ವೃದ್ಧೆ ಮೇಲೆ ಅತ್ಯಾಚಾರ: ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು

ಮಂಗಳೂರು, ನ. 19: ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ್ದ ಯುವಕ ನಾಗೇಶ (25) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅತ್ಯಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಪಡೀಲ್ ಅಳಪೆ ಪ್ರದೇಶದ 69 ವರ್ಷ ವಯಸ್ಸಿನ ವೃದ್ಧೆಯನ್ನು ನಾಗೇಶ ಎಂಬಾತ ಚಾಕು ಹಿಡಿದು ಬೆದರಿಸಿ ಅತ್ಯಾಚಾರಗೈದಿದ್ದ. ಆಕೆಯ ಮುಖ ಹಾಗೂ ತುಟಿಯನ್ನು ಗಾಯಗೊಳಿಸಿದ್ದ. ಅಲ್ಲದೆ, ಆಕೆಯ ಮನೆಯಿಂದ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ 5,500 ರೂ. ನಗದು ಅಪಹರಿಸಿ ಓಡಿ ಹೋಗಿದ್ದ. [ಅತ್ಯಾಚಾರ ಮಾಡಿ ಬಲ ಕಳೆದುಕೊಂಡ]

rape

ತಕ್ಷಣ ಮನೆಯಿಂದ ಹೊರಬಂದ ವೃದ್ಧೆ ಜೋರಾಗಿ ಕಿರುಚಿದಾಗ ಅಕ್ಕಪಕ್ಕದ ಮನೆಯವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಆರೋಪ ನಿರಾಕರಿಸಿದ್ದ ನಾಗೇಶ ತಾನೇ ವೃದ್ಧೆಗೆ ಸಾಲ ನೀಡಿದ್ದೆ. ಆದ್ದರಿಂದ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದ. [ಲಾವಣ್ಯ ಹೋರಾಟ]

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅತ್ಯಾಚಾರ ನಡೆಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. [ಅತ್ಯಾಚಾರ ತಡೆ ಚಳವಳಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+