Kalladka Prabhakar Bhat Health : ಚಿಕಿತ್ಸೆ ಸ್ಪಂದಿಸಿದ ಕಲ್ಲಡ್ಕ ಪ್ರಭಾಕರ್ ಭಟ್‌ ಆರೋಗ್ಯ ಸ್ಥಿರ

ಮಂಗಳೂರು, ಏಪ್ರಿಲ್ 06: ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್​ಎಸ್​ಎಸ್)ದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಎದೆ ನೋವು ಕಾಣಿಸಿಕೊಂಡಿದ್ದು ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಭಾಕರ್ ಭಟ್ ಚೇತರಿಸಿಕೊಂಡಿದ್ದು, ಯಾವುದೇ ರೀತಿ ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕದ ತನ್ನ ವಿದ್ಯಾಸಂಸ್ಥೆಯಲ್ಲಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದ್ದು, ಸದ್ಯ ಕಲ್ಲಡ್ಕ ಪ್ರಭಾಕರ್ ಭಟ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಪ್ರಭಾಕರ್ ಭಟ್‌ಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಎರಡು ದಿನಗಳ ಕಾಲ ನಿಗಾದಲ್ಲಿರಲು ಸೂಚಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗಳಿಲ್ಲ, ಆದರೆ, ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದರು.

RSS Leader Kalladka Prabhakar Bhat Hospitalized

ಆರ್​ಎಸ್​ಎಸ್​ ಮುಖಂಡರು ಹಾಗೂ ಹಿಂದೂಪರ ಹೋರಾಟಗಾರರೂ ಆಗಿರುವ ಪ್ರಭಾಕರ್ ಭಟ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿ ಇದ್ದರು. ಹಿಂದೂ ಮುಸ್ಲಿಂ ಸಂಬಂಧ ಹುಟ್ಟಿಕೊಂಡಿದ್ದ ಹಲವು ವಿವಾದಗಳ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್‌ ಹೇಳಿಕೆಗಳನ್ನು ನೀಡಿದ್ದರು.

RSS Leader Kalladka Prabhakar Bhat Hospitalized

ಅವರ ಕೆಲವು ಹೇಳಿಕೆಗಳು ವಿವಾದಕ್ಕೂ ಕಾರಣವಾಗಿತ್ತು. ಹಾಗೆಯೇ ಪ್ರಭಾಕರ್ ಭಟ್ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಅತಿಥಿಯಾಗಿ ತೆರಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಎಸ್‌ಎಫ್‌ಐ ಹಾಗೂ ಸಿಎಫ್ಐನಂತಹ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+