ಮಧ್ಯರಾತ್ರಿ ಮಂಗಳೂರಿಗೆ ಬಂದು ಕೇರಳಕ್ಕೆ ಹೋದ ಯೋಗಿ ಆದಿತ್ಯನಾಥ್
ಮಂಗಳೂರು, ಅಕ್ಟೋಬರ್ 4: ಕೇರಳದ ಪಯ್ಯನೂರಿನಿಂದ ತಿರುವನಂತಪುರಂವರೆಗೆ ಆಯೋಜಿಸಲಾಗಿರುವ 15 ದಿನಗಳ ಪಾದಯಾತ್ರೆ 'ಜನರಕ್ಷಾ ಯಾತ್ರೆ'ಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು, ಅ. 03ರ ರಾತ್ರಿ 11:45ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದರು.
ಆ ಸಂದರ್ಭದಲ್ಲಿ, ವಿಮಾನ ನಿಲ್ದಾಣದಲ್ಲಿ ಅವರನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬರಮಾಡಿಕೊಂಡರು. ಆನಂತರ, ಯೋಗಿ ಆದಿತ್ಯನಾಥ್ ಅವರು ಕೇರಳದ ಕಣ್ಣೂರಿಗೆ ರಸ್ತೆ ಮಾರ್ಗದ ಮೂಲಕ ತೆರಳಿದರು.

ಅಕ್ಟೋಬರ್ 3 ಅಂದರೆ ನಿನ್ನೆಯಿಂದ ಜನರಕ್ಷಾ ಯಾತ್ರೆ ಆರಂಬವಾಗಿದೆ. ನಿನ್ನೆ ಪಯ್ಯನೂರಿನಲ್ಲಿ ಜನರಕ್ಷಾ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದ್ದರು. ಇಂದು ಕೇಚೇರಿಯಿಂದ ಕಣ್ಣೂರಿನವರೆಗೆ ಪಾದಯಾತ್ರೆ ನಡೆಯಲಿದ್ದು, ಇದರ ನೇತೃತ್ವವನ್ನು ಯೋಗಿ ಆದಿತ್ಯನಾಥ್ ವಹಿಸಿಕೊಂಡಿದ್ದಾರೆ.
ಪಾದಯಾತ್ರೆ ಅಕ್ಟೋಬರ್ 17ರಂದು ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಕೊನೆಗೊಳ್ಳಲಿದೆ. ಕೇರಳದಲ್ಲಿ ನಡೆದಿರುವ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ ಖಂಡಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಯೋಗಿ ಸಿಪಿಐಎಂ ಆಹ್ವಾನ
ಕೇರಳಕ್ಕೆ ಯೋಗಿ ಆದಿತ್ಯನಾಥ್ ಬರುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಸಿಪಿಐಎಂ, "ಯೋಗಿ ಆದಿತ್ಯನಾಥ್ ರನ್ನು ಕೇರಳದ ಆಸ್ಪತ್ರೆಗಳಿಗೆ ಸ್ವಾಗತಿಸುತ್ತೇವೆ. ಆಸ್ಪತ್ರೆಗಳಿಗೆ ಅವರು ಭೇಟಿ ನೀಡಿ ಪರಿಣಾಮಕಾರಿಯಾಗಿ ಆಸ್ಪತ್ರೆಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಲಿ," ಎಂದು ಕಿಚಾಯಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೇರಳ ವಿಶ್ವವಿಖ್ಯಾತಿ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
We invite UP CM Yogi to visit Kerala Hospitals to learn how to run Hospitals effectively! https://t.co/SzNsMVCDp8
— CPI (M) (@cpimspeak) October 3, 2017












Click it and Unblock the Notifications