ಮಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ

ಮಂಗಳೂರು, ಆಗಸ್ಟ್ 14: ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಅವರ ಭವ್ಯ ಪ್ರತಿಮೆ ಮಂಗಳೂರಿನಲ್ಲಿ ಅನಾವರಣಗೊಳಿಸಲಾಗಿದೆ.

ಮಂಗಳೂರಿನ ಬೆಂಗ್ರೆ ಕಡಲ ತೀರದ ಸುಂದರ ಪರಿಸರದಲ್ಲಿ ಈ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಪ್ರತಿಮೆಯನ್ನು ಮಹಾರಾಷ್ಟ್ರದ ಗೃಹ, ಗ್ರಾಮೀಣ, ಹಣಕಾಸು ಮತ್ತು ಯೋಜನೆ ಸಚಿವ ದೀಪಕ್ ವಸಂತ್ ರಾವ್ ಕೆಸರ್ ಕರ್ ಅನಾವರಣಗೊಳಿಸಿದರು .

ಹಿಂದೂ ಸಂಘಟನೆಗಳಿಂದ ಪ್ರತಿಷ್ಠಾಪನೆ

ಹಿಂದೂ ಸಂಘಟನೆಗಳಿಂದ ಪ್ರತಿಷ್ಠಾಪನೆ

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಬೆಂಗ್ರೆ ಘಟಕ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಶಿವಾಜಿ ಮಹಾರಾಜರ ಗುಣಗಾನ

ಶಿವಾಜಿ ಮಹಾರಾಜರ ಗುಣಗಾನ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ದೀಪಕ್ ವಸಂತ್ ರಾವ್ ಕೆಸರ್ ಕರ್ "ದೆಹಲಿಯಲ್ಲಿ ಔರಂಗಜೇಬ್ ಹಾಗೂ ಬಿಜಾಪುರದ ಸುಲ್ತಾನರನ್ನು ಕೆಳಗಿಳಿಸಲು ಶಿವಾಜಿ ಮಹಾರಾಜರು ಬರಬೇಕಾಯಿತು," ಎಂದರು.

ದಕ್ಷಿಣಕ್ಕೆ ಶಿವಾಜಿ ಪಾದಾರ್ಪಣೆ

ದಕ್ಷಿಣಕ್ಕೆ ಶಿವಾಜಿ ಪಾದಾರ್ಪಣೆ

"ಹಿಂದೂ ಸಾಮ್ರಾಜ್ಯದ ಪುನರ್ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ ಪಾದಾರ್ಪಣೆ ದಕ್ಷಿಣಕ್ಕೆ ಆಗಿರುವುದು ಸಂತಸ ತಂದಿದೆ," ಎಂದು ದೀಪಕ್ ವಸಂತ್ ರಾವ್ ಕೆಸರ್ ಕರ್ ಹೇಳಿದರು.

ಡಾ ಕಲ್ಲಡ್ಕ ಪ್ರಭಾಕರ ಭಟ್ ರಿಗೆ ವಂದನೆ

ಡಾ ಕಲ್ಲಡ್ಕ ಪ್ರಭಾಕರ ಭಟ್ ರಿಗೆ ವಂದನೆ

"ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರನ್ನು ಹೇಗೆ ಮೊದಲಿಗೆ ನೆನಪಿಸುತ್ತವೆಯೋ ಹಾಗೆ ಕರ್ನಾಟಕದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನಾನು ವಂದಿಸುತ್ತೇನೆ," ಎಂದು ವಸಂತ್ ರಾವ್ ಹೇಳಿದರು.

ಡಾ. ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತಿ

ಡಾ. ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತಿ

ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ , ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶರಣ್ ಪಂಪ್ ವೆಲ್ , ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ. ಬಿ ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+