ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು: ರಕ್ಷಣಾ ಕಾರ್ಯ ನಿರ್ವಹಿಸಿದ ಪೊಲೀಸರ ಹೆಸರು ರಾಜ್ಯ ಪ್ರಶಸ್ತಿಗೆ ಶಿಫಾರಸ್ಸು

|
Google Oneindia Kannada News

ಮಂಗಳೂರು, ಆಗಸ್ಟ್ 30 : ಕೊಡಗಿನ ಗಡಿಭಾಗದ ಜೋಡುಪಾಲ ,ಮದೆನಾಡು ಸೆರೀದಂತೆ ಇನ್ನಿತರಕಡೆ ಜಲಸ್ಪೋಟ ಸೇರಿದಂತೆ ಭೂಕುಸಿತ ದುರಂತ ಸಂದರ್ಭದಲ್ಲಿ ಅಪಾಯ ಲೆಕ್ಕಿಸದೇ ನೂರಾರು ಜನರ ಪ್ರಾಣ ರಕ್ಷಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿ ಗಣೇಶ್ ಗೌಡ ಸೇರಂದತೆ ಇನ್ನಿತರ ಸಿಬ್ಬಂದಿ ಗಳಿಗೆ ಬಹುಮಾನ ಘೋಷಿಸಲಾಗಿದ್ದು ಮುಂದಿನ ವರ್ಷ ಮುಖ್ಯ ಮಂತ್ರಿ ಪದಕಕ್ಕೂ ಇವರ ಹೆಸರು ಶೀಫಾರಸ್ಸು ಮಾಡಲಾಗುವುದೆಂದು ರಾಜ್ಯ ಕಾನೂನು ಸುವ್ಯವಸ್ತೆ ವಿಭಾಗದ ಎಡಿಜಿಪಿ ಕಮಲ್ ಪಂಥ್ ತಿಳಿಸಿದ್ದಾರೆ.

Rescue operation conducted Police name will be recommend for award

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದುರಂತ ಸಂಭವಿಸಿದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಅದೇಶಕ್ಕೆ ಕಾಯದೇ ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದ ಸ್ಥಳಕ್ಕೆ ತೆರಳಿ ಅಪಾಯ ಲೆಕ್ಕಿಸದೇ ನೂರಾರು ಜನರ ಪ್ರಾಣ ರಕ್ಷಣೆ ಮಾಡಿದ ಪೊಲೀಸ್ ಅಧಿಕಾರಿಗಳು ಹಾಗು ಸಿಬಂಧಿಗಳ ಸಾಹಸ ವನ್ನುಕೊಂಡಾಡಿದರು. ಇದು ಪೊಲೀಸ್ ಇಲಾಖೆಯ ನಿಸ್ವಾರ್ಥ ಸೇವೆಯ ಪ್ರತೀಕ ಎಂದು ಅಭಿಪ್ರಾಯ ಪಟ್ಟರು. ಪೊಲೀಸರೊಂದಿಗೆ ಕೈ ಜೋಡಿಸಿದ್ದ ಕೆಲ ಯುವಕರ ಕಾರ್ಯವನ್ನು ಕಮಲ್ ಪಂಥ್ ಶ್ಲಾಘಿಸಿದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಬೆಂಗಳೂರು ಮಾದರಿಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲು ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.ರಾಜ್ಯದಲ್ಲಿ ವಿವಿಧ‌ ಪೊಲೀಸ್ ಠಾಣೆಗಳಲ್ಲಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ನೇಮಕಾತಿ ಬಗ್ಗೆ ಚರ್ಚಿಸಲಾಗಿದೆ.

ಮಳೆಯಿಂದ ರಾಜ್ಯಕ್ಕೆ ಆಗಿರುವ ನಷ್ಟ ಎಷ್ಟು? ಕೇಂದ್ರದಿಂದ ಕೇಳಿರುವ ನೆರವೆಷ್ಟು?ಮಳೆಯಿಂದ ರಾಜ್ಯಕ್ಕೆ ಆಗಿರುವ ನಷ್ಟ ಎಷ್ಟು? ಕೇಂದ್ರದಿಂದ ಕೇಳಿರುವ ನೆರವೆಷ್ಟು?

ದಕ್ಷಿಣ ಕನ್ನಡ ಮತ್ತು ಮಂಗಳೂರು ಪೊಲೀಸ್ ವ್ಯಾಪ್ತಿಯಲ್ಲಿ ಕೆಲಸ ಜಾಸ್ತಿಯಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಾದರಿಯಲ್ಲೇ ಪೊಲೀಸ್ ಸಿಬ್ಬಂದಿ ನೇಮಕ ಮಾಡುವುದುದರ ಬಗ್ಗೆ ಚಿಂತಿಸಲಾಗಿದೆ. ಅಲ್ಲದೆ ಧರ್ಮವೀರ್ ಸಮಿತಿ ನೀಡಿರುವ ವರದಿಯ ಆಧಾರದಲ್ಲಿ ಯೋಜನೆ ರೂಪಿಸಲಾಗುವುದೆಂದು ಅವರು ಹೇಳಿದರು. ರಾಜ್ಯಾದ್ಯಂತ ಡ್ರಗ್ ಮಾಫಿಯಾವನ್ನು ಬುಡದಿಂದ ಕಿತ್ತೋಗೆಯಲು ಪೊಲೀಸ್ ಇಲಾಖೆ ಮುಂದಾಗಿದೆ. ಅಲ್ಲದೇ ಡ್ರಗ್ಸ್ ಮಾಫಿಯಾದಲ್ಲಿ ಕೈಜೋಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

English summary
speaking to media persons in Mangaluru ADGP Kamal Panth said that The police personals one who conducted Rescue operation in Jodupala and Madenadu name will be recommend for next year police state awards .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X