ಸಿಎಂ ಯಡಿಯೂರಪ್ಪ, ಅಪ್ಪ ಅಲ್ಲ ಅಜ್ಜ - ರಮಾನಾಥ್ ರೈ
ಉಡುಪಿ, ಆಗಸ್ಟ್ 22: "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪ್ಪ ಅಲ್ಲ, ಅಜ್ಜ" ಎಂದು ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯವಾಡಿದ್ದಾರೆ.
ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನೂತನ ಮಂತ್ರಿಮಂಡಲದಲ್ಲಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇನ್ನು ಕೆಲವೇ ದಿನಗಳಲ್ಲಿ ನೈಜತೆ ಗೊತ್ತಾಗುತ್ತದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯು.ಟಿ.ಖಾದರ್, ದಕ್ಷಿಣ ಕನ್ನಡ ಹಾಗೂ ಉಡುಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಶುಭ ಹಾರೈಸಿದರು.

"ಕೋಟ ಶ್ರೀನಿವಾಸ ಪೂಜಾರಿ ಅವರು ಎರಡೂ ಜಿಲ್ಲೆಯ ಸಂಕಷ್ಟವನ್ನು ಅರಿತು ಸಮಗ್ರ ಅಭಿವೃದ್ಧಿಗಾಗಿ ತೊಡಗಿಸಿಕೊಳ್ಳಬೇಕು. ನಾನು ಸಚಿವನಾಗಿದ್ದಾಗ ಕೆಲವೊಂದು ಬೇಡಿಕೆಯನ್ನು ಕೋಟ ಶ್ರೀನಿವಾಸ ಪೂಜಾರಿ ಮುಂದಿಟ್ಟು, ಧರಣಿ ಮಾಡಿದ್ದರು. ಅವರ ಬೇಡಿಕೆಯನ್ನು ನಮ್ಮಿಂದಾದಷ್ಟು ಪರಿಹರಿಸಿದ್ದೇವೆ. ಅಂದು ಯಾವ ಬೇಡಿಕೆ ಇಟ್ಟು ಧರಣಿ ಕುಳಿತಿದ್ದರೋ ಆ ಬೇಡಿಕೆಯನ್ನು ಸಚಿವರಾಗಿ ಅವರು ಈಡೇರಿಸಬೇಕು. ಆಗ ನೈಜತೆ ಏನು ಎಂದು ಜನರಿಗೆ ಅರಿವಾಗುತ್ತದೆ" ಎಂದರು.












Click it and Unblock the Notifications