ಕರಾವಳಿಯಲ್ಲಿ ಕಟೀಲ್ ಸ್ಥಾನಕ್ಕೆ ಕುತ್ತು? ಸಂಸದ ಸ್ಥಾನಕ್ಕೆ ಪುತ್ತಿಲ ಆಯ್ಕೆಗೆ ಕಾರ್ಯಕರ್ತರ ಅಭಿಯಾನ
ಮಂಗಳೂರು, ಮೇ 14: ವಿಧಾನಸಭಾ ಚುನಾವಣೆಯಲ್ಲಿ ಅತೀ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧೋರಣೆಗಳ ವಿರುದ್ಧ ಸೆಟೆದು ನಿಂತು ಪಕ್ಷೇತರವಾಗಿ ಸ್ಪರ್ಧಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಚುನಾವಣೆ ಯಲ್ಲಿ ಅಲ್ಪ ಮತಗಳಿಂದ ಸೋತರೂ ಮತ್ತೆ ಕಾರ್ಯಕರ್ತರ ಪ್ರೀತಿ ಗಳಿಸಿ ಗೆದ್ದಿದ್ದಾರೆ.
ಚುನಾವಣಾ ಮತ ಎಣಿಕೆಯ ಬಳಿಕ ಕೇವಲ ಪುತ್ತೂರಿಗಷ್ಟೇ ಸೀಮಿತವಾಗಿದ್ದ ಅರುಣ್ ಕುಮಾರ್ ಅಭಿಮಾನಿ ಬಳಗ ಈಗ ಇಡೀ ಜಿಲ್ಲೆಗೆ ಹಬ್ಬಿದ್ದು ಮುಂದಿನ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಅವರೇ ಆಯ್ಕೆಯಾಗಲಿ ಎಂಬ ಕೂಗು ಜೋರಾಗಿದೆ. ಪುತ್ತಿಲ ಪರ ವಾದ ವಾಟ್ಸಪ್ ಗ್ರೂಪ್‌ಗಳು ರಚನೆಯಾಗುತ್ತಿದ್ದು ಕೆಲವೇ ಗಂಟೆಗಳಲ್ಲಿ 20,000 ಅಧಿಕ ಜನರು ವಾಟ್ಸಪ್ ಗ್ರೂಪ್‌ಗಳಲ್ಲಿ ಸೇರಿಕೊಂಡು ಅಭಿಯಾನ ಆರಂಭಿಸಿದ್ದಾರೆ.

ಪಕ್ಷೇತರನಾಗಿ ನಿಂತು 62,458 ಮತ ಪಡೆದು ಅರುಣ್ ಪುತ್ತಿಲ ಇತಿಹಾಸ ಬರೆದಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಪುತ್ತಿಲ ಭರ್ಜರಿ ಸೆಣಸಾಟ ನಡೆಸಿದ್ದರು.ಪಕ್ಷೇತರನಾಗಿ ಸ್ಪರ್ಧಿಸಿ ಪುತ್ತಿಲ ವಿರೋಚಿತ ಸೋಲು ಕಂಡರೂ ಬಿಜೆಪಿ ಭದ್ರಕೋಟೆಯಲ್ಲಿ ಕೊನೆಗೂ ಪುತ್ತಿಲ ಪರ ಅಲೆ ಸಾಬೀತಾಗಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತವರಲ್ಲೇ ತೊಡೆ ತಟ್ಟಿದ್ದ ಪುತ್ತಿಲ ಹೊಸ ದಾಖಲೆ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಪಡೆದ ಅತೀ ಹೆಚ್ಚಿನ ಮತದ ದಾಖಲೆ ಪುತ್ತಿಲರದ್ದಾಗಿದ್ದು, ಕಾಂಗ್ರೆಸ್ ವಿರುದ್ದ ಕೇವಲ 4 ಸಾವಿರದಷ್ಟು ಮತದ ಅಂತರದ ಸೋಲು ಕಂಡಿದ್ದಾರೆ. ಬಿಜೆಪಿ ಬಾವುಟದ ವಿರುದ್ದ ಭಗವಾಧ್ವಜದಡಿ ಸೆಣಸಾಡಿ ಪುತ್ತಿಲ ಗೆದ್ದಿದ್ದಾರೆ. ಮಾತ್ರವಲ್ಲ ಬಿಜೆಪಿಯನ್ನು ಮಕಾಡೆ ಮಲಗಿಸಿ ಕಾಂಗ್ರೆಸ್‌ಗೂ ಭಯ ಹುಟ್ಟಿಸಿದ್ದಾರೆ.

ಇನ್ನು ಅರುಣ್ ಕುಮಾರ್ ಪುತ್ತಿಲ ಅವರನ್ನು ಸಂಸತ್ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಪುತ್ತಿಲ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪುತ್ತಿಲ ಪರವಾದ ಬರಹಗಳನ್ನು ಬರೆದು ಮೋದಿ ಗಮನಸೆಳೆಯಲು ಮುಂದಾಗಿದ್ದಾರೆ..
ಖ್ಯಾತ ಚಿಂತಕರಾದ ಆದರ್ಶ ಗೋಖಲೆ ಮತ್ತು ಅಕ್ಷಯ ಗೋಖಲೆ ಪುತ್ತಿಲ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು,ಪತ್ರದ ಸಾರಾಂಶ ಈ ಕೆಳಗಿನಂತಿದೆ.
ಪ್ರೀತಿಯ ಪಧಾನಸೇವಕ ಶ್ರೀ ನರೇಂದ್ರ ಮೋದಿ ಮಹೋದಯರಿಗೆ ಗೌರವಪೂರ್ವಕ ಪ್ರಣಾಮಗಳು, ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶವು ಹೊರಬಿದ್ದಿದ್ದು ಈ ಪ್ರಮಾಣದ ಸೋಲನ್ನು ತಾವುಪೂರ್ವದಲ್ಲಿಯೇ ನಿರೀಕ್ಷಿಸಿದ್ದಿರಬಹುದು.ದೇವದುರ್ಲಭ ನಿಸ್ವಾರ್ಥ ಕಾರ್ಯಕರ್ತರ ನೋವನ್ನು ಆಲಿಸುವ ತಾಳ್ಮೆಯೇ ಇಲ್ಲದ ತಥಾಕಥಿತ ರಾಜ್ಯ ನಾಯಕರ ಅಧಿಕಾರದ ದರ್ಪ ಹಾಗೂ ಅಹಂಕಾರದ ಮಾತುಗಳಿಗೆ ಫಲಿತಾಂಶ ಕೈಗನ್ನಡಿಯಂತಿದೆ.
ನೀವು ಮತ್ತು ಶ್ರೀ ಯೋಗಿ ಆದಿತ್ಯನಾಥರು ಕೊನೆಯ ಕ್ಷಣದಲ್ಲಿ ಭೇಟಿಯಿತ್ತು, ಕೈಮುಗಿದು ರೋಡ್ ಶೋ ನಡೆಸದೇ ಇದ್ದಿದ್ದರೆ, ಬಜರಂಗಬಲಿಯ ಜೈಕಾರ ಮೊಳಗದೇ ಇದ್ದಿದ್ದರೆ ಗೆಲುವು ಮೂವತ್ತೈದು ಕ್ಷೇತ್ರಗಳಿಗಷ್ಟೇ ಮೀಸಲಾಗುತ್ತಿತ್ತೇನೋ?
ಏನೇ ಇರಲಿ, ಪರಮವೈಭವ ಭಾರತದ ಕನಸು ಕಾಣುವ ಕಾರ್ಯಕರ್ತರ ಮನದ ಭಾವನೆಗಳನ್ನು ಗೌರವಿಸದಿದ್ದರೆ, ಪಕ್ಷದಷ್ಟೇ ವ್ಯಕ್ತಿಯೂ ಮುಖ್ಯವಾಗುವನೆಂಬುದು ನಿಮ್ಮ ಅರಿವಿಗೆ ಬರದೇ ಹೋದರೆ ಪರಿಸ್ಥಿತಿ ವ್ಯತಿರಿಕ್ತವಾಗುವುದರಲ್ಲಿ ಅನುಮಾನವಿಲ್ಲ. ರಸ್ತೆ ಮಧ್ಯದಲ್ಲಿ ಹಣವಾಗಲು ಕಾರ್ಯಕರ್ತರು ಬೇಕು, ಮತೀಯ ಸಂಘಟನೆಗಳ ವಿರುದ್ಧ ಹೋರಾಟಗಳನ್ನು ಸಂಘಟಿಸಲು ಕಾರ್ಯಕರ್ತರು ಬೇಕು, ಧ್ವಜ ಏರಿಸಲು - ಕುರ್ಚಿ ಜೋಡಿಸಲು ಕಾರ್ಯಕರ್ತರು ಬೇಕು.
ಆದರೆ ಅಭ್ಯರ್ಥಿಗಳ ಆಯ್ಕೆಯ ಸಂದರ್ಭ ಬಂದಾಗ ಕಾರ್ಯಕರ್ತರ ಕಣ್ಣಿಗೆ ಬಟ್ಟೆ ಕಟ್ಟಿ ಸ್ನೇಹಿತಾಸಕ್ತಿಯ ಸಾಧನೆಗಾಗಿ ತಮ್ಮ ವೈಯಕ್ತಿಕ
ಅಭಿಪ್ರಾಯವನ್ನೇಸಾರ್ವತ್ರಿಕವೆಂದು ಬಿಂಬಿಸುವ ನಾಯಕರಿಗೆ ಬುದ್ಧಿ ಹೇಳುವ ಕಾರ್ಯವನ್ನು ತಾವು ಮಾಡದೇ ಇದರ ಪರಿಣಾಮ ಏನಾಗುವುದೆಂಬುದಕ್ಕೆ ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಬೇಕೇ? ಕಾರ್ಯಕರ್ತನನ್ನೇ ದೇವರೆಂದು ಭಾವಿಸುವ ತಮಗೆ 'ಪುತ್ತೂರಿಗೆ ಪುತ್ತಿಲ' ಅಭಿಯಾನ ಖಂಡಿತವಾಗಿಯೂ ಗಮನಕ್ಕೆ ಬಂದಿರುತ್ತದೆ. ವೋಟ್ ಪಡೆಯಲು ನೋಟು, ಬಿರಿಯಾನಿ ನೀಡದ ಕೇವಲ ಹಿಂದುತ್ವ ಮತ್ತು ಅಭಿವೃದ್ಧಿಯ ಕನಸಿನೊಂದಿಗೆ ಪುತ್ತೂರಿನಲ್ಲಿ ಕಣಕ್ಕಿಳಿದಿದ್ದ ಶ್ರೀ ಅರುಣ್ ಕುಮಾರ ಪುತ್ತಿಲರನ್ನು ತಾವು ಅಥವಾ ತಥಾಕಥಿತ ನಾಯಕರು ಕಡೆಗಣಿಸಿದ್ದು ಸೂಕ್ತವೆಂದು ನಿಮಗೆ ಅನಿಸುವುದೇ?
ನಿಮ್ಮ ನಾಯಕರ ಹೊಂದಾಣಿಕ ರಾಜಕಾರಣವನ್ನು ಕಾರ್ಯಕರ್ತರು ವಿರೋಧಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದರೂ ತಾವು ಮೌನ ವಹಿಸಿದ್ದು ಸೂಕ್ತವೇ? ಯಾವ ಪುತ್ತೂರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಭದ್ರಕೋಟೆಯಂದು ದಕ್ಷಿಣ ಭಾರತವೇ ಗೌರವದಿಂದ ಕಾಣುವುದೋ, ಯಾವ ಪುತ್ತೂರು ಹಿಂದುತ್ವ ಮತ್ತು ದೇಶಭಕ್ತಿಯ ನೆಲವಾಗಿದೆಯೋ ಅಂತಹ ಕ್ಷೇತ್ರದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡ ಪಕ್ಷದ ತಪ್ಪನ್ನು ತಕ್ಷಣವೇ ಪರಿಹರಿಸಲು ಸಾಧ್ಯವಾಗದಿರಲು ಕಾರಣವೇನು? ಯಾವುದೇ ರಾಜಕೀಯ ಅಧಿಕಾರ ಇಲ್ಲದಿದ್ದರೂ ಕಳೆದೆರಡು ದಶಕಗಳಿಂದ ಪುತ್ತೂರಿನ ಮನೆ ಮಗನಂತೆ ಕಾರ್ಯನಿರ್ವಹಿಸಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದ ಪುತ್ತಿಲರ ಹಿಂದೆ ಆಬಾಲವೃದ್ಧ ಅಸಂಖ್ಯ ಜನ ಬೆನ್ನೆಲುಬಾಗಿ ನಿಂತದ್ದು ತಪ್ಪೇ?
ಕಾಂಗ್ರೆಸ್‌ನ ಅಭ್ಯರ್ಥಿಯೇ ಗೆಲ್ಲಬೇಕೆಂದು ಯೋಚಿಸಿ, ಅದಕ್ಕೆ ತಕ್ಕಂತೆ ಕಾರ್ಯ ಯೋಜಿಸಿ ಪಕ್ಷಕ್ಕೆ ಮೋಸ ಮಾಡಲು ನಿರ್ಧರಿಸಿದ 'ನಿರ್ಣಯ ಪ್ರಮುಖ'ರ ದೃಷ್ಟಿಯಲ್ಲಿ ಶ್ರೀ ಪುತ್ರಿಲರನ್ನು ಬೆಂಬಲಿಸುವವರು ದೇಶ ದ್ರೋಹಿಗಳಾಗಿ ಬದಲಾದುದು ಬೇಸರದ ಸಂಗತಿ. ಶ್ರೀ ಅರುಣಕುಮಾರ ಪುಲರನ್ನು ಬೆಂಬಲಿಸಿದ ಕಾರಣಕ್ಕಾಗಿ ನಾವು ದೇಶದ್ರೋಹಿಗಳಾಗಿದ್ದೇವ, ಚಿಂತೆಯಿಲ್ಲ. ಸಂಘ ವಿರೋಧಿಗಳೆಂಬ ಹಣೆಪಟ್ಟಿಯನ್ನೂ ಹಚ್ಚಲಾಗಿದೆ, ಚಿಂತೆಯಿಲ್ಲ. ನಿಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನೇ ಹಾಳು ಮಾಡುತ್ತೇವೆ. ಎಂದು ಬೆದರಿಸಿದರು, ಚಿಂತೆಯಿಲ್ಲ.
ಇವತ್ತಿನ ಪುತ್ತೂರಿನ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಿದೆ. ಅರುಣ್ ಕುಮಾರ ಪುತ್ತಿಲರು ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋತರೂ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತನ್ನ ಹನುಮಶಕ್ತಿಯನ್ನು ತೋರಿದ್ದಾರೆ. ಜಾತಿ ಮತ್ತು ವಶೀಲಿಬಾಜಿಗಳಿಗೆ ತಾವು ಕಿವಿಗೊಡುವವರಲ್ಲವೆಂಬ ನಮ್ಮ ನಂಬಿಕೆ ಸುಳ್ಳಾಗದಿರಲಿ. ಸಮಸ್ತ ಪುತ್ರಿಲ ಅಭಿಮಾನಿಗಳ ಪರವಾಗಿ ತಮ್ಮಲ್ಲಿ ನಮ್ಮದೊಂದು ವಿನಂತಿಯಿದೆ.
ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ನಡೆಸಿ ನಿಮ್ಮ ಗೆಲುವಿಗಾಗಿ ಶ್ರಮವಹಿಸಿದ ಅರುಣ್ ಕುಮಾರ ಪುತ್ತಿಲರನ್ನು 2024ರ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ / ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆದಷ್ಟು ಶೀಘ್ರದಲ್ಲಿ ಘೋಷಿಸಬೇಕೆಂಬುದು ನಮ್ಮ ಅಪೇಕ್ಷೆ ಸದಾಕಾಲ ಕಾರ್ಯಕರ್ತರ ಪರವಾಗಿ ನಿಲ್ಲುವ, ಹಿಂದುಗಳಿಗೆ ಶಕ್ತಿ ತುಂಬುವ ಶ್ರೀ ಪುತ್ತಿಲರು ನಿಮ್ಮೊಂದಿಗೆ ಕಾರ್ಯನಿರ್ವಹಿಸಿ ಕರಾವಳಿ ಕರ್ನಾಟಕ ಮತ್ತು ಕೇಂದ್ರ ಸರಕಾರದ ನಡುವ ಕೊಂಡಿ ಯಾಗಬೇಕೆಂಬುದು
ನಮ್ಮ ಕನಸು
ಜಾತಿಬಲ, ಹಣಬಲದತಕ್ಕಡಿಯಲ್ಲಿ ಶ್ರೀ ಅರುಣಕುಮಾರ ಪುತ್ರಿಲರನ್ನು ತೂಗದ ಹಿಂದುತ್ವ, ರಾಷ್ಟ್ರೀಯತೆಯ ಆಧಾರದಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ತಮ್ಮಲ್ಲಿ ವಿನಂತಿಸುತ್ತಿದ್ದೇವೆ. ಪಕ್ಷಕ್ಕಿಂತಲೂ ದೇಶ ಮುಖ್ಯವೆಂಬ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ಗಮನದಲ್ಲಿರಿಸಿ ದೇಶದೇಳಿಗೆ ಬಯಸುವ ಶ್ರೀ ಪುತ್ರಿಲರನ್ನು ಪೂರ್ಣಮನಸ್ಸಿನಿಂದ, ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಮಗದೊಮ್ಮೆ ತಮ್ಮಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸುತ್ತಿದ್ದೇವ. ನಮ್ಮ ಈ ಪ್ರಾರ್ಥನೆ ತಮಗೆ ಇಂದು ನಗು ತರಿಸಬಹುದು, ಹುಚ್ಚನಿಸಬಹುದು ಅಥವಾ ಈ ಗುಬ್ಬಚ್ಚಿ ಧ್ವನಿಯನ್ನು ತಾವು ಅಲಕ್ಷಿಸಲೂಬಹುದು, ಈ ಪತ್ರವನ್ನು ನಿರ್ಲಕ್ಷಿಸುವ ಮೊದಲು ತಮ್ಮ ವಿಶ್ವಾಸಿಯೊಬ್ಬನನ್ನು ಪುತ್ತೂರು ಅಥವಾ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಳುಹಿಸಿ ವಾಸ್ತವಾಂಶಗಳನ್ನು ಗುರುತಿಸುವಂತೆ ಅಣ್ಣ ತಂಗಿಯ ಕಾಳಜಿಪೂರ್ವಕ ಮನವಿ ಎಂದು ಪತ್ರ ಬರೆದಿದ್ದಾರೆ..
ಸಾಮಾಜಿಕ ಜಾಲತಾಣದಲ್ಲಿ ಪುತ್ತಿಲ ಪರವಾದ ಪೋಸ್ಟ್, ಸ್ಟೇಟಸ್, ವಿಡಿಯೋಗಳು ಇಡೀ ಕರಾವಳಿಯಾದ್ಯಾಂತ ಸದ್ದು ಪಡೆದಿದೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ನಳಿನ್ ಹಠಾವೋ,ಬಿಜೆಪಿ ಬಚಾವೋ ಎಂಬ ಒತ್ತಾಯವನ್ನೂ ಕಾರ್ಯಕರ್ತರು ಮಾಡಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications