ಮಂಗಳೂರು ಜನತೆಗೆ ಟ್ವಿಟ್ಟರ್ ಮೂಲಕ ಧನ್ಯವಾದ ಹೇಳಿದ ಮೋದಿ
ಮಂಗಳೂರು, ಡಿಸೆಂಬರ್ 19 : ಲಕ್ಷದ್ವೀಪಕ್ಕೆ ಹೋಗುವ ಮಾರ್ಗಮಧ್ಯೆ ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದಾಗ ಜನರು ತೋರಿದ ಪ್ರೀತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ಒಖಿ ಚಂಡಮಾರುತ ತುತ್ತಾದ ಪ್ರದೇಶಗಳ ವೀಕ್ಷಣೆಗೆ ಲಕ್ಷದ್ವೀಪಕ್ಕೆ ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡುವ ಸಲುವಾಗಿ ಸೋಮವಾರ ತಡರಾತ್ರಿ ಮಂಗಳೂರು ಬಜ್ಪಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸುತ್ತಿದ್ದಂತೆಯೇ ಮೋದಿ ಮೋದಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಈ ವೇಳೆ ಮೋದಿ ಅಲ್ಲಿ ನೆರೆದಿದ್ದ ಜನರ ಜೊತೆ ಗುಜರಾತ್ ಹಾಗು ಹಿಮಾಚಲ ಪ್ರದೆಶದ ಚುನಾವಣೆಯ ಗೆಲುವಿನ ವಿಜಯೋತ್ಸವನ್ನು ಆಚರಿಸಿದರು. ಕಾರ್ಯಕರ್ತರು ತೋರಿದ ಈ ಪ್ರೀತಿಯಿಂದ ಪುಳಕಿತರಾದ ಮೋದಿ ಟ್ವಿಟ್ಟರ್ ನಲ್ಲಿ ಮಂಗಳೂರು ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಮಂಗಳೂರಿನಲ್ಲಿ ಕಳೆದ ಮೋದಿ ಇಂದು (ಮಂಗಳವಾರ) ಮುಂಜಾನೆ 3 ಗಂಟೆಗೆ ಎದ್ದು ಯೋಗಭ್ಯಾಸ ಮಾಡಿ ಬಳಿಕ ನೀರುದೋಸೆ,ಮೂಡೆ, ಅವಲಕ್ಕಿ ಉಪ್ಪಿಟ್ಟು ಸವಿದರು.
I thank the people of Mangaluru for the warm welcome last evening. pic.twitter.com/UvCOdFm1p7
— Narendra Modi (@narendramodi) December 19, 2017
ಮೂಡೆ ಬಗ್ಗೆ ವಿಚಾರಿಸಿ ಅದರ ರುಚಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಮೋದಿ 2 ಬಾರಿ ಮೂಡೆ ಹಾಕಿಸಿಕೊಂಡು ಚಪ್ಪರಿಸಿದರು. ನಂತರ ತಿಂಡಿ ಬಡಿಸಿದವರಿಗೆ ಮೋದಿ ಪ್ರಶಂಸಿ ಲಕ್ಷದ್ವೀಪದತ್ತ ತೆರಳಿದರು.












Click it and Unblock the Notifications