• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಹಜ ಸ್ಥಿತಿಗೆ ಮರಳಿದ ಮಂಗಳೂರಿನ ಶಂಕಿತ ನಿಪಾಹ್ ವೈರಸ್ ಸೋಂಕಿತರು

|

ಮಂಗಳೂರು ಮೇ 24: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ನಿಪಾಹ್ ವೈರಸ್ ರಾಜ್ಯಕ್ಕೂ ಹರಡುವ ಆತಂಕ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ.

ನಿಪಾಹ್ ವೈರಸ್ ಭಾದಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದೆ.

ಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮ

ಈ ನಡುವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಶಂಕಿತ ನಿಪಾಹ್ ವೈರಸ್ ಭಾದಿತರಿಬ್ಬರ ಆರೋಗ್ಯ ಸ್ಥಿತಿ ಸಹಜವಾಗಿದೆ. ಅವರಿಗೆ ಇತರ ರೋಗಿಗಳಂತೆಯೇ ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ ನಿಪಾಹ್ ವೈರಸ್ ಸೊಂಕು ತಗುಲಿರುವ ಶಂಕೆಯ ಮೇರೆಗೆ ಈ ರೋಗಿಗಳಿಬ್ಬರ ಗಂಟಲಿನ ದ್ರವದ ಮಾದರಿಯನ್ನು ಮಣಿಪಾಲದ ಮಣಿಪಾಲ ಸೆಂಟರ್ ಫಾರ್ ವೈರಸ್ ರಿಸರ್ಚ್ ಸೆಂಟರ್ ಗೆ ಕಳುಹಿಸಲಾಗಿದ್ದು, ಅದರ ವರದಿ ಈವರೆಗೆ ಬಂದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.

ಈ ಇಬ್ಬರು ಶಂಕಿತ ರೋಗಿಗಳಿಗೆ ನಿಪಾಹ್ ವೈರಸ್ ತಗುಲಿರುವ ಸಾಧ್ಯತೆ ತುಂಬಾ ಕಡಿಮೆ ಇದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಪಾಹ್ ವೈರಸ್ ಆತಂಕ: ದ.ಕ. ಜಿಲ್ಲೆ ಶ್ರೀ ಕ್ಷೇತ್ರಗಳಲ್ಲಿ ಕಟ್ಟೆಚ್ಚರ

ಮಣಿಪಾಲ ದಿಂದ ವರದಿ ಬಂದ ಬಳಿಕ ವಷ್ಟೇ ಈ ಇಬ್ಬರು ರೋಗಿಗಳಿಗೆ ತಗುಲಿರುವ ಸೊಂಕು ನಿಪಾಹ್ ವೋ ಅಥವಾ ಇತರ ಕಾಯಿಲೆಯೊ ಎಂಬುದು ಧೃಡಪಡಬೇಕಷ್ಟೆ. ಈ ವರದಿ ಇಂದು ಸಂಜೆ ದೊರಕುವ ಸಾಧ್ಯತೆಯಿದೆ.

English summary
Conditions of Nipah infection has been detected in two people who are being treated at a private hospital in Mangaluru.But Nipah infection not yet confirmed in two people who are treated in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more