ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ಆನ್ ಲೈನ್ ಬುಕ್ಕಿಂಗ್ ಸೇವೆ ಆರಂಭ
ಮಂಗಳೂರು, ಡಿಸೆಂeಬರ್ 19: ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಎಸ್ ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಆನ್ ಲೈನ್ ಬುಕ್ಕಿಂಗ್ ಸೇವೆ ಆರಂಭಿಸಿದೆ. ಶಾಂತಿವನದಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸುವವರಿಗೆ ಅನುಕೂಲವಾಗಲು ನಿಟ್ಟಿನಲ್ಲಿ ಆನ್ ಲೈನ್ ಬುಕಿಂಗ್ ವ್ಯವಸ್ಥೆ ರೂಪಿಸಲಾಗಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಈ ಆನ್ ಲೈನ್ ಬುಕ್ಕಿಂಗ್ ಸೇವೆಗೆ ಚಾಲನೆ ನೀಡಿದ್ದಾರೆ. ಆನ್ ಲೈನ್ ಮೂಲಕ ಚಿಕಿತ್ಸೆ ಪಡೆಯಲು ಇಚ್ಚಿಸುವವರು ಆರೋಗ್ಯ ಸಂಬಂಧಿತ ವಿವರವನ್ನು ಚಿಕಿತ್ಸೆ ಯ ದಿನಾಂಕ ಮತ್ತು ಲಭ್ಯತೆಯ ವಿವರವನ್ನು ಆನ್ ಲೈನ್ ಮೂಲಕವೇ ದೃಢಪಡಿಸಿಕೊಳ್ಳಬಹುದಾಗಿದೆ.

ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆಯುವವರು ವೆಬ್ ಸೈಟ್ ಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲಿಚ್ಛಿಸುವ ದಿನಾಂಕ ನಮೂದಿಸಿ ಲಭ್ಯ ಕೊಠಡಿಗಳ ವಿವರ ಪಡೆಯಬಹುದು.

ಚಿಕಿತ್ಸೆ ಪಡೆಯಲಿರುವ ವ್ಯಕ್ತಿಯ ಆರೋಗ್ಯ ಸಂಬಂಧಿತ ಹಿಂದಿನ ದಾಖಲೆಗಳನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದರೆ , ಅದಕ್ಕೆ ಸಂಬಂಧಿತ ತಜ್ಞ ವೈದ್ಯರು ಈ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸೆ ಗೆ ಸಮ್ಮತಿ ಸೂಚಿಸುತ್ತಾರೆ . ಇದರ ದೃಢೀಕೃತ ಪ್ರತಿ ಯನ್ನು ಚಿಕಿತ್ಸೆ ಆರಂಭವಾಗುವ ದಿನ ಸಲ್ಲಿಸಬೇಕು. ಆರಂಭಿಕ ಒಂದು ತಿಂಗಳು ಆನ್ ಲೈನ್ ಬುಕ್ಕಿಂಗ್ ಪ್ರಕ್ರಿಯೆ ಪ್ರಾಯೋಗಿಕವಾಗಿ ನಡೆಯಲಿದೆ.












Click it and Unblock the Notifications