ಮಂಗಳೂರಿನಲ್ಲಿ ಗುರುವಾರ ಖಾಸಗಿ ಬಸ್ ಸಂಚಾರವಿಲ್ಲ

ಮಂಗಳೂರು, ಏ. 29 : 'ರಸ್ತೆ ಸುರಕ್ಷತಾ ಮಸೂದೆ' ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಕರೆ ನೀಡಿರುವ ಒಂದು ದಿನದ ಸಾರಿಗೆ ಮುಷ್ಕರಕ್ಕೆ ದಕ್ಷಿಣ ಕನ್ನಡದಲ್ಲಿ ಖಾಸಗಿ ಬಸ್ ಮಾಲೀಕರು ಬೆಂಬಲ ನೀಡಿದ್ದಾರೆ. ಆದ್ದರಿಂದ ಉಡುಪಿ ಮತ್ತು ಮಂಗಳೂರಿನಲ್ಲಿ ಗುರುವಾರ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.

ಏ.30ರ ಮುಷ್ಕರಕ್ಕೆ ಬೆಂಬಲ ನೀಡಲಿದ್ದೇವೆ ಆದ್ದರಿಂದ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಆ್ಯಂಡ್‌ ಎಂಜಿನಿಯರಿಂಗ್‌ ವರ್ಕರ್ಸ್‌ ಯೂನಿಯನ್‌ ಹಾಗೂ ಸಿಐಟಿಯು ಬಸ್‌ ನೌಕರರ ಸಂಘ ಜಂಟಿಯಾಗಿ ಹೇಳಿಕೆ ನೀಡಿವೆ. [ಗುರುವಾರ ಮುಷ್ಕರ ಏಕೆ?]

Bus

ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಮುಷ್ಕರಕ್ಕೆ ಬೆಂಬಲ ನೀಡಿದ್ದವು. ಆದರೆ, ಬೆಂಗಳೂರು ಸೇರಿದಂತೆ ಇತರ ನಗರದಲ್ಲಿ ಖಾಸಗಿ ಬಸ್ ಮಾಲೀಕರು ಬೆಂಬಲ ನೀಡಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಖಾಸಗಿ ಬಸ್ ಮಾಲೀಕರು ಒಂದು ದಿನದ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. [ಗುರುವಾರದ ಮುಷ್ಕರಕ್ಕೆ ನಾನಾ ಸಂಘಟನೆಗಳ ಬೆಂಬಲ]

ಆಟೋ ಚಾಲಕರ ಬೆಂಬಲ : ಬೆಂಗಳೂರಿನಲ್ಲಿ ಕೆಲವು ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿರುವಂತೆ ಮಂಗಳೂರಿನಲ್ಲಿಯೂ ಕೆಲವರು ಬೆಂಬಲ ಘೋಷಿಸಿದ್ದಾರೆ. ಆದರೆ, ಸಂಪೂರ್ಣವಾಗಿ ಆಟೋ ಸೇವೆ ಸ್ಥಗಿತಗೊಳ್ಳುವ ಕುರಿತು ಯಾವುದೇ ಅಂತಿಮ ನಿರ್ಧಾರ ಪ್ರಕಟಗೊಂಡಿಲ್ಲ. [ಮಂಗಳೂರು : ಖಾಸಗಿ ಬಸ್ ನಿಲ್ದಾಣ ಯೋಜನೆಗೆ ಮರುಜೀವ]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ಸುಗಳಿಗಿಂತ ಖಾಸಗಿ ಬಸ್ಸುಗಳನ್ನು ಜನರು ಹೆಚ್ಚು ಅವಲಂಭಿಸಿದ್ದಾರೆ. ಆದ್ದರಿಂದ, ಬಸ್ ಸಂಚಾರ ಸ್ಥಗಿತಗೊಂಡರೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ. ಆಟೋಗಳ ಸೇವೆಯೂ ಸ್ಥಗಿತಗೊಂಡರೆ ಜನರು ಸಂಚಾರ ನಡೆಸಲು ಪರದಾಡಬೇಕಾಗುತ್ತದೆ.

ಅಂದಹಾಗೆ ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ಖಾಸಗಿ ಬಸ್ ಪ್ರಯಾಣದರವನ್ನು ಪರಿಷ್ಕರಣೆ ಮಾಡಲಾಗಿತ್ತು. 2013ರ ದರ ಪಟ್ಟಿ ಅನ್ವಯ 2 ಮತ್ತು ಆರನೇ ಸ್ಟೇಜ್ ಹೊರತು ಪಡಿಸಿ ಉಳಿದ ಎಲ್ಲಾ ಸ್ಟೇಜ್‌ಗಳ ಪ್ರಯಾಣದರ 1 ರೂ. ಕಡಿಮೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+