ದಕ್ಷಿಣ ಕನ್ನಡ ಜಿಲ್ಲೆ ದೇಗುಲಗಳಿಗೆ ರವಿಶಾಸ್ತ್ರಿ ಭೇಟಿ
ಕಾರ್ಕಳ, ಫೆ.11: ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ದೇಗುಲಗಳಿಗೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಇತ್ತೀಚೆಗೆ ಭೇಟಿ ನೀಡಿದ್ದಾರೆ. ಕಳೆದ ಸುಮಾರು ಆರು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೊಮ್ಮೆಯಾದರೂ ಕನ್ನಡ ಜಿಲ್ಲೆಗಳ ದೇಗುಲಗಳಿಗೆ ಭೇಟಿ ನೀಡುವುದನ್ನು ರವಿಶಾಸ್ತ್ರಿ ರೂಢಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಗ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗ ಪ್ರತಿಷ್ಠಾಪನೆ ನೆರವೇರಿಸಲಾಗುತ್ತ್ತದೆ. ಈ ರೀತಿ ಪೂಜೆಯನ್ನು ನೇಮ ನಿಷ್ಠೆಯಿಂದ ಮಾಡಿದರೆ ಸಕಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಕನ್ನಡ ಜಿಲ್ಲೆಯಿಂದ ಮುಂಬೈಗೆ ವಲಸೆ ಹೋಗಿ ನೆಲೆಸಿದ ಶಾಸ್ತ್ರಿ ಅವರ ಕುಟುಂಬ ಕೂಡಾ ಈ ರೀತಿ ನಂಬಿಕೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ.
ನಾಗಬನದಲ್ಲಿ ರವಿಶಾಸ್ತ್ರಿ ದಂಪತಿ ಪೂಜೆಗೈದ ಪರಿಣಾಮ 18 ವರ್ಷಗಳ ನಂತರ ಅವರ ಮನೆಯಲ್ಲಿ ಮಗು ಅಳುವ ಸದ್ದು ಕೇಳಿಸಿತ್ತು. ಇದರಿಂದ ಪ್ರಭಾವಿತರಾದ ಶಾಸ್ತ್ರಿ ಅವರು ಸಮಯ ಸಿಕ್ಕಾಗಲೆಲ್ಲಾ ಕಾರ್ಕಳ ವಿಷ್ಣುಮೂರ್ತಿ ದೇಗುಲ, ಕುಕ್ಕೆ ಸುಬ್ರಮಣ್ಯ ದೇಗುಲ, ಕನ್ನಡ ಜಿಲ್ಲೆಯ ಅನೇಕ ನಾಗಬನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ದೇಗುಲಗಳಿಗೆ ಭೇಟಿ ನೀಡಿದ ರವಿಶಾಸ್ತ್ರಿ ಅವರ ಚಿತ್ರಗಳು ಮುಂದಿದೆ. ಚಿತ್ರ ಸರಣಿಯಲ್ಲಿರುವುದು ಕರ್ನಾಟಕದ ದೇಗುಲ ಭೇಟಿ ಸಂದರ್ಭದಲ್ಲಿ ತೆಗೆದ ಚಿತ್ರಗಳು... ತಪ್ಪದೇ ನೋಡಿ...ಚಿತ್ರಕೃಪೆ: ಪ್ರವೀಣ್ ಸ್ಟುಡಿಯೋ, ಶ್ರೀನಿಧಿ ಕಾರ್ವಲ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿದ್ದ ರವಿಶಾಸ್ತ್ರಿ ಶೇಷಸೇವೆ ಹಾಗೂ ಆಶ್ಲೇಷ ಬಲಿ ಹರಕೆ ಸೇವೆ ಸಲ್ಲಿಸಿ, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರವಿಶಾಸ್ತ್ರಿ ಅವರಿಗೆ ಶಾಲು ಹೊದಿಸಿ ಗೌರವ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರವಿಶಾಸ್ತ್ರಿ ಅವರಿಗೆ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಗಂಧ, ಮಹಾಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು.

ಸುಬಹ್ಮಣ್ಯ ಮಠಕ್ಕೂ ಭೇಟಿ ನೀಡಿದ ಶಾಸ್ತ್ರಿ
ಕುಕ್ಕೆ ಸುಬ್ರಮಣ್ಯ ದೇಗುಲ ಭೇಟಿ ನಂತರ ಸಂಪುಟ ನರಸಿಂಹಸ್ವಾಮಿ ಸುಬಹ್ಮಣ್ಯ ಮಠಕ್ಕೂ ಭೇಟಿ ನೀಡಿದರು

ಎಲ್ಲೆಡೆ ರವಿಶಾಸ್ತ್ರಿ ಅವರಿಗೆ ಆಶೀರ್ವಾದ
ಕಾರ್ಕಳದ ದೇಗುಲದ ನಂತರ ಕುಕ್ಕೆ ಸುಬ್ರಮಣ್ಯದಲ್ಲಿ ಶ್ರೀ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶಾಲು ಹೊದಿಸಿ, ಫಲಮಂತ್ರಾಕ್ಷತೆ ನೀಡಿ ಹರಸಿದರು.

ರವಿಶಾಸ್ತ್ರಿ ಅವರಿಗೆ ಗಣ್ಯರ ಸಾಥ್
ಪತ್ರಕರ್ತ ಮನೋಹರ್ ಪ್ರಸಾದ್, ಚಂದ್ರಶೇಖರ್ ಹೆಗ್ಡೆ, ನವೀನ್ ಕುಮಾರ್, ಹರಿಶ್ಚಂದ್ರ ರಾವ್, ಜೀವನಾದ ಶೆಟ್ಟಿ,ಅಶೋಕ್ ಕಾರಂತ ಮುಂತಾದವರು ರವಿಶಾಸ್ತ್ರಿ ಅವರ ದೇಗುಲ ಭೇಟಿ ಸಂದರ್ಭದಲ್ಲಿ ಜತೆಗಿದ್ದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications