ಬಂಟ್ವಾಳ ತಾಲೂಕಿನ 9 ಕಡೆಗಳಲ್ಲಿ ಎನ್‌ಐಎ ದಾಳಿ, ಎಲ್ಲೆಲ್ಲಿ ಎಂದು ತಿಳಿಯಿರಿ
ಮಂಗಳೂರು, ಮೇ, 31: ಈಗಾಗಗಲೇ ಬುಧವಾರ (ಮೇ 31) ಬೆಳ್ಳಂಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ದಾಳಿ ನಡೆಸಿದೆ. ಈ ಪೈಕಿ ಇದೀಗ ಬಂಟ್ವಾಳ ತಾಲೂಕಿನ 9 ಕಡೆಗಳಲ್ಲಿ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಎರಡು ಕಡೆ, ನರಿಕೊಂಬು ಗ್ರಾಮದ ಎರಡು ಕಡೆ, ಮಾಣಿ ಎರಡು ಕಡೆ, ಬೊಳ್ಳಾಯಿ, ನಜೀಪ ನಡು, ಕೊಳ್ನಾಡುವಿನಲ್ಲಿ ಎನ್‌ಐಎ ದಾಳಿ ನಡೆಸಿದೆ.
ಝಕಾರಿಯಾ ಗೋಳ್ತಮಜಲು, ಇಜಾಜ್ ಆಹಮ್ಮದ್ ನರಿಕೊಂಬು, ಅಬುಬಕ್ಕರ್ ಸಿದ್ದೀಕ್ ಕೊಳ್ನಾಡು ಎನ್ನುವವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಇನ್ನು ಝಾಕೀರ್ ಸಜೀಪ ನಡು, ಅಬ್ದುಲ್ ಮುಭಾರಕ್ ಬೊಳ್ಳಾಯಿ, ಎಂ.ಡಿ. ಉಜಾಲೈಪ್ ಮಾಣಿ, ಮಹಮ್ಮದ್ ರಮೀಜ್ ನೆಹರುನಗರ, ಆಸ್ಪಕ್ ಗೋಳ್ತಮಜಲು, ಜುಬೈರ್ ನೇರಳಕಟ್ಟೆ ಮನೆ ಮೇಲೂ ಎನ್‌ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಈ ವೇಳೆ ಪುತ್ತೂರಿನ ನಾಲ್ವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್, ಕೋಡಿಂಬಾಡಿ (37), ಫೈಜಲ್ ಅಹಮ್ಮದ್, ತಾರಿಗುಡ್ಡೆ, ಸಂಶುದ್ಧೀನ್ ಕೂರ್ನಡ್ಕ ಬಂಧಿತ ಆರೋಪಿಗಳಾಗಿದ್ದಾರೆ. ಈ ನಾಲ್ವರು ಆರೋಪಿಗಳಿಗೆ ಪಿಎಫ್ಐ ಸಂಪರ್ಕ ಇರುವ ಸಾಧ್ಯತೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿ 16 ಕಡೆ ಎನ್‌ಐಎ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಲಾ ಹಣ ವರ್ಗಾವಣೆ ವಿಚಾರವಾಗಿ ಹಲವರ ಮನೆ, ಕಚೇರಿ, ಒಂದು ಆಸ್ಪತ್ರೆ ಮೇಲೆ ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ಎನ್‌ಐಎ ದಾಳಿ ನಡೆಸಿದೆ. ಹಾಗೆಯೆ ಬಿಹಾರದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ಪ್ರಕರಣದ ಕುರಿತು ಎನ್‌ಐಎ ತನಿಖೆ ಮುಂದುವರೆಸಿದೆ ಎಂದು ತಿಳಿದುಬಂದಿದೆ.












Click it and Unblock the Notifications