ಧರ್ಮಸ್ಥಳ ಮದ್ಯವರ್ಜನ ಶಿಬಿರ: ವ್ಯಸನ ಮುಕ್ತರಾಗಿ ನವಜೀವನ ಆರಂಭಿಸಿದ 1,644 ಮಂದಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆದ ನವಜೀವನ ಸಮಾವೇಶದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ 1644, ಮದ್ಯವ್ಯಸನಿಗಳು ಕುಡಿತ ಬಿಡುವ ನಿರ್ಧಾರ ಮಾಡಿದ್ದಾರೆ.

ಮಂಗಳೂರು, ಫೆಬ್ರವರಿ 16: ಧರ್ಮಸ್ಥಳ ಮದ್ಯವರ್ಜನ ಶಿಬಿರ, ಕುಡಿತದ ದಾಸರಾಗಿದ್ದವರ ಬಾಳಿಗೆ ಹೊಸ ಮಾರ್ಗ ನೀಡುವ ಬೆಳಕಾಗಿದೆ. ಈ ಬಾರಿಯ ಮದ್ಯವರ್ಜನ ಶಿಬಿರದಲ್ಲಿ ಒಂದೂವರೆ ಸಾವಿರ ಜನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮದ್ಯಬಿಡುವ ಶಪಥ ಮಾಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದೆ. ಕುಡಿತದ ನಶೆಯಲ್ಲಿ ಜೀವನ ಮರೆತಿದ್ದ ಸಾವಿರಕ್ಕೂ ಅಧಿಕ ಜನರು ನವಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆದ ನವಜೀವನ ಸಮಾವೇಶದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ 1644, ಮದ್ಯವ್ಯಸನಿಗಳು ಕುಡಿತ ಬಿಡುವ ನಿರ್ಧಾರ ಮಾಡಿದ್ದಾರೆ.

ಕಳೆದ 30 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯವರ್ಜನ ಶಿಬಿರ ನಡೆಸಿ 1,15,000 ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿದೆ. ಈ ಬಾರಿಯೂ 1,644 ಜನರು ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯ ತ್ಯಜಿಸಿದ್ದಾರೆ. ಶಿಬಿರಾರ್ಥಿಗಳ ಶಿಬಿರ ಮುಗಿದ ಹಿನ್ನಲೆಯಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮದ್ಯವರ್ಜನ ಶಿಬಿರಾರ್ಥಿಗಳ ನವಜೀವನ ಸಮಾವೇಶ ನಡೆದಿದೆ‌‌. ಸಮಾವೇಶದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

Shri Kshetra Dharmasthala De-Alcoholism Camp

ಸಭೆಯಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, " ನಿಮ್ಮೆಲ್ಲರ ಒಡನಾಟದಲ್ಲಿರುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ, ಸದಾಚಾರ ಮತ್ತು ಧರ್ಮನಿಷ್ಠೆ ಮತ್ತು ಮಾನವ ಗುಣಗಳಿಂದ ತುಂಬಿದ ಧನಾತ್ಮಕ ಶಕ್ತಿಯ ನಾಡು, ಇದು ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಐತಿಹಾಸಿಕ, ಸುಂದರ, ಅದ್ಭುತ, ಅದ್ಭುತವಾದ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. 20 ವರ್ಷದ ಯುವಕರಾಗಿದ್ದಾಗಿನಿಂದಲೂ ಡಾ.ವೀರೇಂದ್ರ ಹೆಗ್ಗಡೆ ಅವರು ಈ ದೇವಸ್ಥಾನದ ಆಡಳಿತಾಧಿಕಾರಿಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಒಬ್ಬ ಕಾರ್ಯಕರ್ತ ಮತ್ತು ನಿರ್ವಾಹಕರಾಗಿ ಧರ್ಮಾಧಿಕಾರಿಗಳು ದೇವಾಲಯದ ಪರಂಪರೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮಾನವ ಸೇವೆ ಮತ್ತು ಉನ್ನತಿ ಮತ್ತು ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳಿಗಾಗಿ ಪದ್ಮವಿಭೂಷಣದಂತಹ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ" ಎಂದು ಶ್ಲಾಘಿಸಿದರು.

"ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರೀಮಠವು ಮಾಡಿದ ಯೋಜನೆಗಳು ಮರೆಯಲಾಗದ ಮತ್ತು ಅತ್ಯಂತ ಉಪಯುಕ್ತವಾದವು. ಆಯುರ್ವೇದ, ಯೋಗ ಮತ್ತು ಅಲೋಪತಿ, ನ್ಯಾಚುರೋಪತಿ ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಮೂಲಕ ವಿದ್ಯಾದಾನ, ಕೋಟಿಗಟ್ಟಲೆ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಿದೆ. ಡಾ. ಹೆಗ್ಗಡೆಯವರು ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿಶೇಷ ಗಮನ ಹರಿಸುವುದನ್ನು ಗಮನಿಸಿದ್ದೇನೆ. ಶ್ರೀ ಧರ್ಮಸ್ಥಳ ಸಂಸ್ಥೆಯು ಬಡವರು, ರೈತರು, ಮಹಿಳಾ ಸಬಲೀಕರಣ ಮತ್ತು ಗುಂಪು ವಿವಾಹ ಇತ್ಯಾದಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಮಾಡುತ್ತಿದೆ" ಎಂದು ಪ್ರಶಂಸಿದ್ದಾರೆ.

Shri Kshetra Dharmasthala De-Alcoholism Camp

"ನಾನು ಯುವಕನಾಗಿದ್ದ ಸಂದರ್ಭದಲ್ಲಿ ಮಧ್ಯಪಾನ ವ್ಯಸನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೆ. ನಂತರ ಕೇಂದ್ರ ಸಚಿವರಾಗಿದ್ದಾಗ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸಿದ್ದೇವೆ. ಇದರಿಂದಾಗಿ ಅನೇಕರು ವ್ಯಸನ ಮುಕ್ತರಾಗಿ ಹೊರಬಂದರು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜನರು ಸಹ ಸಹಕರಿಸಿದಾಗ ಮಾತ್ರ ಸರ್ಕಾರ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯ. ಈ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರೀ ಧರ್ಮಸ್ಥಳ ಸಂಸ್ಥಾನವು 'ಜನ ಜಾಗೃತಿ ವೇದಿಕೆ' ಮೂಲಕ ಕೆಲಸ ಮಾಡುತ್ತಿದೆ. ಕುಟುಂಬದ ಸದಸ್ಯರು ವ್ಯಸನಕ್ಕೆ ಬಲಿಯಾದವರಿಗಾಗಿ ಶಿಬಿರಗಳ ಮೂಲಕ ವ್ಯಸನಮುಕ್ತಗೊಳಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ" ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಸಮಾವೇಶದಲ್ಲಿ ಶಿಬಿರಾರ್ಥಿಗಳ ತಾವು ಮದ್ಯ ತ್ಯಜಿಸಿದ್ದರಿಂದ ತಮ್ಮ ಬಾಳಿನಲ್ಲಾದ ಏಳಿಗೆಯ ಅನುಭವವನ್ನು ಹಂಚಿಕೊಂಡರು. ಕುಡಿತದ ದಾಸನಾಗಿದ್ದ ವೇಳೆಯಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೆವು. ಬಾಳು ವಿನಾಶದ ಕಡೆಗೆ ಹೋಗಿತ್ತು‌. ಆದರೆ ಧರ್ಮಸ್ಥಳದ ಮದ್ಯವರ್ಜನ ಶಿಬಿರಕ್ಕೆ ಸೇರಿದ ಮೇಲೆ ಎಲ್ಲವೂ ಬದಲಾಗಿದೆ ಎಂದು ಅನುಭವ ಹಂಚಿಕೊಂಡರು. ಒಟ್ಟಿನಲ್ಲಿ ದಾನಧರ್ಮಾದಿಕ್ರಿಯೆಗಳಿಗೆ ಹೆಸರು ವಾಸಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮದ್ಯಕ್ಕೆ ದಾಸರಾಗಿದ್ದವರ ನವಜೀವನದ ಕ್ಷಣಕ್ಕೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+