್ತರವನ್ನು ಕೊಡುತ್ತಿದ್ದೇವೆ. ವಿಪಕ್ಷಗಳಿಗೆ ಹೇಗೆ ದಾಳಿಯಾಗಿದೆ ಅಂತ ಗೊತ್ತು. ಆದರೆ ಪರಿಸ್ಥಿತಿ ಲಾಭ ಪಡೆದುಕೊಳ್ಳುತ್ತಿದೆ. ಈ ಹಿಂದೆ ಸೇನಾ ಸಾಮಾಗ್ರಿ ಖರೀದಿ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿತ್ತು. ಈಗ ಯಾಕೆ ಅಂತಾ ಗೊತ್ತಾಗುತ್ತಿದೆ. ವಿಪಕ್ಷ ಗಳು ಏರ್ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷ್ಯ ಕೇಳುತ್ತಿದೆ. ಆದರೆ ಸ್ವತಃ ಜೈಷ್ ಮಹಮ್ಮದ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಮಸೂರ್ ಅಜರ್ ಬಾಲ್‌ಕೋಟ್ ನಲ್ಲಿ ಶಿಬಿರ ಧ್ವಂಸವಾಗಿದೆ ಅಂತಾ ಹೇಳಿದ್ದಾನೆ. ಇದು ಸೇನಾ ದಾಳಿಗೆ ಅತೀ ದೊಡ್ಡ ಸಾಕ್ಚ್ಯ ಎಂದು ಮೀನಾಕ್ಷಿ ಲೇಖಿ ತಿಳಿಸಿದರು.

English summary
BJP lawmaker Meenakshi Lekhi said that Yeddyurappa's statement does not related to BJP. That's their personal statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X