Loudspeaker row; 1001 ಸ್ಥಳಗಳಿಗೆ ಮಂಗಳೂರು ಪೊಲೀಸರ ನೋಟಿಸ್

ಮಂಗಳೂರು, ಏಪ್ರಿಲ್ 06; ಮಸೀದಿಗಳಲ್ಲಿ ಮೈಕ್ ಬಳಕೆ ಬಗ್ಗೆ ಕರ್ನಾಟಕದಲ್ಲಿ ಚರ್ಚೆಗಳು ಜೋರಾಗಿವೆ. ಇಂತಹ ಸಂದರ್ಭದಲ್ಲಿಯೇ ರಾಜ್ಯ ಪೊಲೀಸ್ ಇಲಾಖೆ ನಿಯಮ ಮೀರಿ ಸದ್ದು ಮಾಡುತ್ತಿರುವ ಧಾರ್ಮಿಕ ಕೇಂದ್ರಗಳ ಮೈಕ್‌ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಮ್ಮ ಕಮಿಷನೇಟರ್ ವ್ಯಾಪ್ತಿಯ ಸಾವಿರದ ಒಂದು ಕೇಂದ್ರಗಳಿಗೆ ಮೈಕ್ ಸದ್ದು ಮಾಡುವ ಬಗ್ಗೆ ನೊಟೀಸ್ ಕಳುಹಿಸಿದ್ದಾರೆ. 1986ರ ಕಾಯ್ದೆಯ ಅನ್ವಯ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದಮಾಲಿನ್ಯ ಉಂಟು ಮಾಡುವ 1001 ಸ್ಥಳಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 1001 ಧಾರ್ಮಿಕ‌ ಮತ್ತು ಖಾಸಗಿ ಸ್ಥಳಗಳನ್ನು ಗುರುತು ಮಾಡಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತಾಲಯದಿಂದ ಈ ಕೇಂದ್ರಗಳಿಗೆ ನೊಟೀಸ್ ಜಾರಿಯಾಗಿದೆ. ಪರಿಸರ ಅರಣ್ಯ ಸಚಿವಾಲಯದ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ 1986ರ ಕಾಯ್ದೆಯ ಅನ್ವಯ ನಿಗದಿತ ಡೆಸಿಬಲ್ ಗಳಿಗಿಂತ ಹೆಚ್ಚಿನ ಶಬ್ದ ಉಂಟು ಮಾಡುವಂತಿಲ್ಲ.

Mangaluru Using The Loudspeakers Police Issued Notice

ಈ ಹಿನ್ನೆಲೆಯಲ್ಲಿ ಈ ನಿಯಮ ಉಲ್ಲಂಘಿಸಬಾರದೆಂದು ನಾಲ್ಕು ವಿಭಾಗಗಳಲ್ಲಿ ನೊಟೀಸ್ ಜಾರಿ ಮಾಡಲಾಗಿದೆ. ಇಂಡಸ್ಟ್ರಿಯಲ್ ಏರಿಯಾ, ಕಮರ್ಷಿಯಲ್ ಏರಿಯಾ, ರೆಸಿಡೆನ್ಷಿಯಲ್ ಏರಿಯಾ ಹಾಗೂ ಸೈಲೆನ್ಸ್ ಝೋನ್ ಎಂದು ವಿಭಾಗಿಸಿ ನೊಟೀಸ್ ಜಾರಿಗೊಳಿಸಲಾಗಿದೆ. ಈ ವಿಭಾಗದಲ್ಲಿ 357 ದೇವಸ್ಥಾನಗಳು, 168 ಮಸೀದಿಗಳು, 95 ಚರ್ಚ್‌ಗಳಿಗೆ ನೋಟಿಸ್ ಜಾರಿಮಾಡಲಾಗಿದೆ.

ಜೊತೆಗೆ 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98 ಮನೋರಂಜನಾ ಸ್ಥಳಗಳು, 68 ಮದುವೆ, ಕಾರ್ಯಕ್ರಮ ಹಾಲ್‌ಗಳು, 49 ಸಾರ್ವಜನಿಕ ಸ್ಥಳಗಳಿಗೂ ನೊಟೀಸ್ ಜಾರಿಯಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ ಸಮಯ ಮತ್ತು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗಿನ ಸಮಯ ಅಂತಾ ವಿಂಗಡನೆ ಮಾಡಲಾಗಿದೆ.

ಹಗಲು ಮತ್ತು ರಾತ್ರಿ ಮೈಕ್ ಸದ್ದು ಎಷ್ಟಿರಬೇಕು ಎಂಬ ನಿಯಮವೂ ಇದೆ. ಆ ನಿಯಮಗಳ ಅನುಸಾರವಾಗಿ ನೊಟೀಸ್ ಕಳುಹಿಸಲಾಗಿದೆ. ಇನ್ನು ನೊಟೀಸ್ ಜಾರಿಯಾದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎನ್. ಶಶಿಕುಮಾರ್, "ಮಸೀದಿ ಆಜಾನ್ ಅನ್ನು ಗುರಿಯಾಗಿಸಿಕೊಂಡು ಈ ನೊಟೀಸ್ ಜಾರಿಯಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ನೊಟೀಸ್ ಜಾರಿಯಾಗಿಲ್ಲ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+