ಸಾಧನೆಯ ಹಾದಿಯಲ್ಲಿ ಸ್ಟೈಲಿಂಗ್ ಸ್ಟಾರ್ ಸಂದೀಪ್

ಮಂಗಳೂರು, ಸೆಪ್ಟೆಂಬರ್ 04 : ತುಳುನಾಡಿನ ಯುವ ಪ್ರತಿಭೆ ಸಂದೀಪ್ ಶೆಟ್ಟಿಗೆ ಭವಿಷ್ಯದಲ್ಲಿ ಉತ್ತಮ ಕಲಾವಿದನಾಗಬೇಕು ಎಂಬ ಹಂಬಲ. ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆ, ಡ್ಯಾನ್ಸ್‌ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಸಂದೀಪ್ ಇಂದು ಮಾಡೆಲಿಂಗ್ ಕ್ಷೇತ್ರದಲ್ಲಿ ಭರವಸೆಯ ಬೆಳಕನ್ನು ಚೆಲ್ಲಿದ್ದಾರೆ.

ಸಂದೀಪ್ ಶೆಟ್ಟಿ ಮಂಗಳೂರಿನ ಸುರತ್ಕಲ್ ಕಾಟೀಪಳ್ಳ ಗುತ್ತು ಮನೆಯ ಪುರಂದರ ಶೆಟ್ಟಿ ಮತ್ತು ಸರೋಜಾ ಪಿ.ಶೆಟ್ಟಿ ದಂಪತಿಗಳ ಪುತ್ರ. ಮಾಡೆಲಿಂಗ್ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ ಸಂದೀಪ್ 'ಹಾಸ್ಪಿಟಲ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದು, ಇಂಟಿರಿಯರ್ ಡಿಸೈನಿಂಗ್ ನಲ್ಲಿಯು ಸ್ಪೆಷಲೈಸೇಷನ್ ಮಾಡಿದ್ದಾರೆ.

Sandeep Shetty is the new star rising form Mangaluru

ಕರಾವಳಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಇಂಟರ್ ಕಾಲೇಜಿನಲ್ಲಿ ನಡೆದ 'ನಮಸ್ತೇ ಇಂಡಿಯಾ' ಮಾಡೆಲಿಂಗ್ ಸ್ಪರ್ಧೆಯಲ್ಲಿ ವಿಜೇತರಾದವರು. ದುಬೈ ನಲ್ಲಿ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಫ್ಯಾಶನ್ ಶೋ ಗೆ ಕೊರಿಯೊಗ್ರಾಫಿ ಮಾಡಿ, ವಾಕ್ ಶೋ ನೀಡಿದ ಸಂದೀಪ್ ಗೆ ಈ ಕಾರ್ಯಕ್ರಮ ದೊಡ್ಡ ಹೆಸರು ತಂದಿತು. 2017ನೇ ಸಾಲಿನ 'ಮಿ. ಕರ್ನಾಟಕ ಇಂಟರ್ ನ್ಯಾಷನಲ್' ಪ್ರಶಸ್ತಿಯನ್ನು ಸಂದೀಪ್ ಪಡೆದಿದ್ದಾರೆ.

ಸಿನಿಮಾದಲ್ಲಿ ನಟಿಸಬೇಕು ಎಂಬುದು ಸಂದೀಪ್ ಶೆಟ್ಟಿ ಕನಸು. ಇದಕ್ಕಾಗಿ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. 'ಆದರ್ಶ ಫಿಲ್ಮ್‌ ಇನ್ಸಿಟಿಟ್ಯೂಟ್‌ನಲ್ಲಿ ನಟನೆಯ ಬಗ್ಗೆ ತರಬೇತಿ ಪಡೆದಿದ್ದಾರೆ. ತುಳುವಿನಲ್ಲಿ ಮೊದಲು ಬಿಡುಗಡೆಗೊಂಡ 'ಮೋಕೆದ ಮಗಲ್' ತುಳು ಆಲ್ಬಂ ನಲ್ಲಿ ನಾಯಕನಾಗಿ ನಟಿಸಿದ್ದಾರೆ.

2008 ರಲ್ಲಿ 'ಬದುಕ್' ತುಳು ಚಿತ್ರದ ಮೂಲಕ ನಟನಾಗಿ ಚಿತ್ರ ರಂಗಕ್ಕೆ ಸಂದೀಪ್ ಪ್ರವೇಶ ಮಾಡಿದರು. 2009ರಲ್ಲಿ ದೂರದರ್ಶನದಲ್ಲಿ 'ನೆನಪಿನ ನಾವೆ' ಎಂಬ ಧಾರವಾಹಿಯಲ್ಲಿ ನಿರ್ಮಾಪಕರಾಗಿ ನಟಿಸಿದ್ದಾರೆ. 'ಮೆಮೊರೆಬಲ್ ಲವ್' ಹಾಗೂ 'ಸುಬಗೆ' ಸೇರಿದಂತೆ ಅನೇಕ ಕಿರುಚಿತ್ರಗಳನ್ನು ಮಾಡಿ ತನ್ನದೇ ಶೈಲಿಯಲ್ಲಿ ಸಿನೆಮಾ ರಂಗಕ್ಕೆ ಕಾಲಿಡುತ್ತಿದ್ದಾರೆ.

Sandeep Shetty is the new star rising form Mangaluru

ಹಲವಾರು ಅವಕಾಶಗಳು ಸಂದೀಪ್ ಶೆಟ್ಟಿ ಅವರಿಗೆ ಬರುತ್ತಿದ್ದು, ತಮ್ಮದೇ ಬ್ಯಾನರ್ ಎಸ್.ಎಸ್.ಕೆ ಪ್ರೊಡಕ್ಷನ್ ಅಡಿ 'ಸಖತ್ ಲವ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ತುಳು, ಕನ್ನಡ ಭಾಷೆಯಲ್ಲಿ ಈ ಸಿನೆಮಾ ತಯಾರಾಗುತ್ತಿದ್ದು, ಸಂದೀಪ್ ನಾಯಕ ನಟ.

'ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ ಚಾಣಕ್ಷತೆಯಿಂದ ಹೆಜ್ಜೆಗಳನ್ನಿಟ್ಟು ಸ್ವಂತ ಬುದ್ಧಿಯಿಂದ ಸಿನಿಮಾ ರಂಗದಲ್ಲಿ ಶ್ರಮ ವಹಿಸಿ, ಛಲವನ್ನು ಬಿಡದೇ ಹೆತ್ತವರ ಪ್ರೋತ್ಸಾಹ ದಿಂದ ಇಷ್ಟೇಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ. ಹಾಗೆ ತುಳು ಚಿತ್ರ ರಂಗದ ನವೀನ್ ಡಿ ಪಡೀಲ್ ನನ್ನ ಗಾಢ್ ಫಾದರ್ ಎನ್ನುತ್ತಾರೆ ಸಂದೀಪ್ ಶೆಟ್ಟಿ.

ಬರಹ : ಕೀರ್ತಿಕ್ ಗೌಡ ದರ್ಬೆ, ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು ನೆಹರು ನಗರ ಪುತ್ತೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+