ಶ್ರೀಲಂಕಾ ಪ್ರಧಾನಿ ರನಿಲ್ ಮಂಗಳೂರಿಗೆ ಭೇಟಿ

ಮಂಗಳೂರು, ನವೆಂಬರ್ 21: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಮಂಗಳವಾರ (ನ.೨೧)ರಂದು ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ರೀಲಂಕಾ ಪ್ರಧಾನಿ ನಂತರ ರಸ್ತೆ ಮೂಲಕ ಬುಲೆಟ್ ಪ್ರೂಫ್ ಅಂಬಾಸಿಡರ್ ಕಾರಿನಲ್ಲಿ ಮಂಗಳೂರು ನಗರಕ್ಕೆ ಆಗಮಿಸಿದರು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಗೇಟ್ ವೇ ಹೊಟೇಲ್ ಗೆ ಆಗಮಿಸಿದ ಅವರು ಅಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿದರು. ಶ್ರೀಲಂಕಾ ಭದ್ರತಾ ಪಡೆ ಪೂರ್ತಿಯಾಗಿ ಹೋಟೆಲ್ ಆವರಣದಲ್ಲಿ ಸುತ್ತುವರಿದಿತ್ತು.

Shrilanka Prime Minister in Mangaluru

ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಹೊಟೇಲ್ ಪ್ರವೇಶ ಇರಲಿಲ್ಲ. ಸಾರ್ವಜನಿಕರಿಗೂ ಹೊಟೇಲ್ ಪ್ರವೇಶ ನಿರ್ಬಂಧಿಸಲಾಗಿದೆ. ಉಪಾಹಾರದ ಬಳಿಕ ಮಂಗಳೂರಿನಿಂದ ಕೊಲ್ಲೂರಿಗೆ ಹೆಲಿಕಾಪ್ಟರ್ ಮೂಲಕ ಶ್ರೀಲಂಕಾ ಪ್ರಧಾನಿ ತೆರಳಲಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿದ ರನಿಲ್ ವಿಕ್ರಮ ಸಿಂಘೆ ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಭೇಟಿ ನೀಡಿ ಚಂಡಿಕಾ ಹೋಮ, ಪೈಜೆ ಸಲ್ಲಿಸಲಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+