ಮಂಡ್ಯ ದುರಂತದ ಬಸ್ ಗೆ ಒಂಬತ್ತನೇ ಮಾಲೀಕರು ಶ್ರೀನಿವಾಸ್

ಮಂಗಳೂರು, ನವೆಂಬರ್ 24 : ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಘೋರ ದುರಂತಕ್ಕೆ ಸಾಕ್ಷಿಯಾದ 'ರಾಜ್ ಕುಮಾರ್' ಬಸ್ ಮಂಗಳೂರಿನ ನೋಂದಣಿಯಲ್ಲೇ ಇದೆ. ಬಸ್ ನ ಮಾಲೀಕರು ಶ್ರೀನಿವಾಸ್. ನಂಬರ್ ಕೆ.ಎ 19- ಎ 5676. 2001ರಲ್ಲಿ ಈ ವಾಹನ ನೋಂದಣಿ ಆಗಿದೆ.

ದುರಂತಕ್ಕೆ ಕಾರಣವಾಗಿರುವ ಈ ರಾಜ್ ಕುಮಾರ್ ಹೆಸರಿನ ಬಸ್ ಮಂಗಳೂರು ಮೂಲದ್ದು. ಮಂಗಳೂರು - ಬಜಪೆ ಮಧ್ಯೆ ಸರ್ವೀಸ್ ಬಸ್ ಆಗಿ ಸಂಚರಿಸುತ್ತಿತ್ತು. ನಂತರ ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ರೂಟ್ ನಲ್ಲಿ ಸಂಚರಿಸುತ್ತಿತ್ತು. ಮೂರು ವರ್ಷದ ಹಿಂದೆ ಮಂಗಳೂರಿನಿಂದ ಬಸ್ ಮಾರಾಟ ಮಾಡಲಾಗಿತ್ತು. 15ನೇ ಮೇ 2019ಕ್ಕೆ ಬಸ್ ಆಯಸ್ಸು ಮುಗಿಯುವುದರಲ್ಲಿತ್ತು. ಆದರೆ ಈ ನಡುವೆ ಘೋರ ದುರಂತಕ್ಕೆ ಕಾರಣವಾಗಿದೆ.

ಕೆಎ 19, ಎ 5676 ಮಂಗಳೂರು ನೋಂದಣಿಯಲ್ಲಿಯೇ ಮುಂದುವರಿದಿದ್ದ ಬಸ್ ಇದಾಗಿದ್ದು, ರಾಜ್ ಕುಮಾರ್ ಹೆಸರಲ್ಲಿ ಮಂಗಳೂರಿನಲ್ಲಿ ಖಾಸಗಿ ಸರ್ವೀಸ್ ಬಸ್ ಆಗಿ, ಕೆಲವು ವರ್ಷಗಳಿಂದ ಸಂಚರಿಸುತ್ತಿತ್ತು. ರಾಜ್ ಕುಮಾರ್ ಹೆಸರಿನ ಈ ಬಸ್ ಈ ವರೆಗೆ ಎಂಟು ಮಾಲೀಕರ ಕೈ ಬದಲಾಗಿ, ಮಂಡ್ಯದ ಶ್ರೀನಿವಾಸ್ ಎಂಬುವವರಿಗೆ 2015ರ ಏಪ್ರಿಲ್‌ 1ರಂದು ಮಾರಾಟವಾಗಿತ್ತು.

Mandya Bus Tragedy

ಶಾಂಭವಿ ಗುಜರಾನ್ ಎಂಬವರ ಹೆಸರಲ್ಲಿದ್ದ ರಾಜ್ ಕುಮಾರ್ ಬಸ್ ನ ಈ ಹಿಂದಿನ ವಿಳಾಸ ಶಾಂಭವಿ ಗುಜರಾನ್ , w/o ರಾಘವ ಕರ್ಕೇರಾ, 7-12-183, ಸುಲ್ತಾನ್ ಬತ್ತೇರಿ ರಸ್ತೆ, ಬೋಳೂರು, ಮಂಗಳೂರು ಆಗಿದೆ. ಜೂನ್ 01, 2001ರಲ್ಲಿ ಶಂಕರ ವಿಠಲ ಕಂಪೆನಿ ಹೆಸರಲ್ಲಿ ಮೊದಲ ನೋಂದಣಿ ಆಗಿದ್ದ ಈ ಬಸ್ ಆ ಬಳಿಕ ಮಂಗಳೂರಿನಲ್ಲೇ ಎಂಟು ಮಾಲೀಕರನ್ನು ಕಂಡಿತ್ತು.

ಕೊನೆಯದಾಗಿ ರೂಟ್ ನಂಬರ್ 16, ಹಂಪನಕಟ್ಟೆ-ಸುಲ್ತಾನ್ ಬತ್ತೇರಿ ರೂಟ್ ನಲ್ಲಿ ಸಂಚಾರ ನಡೆಸಿದ್ದ ಬಸ್ ಗೆ 15 ವರ್ಷ ಮೇಲ್ಪಟ್ಟ ಕಾರಣ ಮತ್ತೆ ಪರ್ಮಿಟ್ ನೀಡದ ಮಂಗಳೂರು ಆರ್ಟಿ ಓ ಕ್ಲಿಯರೆನ್ಸ್ ಸರ್ಟಿಫಿಕೇಟ್ ‌ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+