ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಯದಲ್ಲಿ ಭಜರಂಗಿಗೆ ಥಳಿಸಿದ ವಿಡಿಯೋದ ಸತ್ಯಾಸತ್ಯತೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಬೆಳಗ್ಗಿನಿಂದ ಸುಳ್ಯ ಬಜರಂಗದಳದ ಮುಖಂಡ ಸಂತೋಷ್ ಶೆಟ್ಟಿ ಎಂಬಾತ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ, ಅವನನ್ನು ಸಾರ್ವಜನಿಕರು ಥಳಿಸುತ್ತಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿತ್ತು.ಈ ಬಗ್ಗೆ ಸತ್ಯಾಸತ್ಯತೆ ಇಲ್ಲಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಸುಳ್ಯ, ಜನವರಿ 19: ಸಾಮಾಜಿಕ ಜಾಲತಾಣಗಳಲ್ಲಿ ಬೆಳಗ್ಗಿನಿಂದ ಸುಳ್ಯ ಬಜರಂಗದಳದ ಮುಖಂಡ ಸಂತೋಷ್ ಶೆಟ್ಟಿ ಎಂಬಾತ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ, ಅವನನ್ನು ಸಾರ್ವಜನಿಕರು ಥಳಿಸುತ್ತಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಸತ್ಯಾಸತ್ಯತೆ ಇಲ್ಲಿದೆ.

ವಿಡಿಯೋ ಬಗ್ಗೆ ತಿಳಿದು ಬಂದ ಕೂಡಲೇ ಪೊಲೀಸರು ಆತನನ್ನು ಬಂಧಿಸಿ ವಿಚಾರಿಸಿದಾಗ ಆತ ಬಜರಂಗದಳದ ಕಾರ್ಯಕರ್ತನೂ ಅಲ್ಲ ಹಾಗೂ ಮಹಿಳೆಯರಿಗೆ ಕಿರುಕುಳ ಕೂಡಾ ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಿದ ಬೆಳ್ಳಾರೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಂತೋಷ್ ಹಲವಾರು ದಿನಗಳಿಂದ ತನ್ನ ಹೆಂಡತಿ ಸುನೀತಾ ಹಾಗೂ ಎರಡು ವರ್ಷದ ಮಗುವನ್ನು ಬಿಟ್ಟು ಮನೆಯಿಂದ ದೂರ ಹೋಗಿದ್ದ.

Sullia: True story behind Bajrang Dal leader Harassing Women

ಪಾನ ಮತ್ತನಾಗಿ ಹಲವಾರು ದಿನಗಳಿಂದ ಮನೆಗೆ ಹಿಂತಿರುಗದೆ ತನ್ನ ಸ್ನೇಹಿತರ ಮನೆಗಳಲ್ಲಿ ವಾಸವಾಗಿದ್ದ. ಆದರೆ, ಇಂದು ಬೆಳಗ್ಗೆ ಸುಳ್ಯದ ಮೆಡಿಕಲ್ ಲ್ಯಾಬ್ ಗೆ ರಕ್ತ ಪರೀಕ್ಷೆಗಾಗಿ ಬಂದು ಅಲ್ಲಿಂದ ಊಟಕ್ಕೆ ಹೋಗುವ ಸಂದರ್ಭದಲ್ಲಿ ತನ್ನ ದೂರದ ಸಂಬಂಧಿಯಾದ ಗಿರೀಶ್ ರೈಯನ್ನು ನೋಡಿ ಸಂತೋಷ್ ಓಡಲಾರಂಭಿಸಿದ. ಆ ಸಂದರ್ಭದಲ್ಲಿ ಸ್ಥಳೀಯರು ಈತನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಈ ಸಂದರ್ಭ ಪ್ರತ್ಯಕ್ಷದರ್ಶಿಗಳು ಈತ ಮಹಿಳೆಯರಿಗೆ ಕಿರುಕುಳ ನೀಡಿರುವ ಹಿನ್ನಲೆಯಲ್ಲಿ ಧಳಿಸಿರುವುದಾಗಿ ತಿಳಿದುಬಂದಿದೆ. ಆದರೆ, ಪೊಲೀಸರು ಸ್ಥಳಕ್ಕಾಗಮಿಸಿ ಸಂತೋಷ್ ನನ್ನು ಠಾಣೆಗೆ ಕರೆದುಕೊಂಡು ಹೋದಾಗ ಸತ್ಯಾಸತ್ಯತೆಯ ಅರಿವಾಗಿದೆ. ಇದಲ್ಲದೆ ಸಂತೋಷ್ ನ ಸಂಬಂಧಿಕ ಗಿರೀಶ್ ರೈ ಸರಿಯಾದ ಮಾಹಿತಿ ಪೊಲೀಸರಿಗೆ ನೀಡಿ ಆತನನ್ನು ಕರೆದುಕೊಂಡು ಹೋಗಿದ್ದಾರೆ. ಪ್ರತ್ಯಕ್ಷವಾಗಿ ಕಂಡರೂ ಪರಾಂಬರಿಸಿ ನೋಡು ಎನ್ನುವ ಗಾದೆ ಮಾತು ಇಲ್ಲಿ ನಿಜವಾಗಿದೆ.

English summary
A video went viral a Bajrang Dal leader allegdely harassing women in Sullia. But, Police said harassment news is false, it was family matter, his family members were thrashing him for not returning to home and leaving his wife and children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X