ಮಂಗಳೂರಿನಲ್ಲಿ ರಂಜಾನ್ ಸಂಭ್ರಮದ ಚಿತ್ರಗಳು
ಮಂಗಳೂರು,
ಜು.29 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಸಂಭ್ರಮ ಮಂಗಳವಾರ ಮುಂಜಾನೆಯಿಂದಲೇ ಆರಂಭಗೊಂಡಿದೆ. ಮಂಗಳೂರಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. id="toptextpromo"> id='are-slot-1' class='oiad oi-axt oiadv'>ಮಂಗಳವಾರ
ಬೆಳಗ್ಗೆ ಪಡೀಲ್ ಮತ್ತು ಮಂಗಳೂರಿನ ಲೈಟ್ ಹೌಸ್ ನಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ವಿಶೇಷ ಈದ್ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಒಂದು ತಿಂಗಳಿನಿಂದ ನಿಷ್ಠೆಯಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ಅಂತ್ಯಗೊಂಡಿದ್ದು, ಸಂಭ್ರಮ ಆರಂಭವಾಗಿದೆ. ರಂಜಾನ್ ಆಚರಣೆ ಚಿತ್ರಗಳು id='are-slot-2' class='oiad oi-axt oiadv'>
ದಕ್ಷಿಣ ಕನ್ನಡದಲ್ಲಿ ರಂಜಾನ್ ಸಂಭ್ರಮ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಸಂಭ್ರಮ ಮಂಗಳವಾರ ಮುಂಜಾನೆಯಿಂದಲೇ ಆರಂಭಗೊಂಡಿದೆ.

ಸಾಮೂಹಿಕ ಪ್ರಾರ್ಥನೆ
ಮಂಗಳವಾರ ಬೆಳಗ್ಗೆ ಪಡೀಲ್ ಮತ್ತು ಮಂಗಳೂರಿನ ಲೈಟ್ ಹೌಸ್ ನಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ವಿಶೇಷ ಈದ್ ಪ್ರಾರ್ಥನೆ ಸಲ್ಲಿಸಿದರು.

ಶುಭಾಶಯ ವಿನಿಮಯ
ವಿಶೇಷ ಈದ್ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹೊಸ ತಿಂಗಳು ಆರಂಭ
ಈದ್ ನೊಂದಿಗೆ ಮುಸ್ಲಿಂ ಕ್ಯಾಲೆಂಡರ್ ನ ರಮ್ಜಾನ್ ತಿಂಗಳು ಅಂತ್ಯಗೊಂಡು ಶವ್ವಾಲ್ ತಿಂಗಳ ಆರಂಭಗೊಳ್ಳುತ್ತದೆ.

ಉಪವಾಸ ಅಂತ್ಯ
ರಂಜಾನ್ ತಿಂಗಳಿನ ಕೊನೆಯ ಚಂದ್ರದರ್ಶನವಾದೊಡನೆ ಈದ್ ಸಂಭ್ರಮ ಗರಿಗೆದರುತ್ತದೆ ಮಾತ್ರವಲ್ಲದೆ ಕಳೆದ ಒಂದು ತಿಂಗಳಿನಿಂದ ನಿಷ್ಠೆಯಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ಅಂತ್ಯಗೊಳ್ಳುತ್ತದೆ.












Click it and Unblock the Notifications