ಅನಾರೋಗ್ಯದ ಹಿನ್ನೆಲೆಯಲ್ಲಿ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ

ಮಂಗಳೂರು, ಆಗಸ್ಟ್ 02: ಬಾವಿಗೆ ಹಾರಿ ತಾಯಿ - ಮಗಳು ಅತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರ ಹೊರವಲಯದ ಮುಲ್ಕಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ.

ಸುಜಾತ(48), ಕೃತಿಕಾ(5) ಅತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. 5 ವರ್ಷದ ಬಾಲಕಿ ಕೃತಿಕಾ ಕಳೆದ ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತಿದ್ದಳು. ಈ ಹಿನ್ನೆಲೆಯಲ್ಲಿ ತಾಯಿ ಸುಜಾತ ನೊಂದಿದ್ದು, ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಇದೇ ಕಾರಣ ಎಂದು ಹೇಳಲಾಗುತ್ತಿದೆ.

woman commits suicide with 5 year old child in Mangaluru

ಇಂದು ಗುರುವಾರ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ತಾಯಿ ಸುಜಾತಾ ಮಗಳು ಕೃತಿಕಾ ನೊಂದಿಗೆ ಮನೆಯ ಬಾವಿಗೆ ಹಾರಿದ್ದಾರೆ. ಪತಿ ಸುರೇಶ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಮುಂಜಾನೆ ಬ್ಯಾಂಕ್ ಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

woman commits suicide with 5 year old child in Mangaluru

ಮೂಲ್ಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+