ಮಂಗಳೂರಲ್ಲಿ ಕಾರಿನ ಗಾಜು ಒಡೆದ್ರು, 5 ಲಕ್ಷ ದೋಚಿದ್ರು

ಮಂಗಳೂರು, ಅಕ್ಟೋಬರ್, 16 : ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ಐದು ಲಕ್ಷ ರೂ. ಕಳವು ಮಾಡಿದ ಘಟನೆ ಅಕ್ಡೋಬರ್ 15ರ ಗುರುವಾರದಂದು ಬೆಳಗಿನ ವೇಳೆಯಲ್ಲಿ ಜನನಿಬಿಡ ಪ್ರದೇಶವಾದ ಮಂಗಳೂರಿನ ಕೆ.ಎಸ್.ರಾವ್ ರಸ್ತೆ ಬಳಿ ಈ ಘಟನೆ ನಡೆದಿದೆ.

ಬಂಟ್ವಾಳ ಮೂಲದ ವಕೀಲ ಅರುಣ್ ಶೆಟ್ಟಿ ಐದು ಲಕ್ಷ ಕಳೆದುಕೊಂಡ ವ್ಯಕ್ತಿ. ಇವರು ಕೆ.ಎಸ್. ರಾವ್ ರಸ್ತೆಯಲ್ಲಿರುವ ಎಕ್ಸೆಲ್ ಮಾಲ್ ನ ಜೋಯ್ ಅಲುಕ್ಕಾಸ್ ಚಿನ್ನಾಭರಣ ಮಳಿಗೆ ಮುಂಭಾಗ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಈ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.[ಬೆಂಗಳೂರು: ಉದ್ಯಮಿಗೆ ಕಾರ್ ಬಾನೆಟ್ ತೋರಿಸಿ 15 ಲಕ್ಷ ದೋಚಿದ!]

Two thieves are hitting car window and stolen 5 lakh rs in Mangaluru

ಯಾರು ಇಲ್ಲದ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ, ಬೈಕಿನಲ್ಲಿ ಬಂದ ಇಬ್ಬರು ಖದೀಮರು ಕಾರಿನ ಹಿಂದಿನ ಬಾಗಿಲ ಗಾಜು ಒಡೆದು 5 ಲಕ್ಷ ನಗದನ್ನು ದೋಚಿ ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ. ಕಳ್ಳರ ಜಾಲಕ್ಕಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.[ಗಾಡಿ ಪಂಚರ್ ಎಂದು ಕೆಳಕ್ಕೆ ಬಗ್ಗಿದರೆ 15ಲಕ್ಷ ರು. ಮಂಗಮಾಯ!]

ಈ ಪ್ರಕರಣ ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಜೋಯ್ ಅಲುಕ್ಕಾಸ್ ನಲ್ಲಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮರದ ಸಹಾಯದಿಂದ ಕಳವು ಪ್ರಕರಣದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಕೆಲವು ದಿನಗಳಲ್ಲಿ ಕಳ್ಳರನ್ನು ಪತ್ತೆ ಮಾಡುವ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+