ಮಂಗಳೂರಿನಲ್ಲಿ ಫಾಸ್ಟ್ ಫುಡ್ ನೀಡಲು ಸಬ್ ವೇ ಆರಂಭ
ಮಂಗಳೂರು, ಜೂ.14 : ಫಾಸ್ಟ್ ಫುಡ್ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ಸಬ್ ವೇ ಮಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ. ಶನಿವಾರ ಬಲ್ಮಠದಲ್ಲಿ ಸಬ್ ವೇ ಶಾಖೆಯನ್ನು ಆರಂಭಿಸಲಾಗಿದ್ದು, ಜನರಿಗೆ ಫಾಸ್ಟ್ ಫುಡ್ ಸೇವೆ ಒದಗಿಸಲು ಸಿದ್ಧವಾಗಿದೆ.
ಶನಿವಾರ ಬಲ್ಮಠದಲ್ಲಿ ಗೋಲ್ಡನ್ ಫುಡ್ಸ್ ಗ್ರೂಪ್ ಸಿಇಓ ವಿವೇಕ್ ಜಾರ್ಜ್ ಸಬ್ ವೇಯನ್ನು ಉದ್ಘಾಟಿಸಿದರು ನಂತರ ಮಾತನಾಡಿದ ಅವರು, ಕೇರಳ, ತಮಿಳುನಾಡು ಸೇರಿದಂತೆ ಸಬ್ ವೇ 41,981 ಶಾಖೆಗಳಲ್ಲಿ 107 ದೇಶಗಳಲ್ಲಿ ಹೊಂದಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಶನಿವಾರ ನೂತನ ಶಾಖೆಯನ್ನು ಆರಂಭಿಸುತ್ತಿದ್ದೇವೆ. ಜನರಿಗೆ ರುಚಿಕರವಾದ ತಿನಿಸನ್ನು ನೀಡುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಬಲ್ಮಠದಲ್ಲಿ ಶಾಖೆಯನ್ನು ಆರಂಭಿಲಾಗಿದೆ ಎಂದು ವಿವೇಕ್ ಜಾರ್ಜ್ ಹೇಳಿದರು.
1965ರಲ್ಲಿ ಆರಂಭವಾದ ಸಬ್ ವೇ ಅಮೆರಿಕನ್ ಸ್ಯಾಂಡ್ ವಿಚ್ ಗಳಿಗೆ ಪ್ರಸಿದ್ಧಿ ಪಡೆದಿದೆ. ಸಬ್ ವೇ ಸ್ಯಾಂಡ್ ವಿಚ್ ಅತ್ಯಂತ ರುಚಿಕರ ಮತ್ತು ಆರೋಗ್ಯ ಭರಿತವಾಗಿದ್ದು, ಜನರ ಪ್ರಶಂಸೆಗಳಿಸಿದೆ.

ಗ್ರಾಹಕರ ಮುಂದೆಯೇ ಸ್ಯಾಂಡ್ ವಿಚ್ ಗಳನ್ನು ತಯಾರಿಸಿ ಕೊಡುವುದು ಸಬ್ ವೇ ವಿಶೇಷತೆ. ಗ್ರಾಹಕರು ತಮಗೆ ಬೇಕಾದ ಸ್ಯಾಂಡ್ ವಿಚ್ ಗಳನ್ನು ಇಲ್ಲಿ ಆಯ್ಕೆ ಮಾಡಬಹುದು. [ಮಂಗಳೂರಿಗೆ ಬಂತು ಪಿವಿಆರ್]
ಸಬ್ ವೇ ತನ್ನ ಗ್ರಾಹಕರಿಗಾಗಿ ಸ್ಪೈಸಿ ಇಟಾಲಿಯನ್, ರೋಸ್ಟೆಡ್ ಚಿಕನ್ ಬೆಸ್ಟ್, ತುನಾ, ಲಂಬ್ ಸ್ಟೆಕ್ ಅಂಡ್ ವೆಜ್ಜಿ ಡಿಲೈಟ್ ಮುಂತಾದ ಸ್ಯಾಂಡ್ ವಿಚ್ ಗಳನ್ನು ಗ್ರಾಹಕರಿಗಾಗಿ ಪರಿಚಯಿಸಿದೆ.











Click it and Unblock the Notifications