ಪಿಲಿಕುಳ ನಿಸರ್ಗ ಧಾಮದಲ್ಲಿ ಆಯುಷ್ ಹಬ್ಬ ಸಂಭ್ರಮ
ಮಂಗಳೂರು, ಡಿ. 20: ಆಯುರ್ವೇದ, ಯೋಗ, ಸಿದ್ದ, ಹೋಮಿಯೋಪತಿ ಒಳಗೊಂಡ ಆಯುಷ್ ಉತ್ಪನ್ನಗಳ ಪ್ರಚಾರ ಹಾಗೂ ಮಾರಾಟಕ್ಕಾಗಿ ಆಯೋಜನೆಗೊಂಡಿರುವ ಎರಡು ದಿನಗಳ ಅಯುಷ್ ಹಬ್ಬಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಿಲಿಕುಳ ದ ಡಾ. ಶಿವರಾಮ ಕಾರಂತ ನಿಸರ್ಗ ಧಾಮದಲ್ಲಿ ಆಯುಷ್ ಹಬ್ಬ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಉಚಿತ ಆಯುಷ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಆಯುಷ್ ಆರೋಗ್ಯ ಕಾರ್ಡ್ ವಿತರಣೆಗೆ ಚಾಲನೆ ನೀಡಿ, ಹಬ್ಬದಲ್ಲಿ ಭಾಗವಹಿಸಿದ ಆಸಕ್ತರಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಿದರು.[ಪಿಲಿಕುಳದಲ್ಲಿ ನೂತನ ಮತ್ಸ್ಯಾಲಯ ಆರಂಭ]
ಅಷ್ಟೇ ಅಲ್ಲದೇ ಹಬ್ಬದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ 250 ಬಗೆಯ ವಿವಿಧ ಪಥ್ಯಾಹಾರಗಳ ಪ್ರದರ್ಶನವನ್ನು ಕೂಡ ಹಮ್ಮಿಕೊಳ್ಳಲಾಯಿತು.
ಆಯುಷ್ ಆಹಾರ ಮೇಳ, ಗವ್ಯ ಚಿಕಿತ್ಸೆ, ದೇಶೀ ಗೋವು ತಳಿಗಳ ಪ್ರದರ್ಶನ, ಸೌಂದರ್ಯ ಚಿಕಿತ್ಸೆ ಬಗ್ಗೆ ಪರಿಚಯ,ಜೀವನಶೈಲಿ ನಿರ್ವಹಣೆ ಬಗ್ಗೆ ಕಾರ್ಯಾಗಾರ, ಆರೋಗ್ಯಪೂರ್ಣ ಜೀವನಕ್ಕೆ ಅಗತ್ಯ ದಿನಚರಿ, ಆಹಾರ- ವಿಹಾರಗಳ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ, ಹಬ್ಬದಲ್ಲಿ ಪಥ್ಯಾಹಾರಗಳ ಪ್ರದರ್ಶನದ ಜೊತೆಗೆ ಸುಮಾರು 40 ಬಗೆಯ ವಿವಿಧ ಪಥ್ಯಾಹಾರಗಳು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿತ್ತು.

ಅಯುಷ್ ಹಬ್ಬಕ್ಕೆ ಉತ್ತಮ ಪ್ರತಿಕ್ರಿಯೆ
ಪಿಳಿಕುಳದ ಡಾ. ಶಿವರಾಮ ಕಾರಂತ ನಿಸರ್ಗ ಧಾಮದಲ್ಲಿ ಆಯುಷ್ ಹಬ್ಬ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಉಚಿತ ಆಯುಷ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಆಯುಷ್ ಆರೋಗ್ಯ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು.

ಮಂಗರಸ 'ಸೂಪ ಶಾಸ್ತ್ರ' ವಿವರಣೆ
ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ. ಆಹಾರ ಬಳಕೆ ಅಡುಗೆ ಬಗ್ಗೆ 15ನೇ ಶತಮಾನದಲ್ಲೇ ಮಂಗರಸ 'ಸೂಪ ಶಾಸ್ತ್ರ' ದಲ್ಲಿ ವಿವರಿಸಿದ್ದಾನೆ ಎಂದು ಕಾಲೇಜಿನ ಪ್ರೊಫೆಸರ್ ರಾಘವೇಂದ್ರ ಉಡುಪ ಹೇಳಿದರು.

ಆಯುಷ್ ಹಬ್ಬದ ಅಧ್ಯಕ್ಷೆ ಸಂಭ್ರಮ
ಜಿಲ್ಲಾ ಆಯುಷ್ ಅಧಿಕಾರಿ,ಡಾ.ದೇವದಾಸ್, ಆಯುಷ್ ಹಬ್ಬದ ಅಧ್ಯಕ್ಷೆ ಡಾ.ಆಶಾಜ್ಯೋತಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ ಮೊಯ್ದೀಯಿನ್ ಬಾವಾ, ಆಯುಷ್ ಇಲಾಖೆ ನಿರ್ದೇಶಕ ಸುಭಾಷ್ ಕೆ ಮಾಲ್ಕೇಡೆ, ಹೋಮಿಯೋಪತಿ ಬೋರ್ಡ್ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ, ನಿರ್ದೇಶಕ ಪ್ರಭಾಕರ್ ಶರ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕರನ್ನು ಸೆಳೆಯುವಲ್ಲಿ ಯಶಸ್ವಿ
ಅಡುಗೆ ಮನೆ, ತಯಾರಿ, ಬಡಿಸುವುದು, ಕಾಯಿಲೆ ಮುಕ್ತ ವಾತಾವರಣದ ಬಗ್ಗೆ ಸರಳವಾಗಿ ವಿವರಣೆ ಭಾವ ಮಿಸ್ರಾ ಬರೆದ ಭಾವ ಪ್ರಕಾಶ ಕೃತಿಯಲ್ಲೂ ಸಿಗುತ್ತದೆ ಎಂದರು. ಆಯುಷ್ ಹಬ್ಬದ ಪ್ರದರ್ಶನ ಹಾಗೂ ಮಾರಾಟಕ್ಕಿರುವ ವಿವಿಧ ಬಗೆಯ ಆಹಾರ, ಆರೋಗ್ಯ ಉತ್ಪನ್ನಗಳು ಸಾರ್ವಜನಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications