ಹಳೆ ವಿದ್ಯಾರ್ಥಿಗಳಿಂದ ಸಂತ ಅಲೋಶಿಯಸ್ ಕಾಲೇಜಿಗೆ 13.5 ಲಕ್ಷ ದೇಣಿಗೆ
ಮಂಗಳೂರು, ಸೆಪ್ಟೆಂಬರ್ 21: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತ 1989ರ ಬಿ.ಕಾಂ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿ ವೇತನ ನಿಧಿಗೆ 13.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಸೆಪ್ಟೆಂಬರ್ 20ರಂದು ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಲೇಜಿನ ರೆಕ್ಟೊರ್ ಆದ ರೆ|ಫಾ| ಡೈನಿಶಿಯಸ್ ವಾಸ್ ಎಸ್.ಜೆ. ರವರಿಗೆ 13.5 ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರಿಸಲಾಯಿತು.

ಸಂತ ಅಲೋಶಿಯಸ್ ಕಾಲೇಜಿನ 1989ರ ಬಿ.ಕಾಂ ವಿದ್ಯಾರ್ಥಿಗಳ ಪರವಾಗಿ ಸಿ. ಎ. ಚಂದ್ರಮೋಹನ್ ಮತ್ತು ಸಿ.ಎ. ವಿಜಯ ಕುಮಾರ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ|ಡಾ| ಪ್ರವೀಣ್ ಮಾರ್ಟಿಸ್ ಎಸ್.ಜೆ ಉಪಸ್ಥಿತರಿದ್ದರು.












Click it and Unblock the Notifications