ಸೌದಿಯಲ್ಲಿ ಕುರಿಕಾಯುವ ಕೆಲಸದಿಂದ ಮುಕ್ತಿ ಪಡೆದ ಮಂಗಳೂರಿಗರು

ಕೆಲವು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಕಷ್ಟಕ್ಕೀಡಾಗಿ ಕಂಗಾಲಾಗಿದ್ದ ಕರಾವಳಿಯ ಇಬ್ಬರು ಯುವಕರನ್ನು ಕಳುಹಿಸಲು ಬೇಕಾದ ಕಾನೂನು ಪ್ರಕ್ರಿಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕೈಗೆತ್ತಿಕೊಂಡಿದೆ.

ಮಂಗಳೂರು, ಮೇ 24: ಕೆಲವು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಕಷ್ಟಕ್ಕೀಡಾಗಿ ಕಂಗಾಲಾಗಿದ್ದ ಕರಾವಳಿಯ ಇಬ್ಬರು ಯುವಕರನ್ನು ಕಳುಹಿಸಲು ಬೇಕಾದ ಕಾನೂನು ಪ್ರಕ್ರಿಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕೈಗೆತ್ತಿಕೊಂಡಿದೆ.

ಗಂಜಿಮಠ ನಿವಾಸಿ ದಾಮೋದರ ಎಂಬವರನ್ನು ಮರಳಿ ಮಂಗಳೂರಿಗೆ ಕಳುಹಿಸಲು ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಈಗಾಗಲೇ ಪ್ರಗತಿಯಲ್ಲಿದೆ.[ಸೌದಿಯ ಕುರಿಮಂದೆಯಲ್ಲಿ ಸಿಕ್ಕಿಕೊಂಡ ಇಬ್ಬರು ಮಂಗಳೂರಿಗರು!]

Two men from Mangaluru, trapped as shepherds in Saudi freed!

ಟೋ ಸ್ಪ್ರೇ ಪೈಂಟರುಗಳಾಗಿ ಕೆಲಸ ನಿರ್ವಹಿಸಲು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸೌದಿ ಅರೇಬಿಯಾಗೆ ಹಲವು ಕನಸುಗಳನ್ನು ಹೊತ್ತು ತೆರಳಿದ್ದ ಗಂಜಿಮಠದ ಗಾಂಧಿನಗರ ನಿವಾಸಿ ದಾಮೋದರ ಶೆಟ್ಟಿಗಾರ್ ಹಾಗೂ ಮುಲ್ಕಿಯ ಪುನೀತ್ ಜಯರಾಜ್ ಮೋಸಹೋಗಿ ಕುರಿ ಫಾರ್ಮ್ ಒಂದರಲ್ಲಿ ಕೆಲಸ ನಿರ್ವಹಿಸುವಂತಾದ್ದ ಸುದ್ದಿಯನ್ನು ನೀವು 'ಒನ್ ಇಂಡಿಯಾ'ದಲ್ಲಿ ಓದಿರುತ್ತೀರಿ.

ಮೋಸ ಹೋಗಿರುವ ಈ ಇಬ್ಬರೂ ಈಗ ತಮ್ಮ ತವರು ದೇಶಕ್ಕೆ ಮರಳಲು ಸಹಾಯ ಮಾಡುವಂತೆ ಅಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಮನವಿ ಮಾಡಿದ್ದರೂ ಯಾವ ಪ್ರಯೋಜನವಾಗಿಲ್ಲ.

ಇಬ್ಬರೂ ಕುರಿ ಫಾರ್ಮಿನಲ್ಲಿ ಬಿಸಿಲಿನ ತಾಪಕ್ಕೆ ಬಸವಳಿದಿರುವ ಹೊರತಾಗಿ ಉಪಾಯವಿಲ್ಲದೆ ದುಡಿಯುತ್ತಿದ್ದಾರೆ. ಅಲ್ಲಿ ಅವರಿಗೆ ಆಹಾರ ಒದಗಿಸಲಾಗುತ್ತಿದೆಯಾದರೂ ಇಲ್ಲಿಯ ತನಕ ವೇತನ ನೀಡಲಾಗಿಲ್ಲವೆಂದೂ ದೂರಲಾಗಿದೆ.

ಐದಾರು ತಿಗಳಿನಿಂದ ಯಾವುದೇ ಪರಿಹಾರ ಕಾಣದಾದಾಗ, ಸೋಶಿಯಲ್ ಮೀಡಿಯಾದ ಮುಖಂತರ ವಿವಿಧ ಪತ್ರಿಕೆ ಮತ್ತು ಚಾನೆಲ್ ಗಳಿಗೂ ವಿವರ ತಿಳಿಸಿದ ಪುನೀತ್ ಮತ್ತು ದಾಮೋದರ್ ಕುಟುಂಬದವರು ನೆರವಿಗಾಗಿ ಯಾಚಿಸಿದರು.

ಕೆಲ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ನು ಗಮನಿಸಿದ ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಯುವಕರು ಇರುವ ಸ್ಥಳವನ್ನು ಸಂದರ್ಶಿಸಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಭಾರತೀಯ ರಾಯಭಾರ ಕಚೇರಿಯ ಗಮನಕ್ಕೂ ಈ ವಿಷಯವನ್ನು ತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+