ಮಂಗಳೂರು : ಫೋಟೋ ವಿವಾದ ವಿದ್ಯಾರ್ಥಿಗೆ ಗೂಸಾ
ಮಂಗಳೂರು, ಫೆ. 23 : ಸುರತ್ಕಲ್‌ನಲ್ಲಿನ ಖಾಸಗಿ ಕಾಲೇಜು ವಿದ್ಯಾರ್ಥಿಗೆ ಹಿಂದೂ ಸಂಘಟನೆಗೆ ಸೇರಿದ ಯುವಕರ ಗುಂಪು ಅಮಾನುಷವಾಗಿ ಥಳಿಸಿದೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ರಿಯಾಜ್ (20) ಮೇಲೆ ಹಲ್ಲೆ ನಡೆಸಲಾಗಿದೆ. ರಿಯಾಜ್ ಕಾಲೇಜಿನ ಐವರು ಹೆಣ್ಣು ಮಕ್ಕಳ ತೊಡೆಯ ಮೇಲೆ ಮಲಗಿದ್ದ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಇದರ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಭಾನುವಾರ ಸಂಜೆ ರಿಯಾಜ್ ಮನೆಗೆ ಬಂದ ಆತನ ಸ್ನೇಹಿತರು ಅವನನ್ನು ಕರೆದುಕೊಂಡು ಹೋಗಿದ್ದರು. ನಂತರ ಆತನಿಗೆ ಥಳಿಸಿದ್ದಾರೆ ಎಂದು ರಿಯಾಜ್ ಪೋಷಕರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ರಿಯಾಜ್ ಸುರತ್ಕಲ್‌ನಲ್ಲಿನ ಎನ್ಐಟಿಕೆ ಬೀಚ್ ಪತ್ತೆಯಾಗಿದ್ದ.
ರಿಯಾಜ್‌ನನ್ನು ಮನೆಯಿಂದ ಕರೆದುಕೊಂಡು ಹೋದ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ ಎಂದು ಅವರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಿಂದಾಗಿ ಕಾಲೇಜಿನ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ : ತರಗತಿಯ ಕೊಠಡಿಯೊಳಗೆ ಐದು ಮಂದಿ ವಿದ್ಯಾರ್ಥಿನಿಯರ ತೊಡೆ ಮೇಲೆ ವಿದ್ಯಾರ್ಥಿ ಮಲಗಿರುವ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಬಿವಿಪಿ ಸೋಮವಾರ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸುತ್ತಿದೆ.












Click it and Unblock the Notifications