ವೃದ್ಧರ ಶೋಷಣೆ: ಮಂಗಳೂರು ನಂ.1: ಸಮೀಕ್ಷೆ ವರದಿ

ಬೆಂಗಳೂರು, ಜೂನ್ 15: ಮಕ್ಕಳು ಬಯಸುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ತಂದೆ ತಾಯಿಯರಿಗೆ ಮಕ್ಕಳ ಮೇಲಿರುವ ಪ್ರೀತಿ ಅದೇ ಮಕ್ಕಳಿಂದ ತಂದೆ ತಾಯಿಯರ ಮೇಲೆ ಯಾಕೆ ಮಾಯವಾಗುತ್ತದೆ.

ತಮಗೆ ಹಕ್ಕೇ ಇಲ್ಲವೇನೋ ಎಂದು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ ಅಥವಾ ಮನೆಯಲ್ಲಿಯೇ ಅವರನ್ನು ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವ ಮೂರ್ಖಶಿಖಾಮಣಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ.

ಹೆಲ್ಪ್ ಏಜ್‌ ಇಂಡಿಯಾ ಎನ್ನುವ ಸಂಸ್ಥೆ ಈ ಕುರಿತು ವರದಿ ಮಾಡಿದ್ದು ಹಿರಿಯ ನಾಗರಿಕರನ್ನು ಪೀಡಿಸುವ, ಹಿಂಸಿಸುವ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮಂಗಳೂರು ಮುಂದಿದೆ ಎಂದು ತಿಳಿದುಬಂದಿದೆ. ಹೆಲ್ಪ್ ಏಜ್ ದೇಶಾದ್ಯಂತ 23 ನಗರಗಳ 5,014 ಹಿರಿಯ ನಾಗರಿಕರನ್ನು ಸಂದರ್ಶಿಸಿಸದೆ. ಮಂಗಳೂರಿನಲ್ಲಿ ಶೇ.47 ಮಂದಿ ಹಿರಿಯರು ತಮ್ಮ ಶೋಷಣೆ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Sorry elders, Mangaluru stands no.1 for bad reason

ಅಹಮದಾಬಾದ್ ಶೇ.46, ಭೋಪಾಲ್ ಶೇ.39, ಅಮೃತಸರ ಶೇ.35, ನವದೆಹಲಿ ಶೇ.33 ನಂತರದ ಶ್ರೇಣಿಯಲ್ಲಿವೆ ಎಂದು ಸಮೀಕ್ಷೆ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಜಮ್ಮು, ಮುಂಬೈ, ಕೊಚ್ಚಿ ಮತ್ತು ಗುವಾಹಟಿ ನಗರಗಳಲ್ಲಿ ವಯಸ್ಸಾದವರ ನಿಂದನೆ ಮತ್ತು ದೌರ್ಜನ್ಉ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ನಾಲ್ಕರಲ್ಲಿ ಒಬ್ಬರು ಹಿರಿಯರು ವಯಕ್ತಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಪುತ್ರರು ಅಥವಾ ಸೊಸೆಯಂದಿರಿಂದ ಹೆಚ್ಚು ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+