ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ
ಮಂಗಳೂರು, ಅಕ್ಟೋಬರ್. 01: ಅಕ್ರಮ ಸಂಬಂಧದಿಂದ ಹುಟ್ಟಿದ ಒಂದು ವಾರದ ಗಂಡು ಮಗುವನ್ನು ಕೊಂದು ಮಣ್ಣಿನಡಿಯಲ್ಲಿ ಹೂತಿಟ್ಟ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ಪಟ್ರಮೆ ಎಂಬಲ್ಲಿ ಬೆಳಕಿಗೆ ಬಂದಿದೆ. ಹಸುಗೂಸನ್ನು ಕೊಂದ ಪಾಪಿ ತಂದೆಯನ್ನು ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಗುವನ್ನು ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೊಹನ್ ಅವರ ಸಮ್ಮುಖದಲ್ಲಿ ಹೂತಿಟ್ಟ ಸ್ಥಳದಿಂದ ಮೇಲಕ್ಕೆತ್ತಿ ಶವ ಪರೀಕ್ಷೆ ಮಾಡಲಾಯಿತು.
ಅರೋಪಿ ಹಾಸನ ಮೂಲದ ಶಿವಪ್ಪ ಎಂದು ಗುರುತಿಸಲಾಗಿದ್ದು, ಪಟ್ರಮೆಗೆ ಕೂಲಿ ಕೆಲಸಕ್ಕೆ ಬಂದಿದ್ದ ಎಂದು ಹೇಳಲಾಗಿದೆ. ಈತ ಇಲ್ಲಿನ ಸ್ಥಳೀಯ ಮಹಿಳೆಯಬ್ಬರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಎಂದು ಹೇಳಲಾಗಿದೆ.

ಮಹಿಳೆಗೆ 10 ವರ್ಷದ ಪ್ರಾಯದ ಹೆಣ್ಣು ಮಗಳಿದ್ದು, ಹುಟ್ಟಿದ ಗಂಡು ಮಗುವನ್ನು ಕೊಂದಿರುವುದು ಬಾಲಕಿ ಗಮನಿಸಿದ್ದಾಳೆ. ಈ ವಿಷಯವನ್ನು ಬಾಲಕಿ ಸಂಬಂಧಿಯೊಬ್ಬರಿಗೆ ತಿಳಿಸಿದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಶಿವಪ್ಪನನ್ನು ಪೊಲೀಸರು ಬಂಧಿಸುತ್ತಿದ್ದಂತೆ ಮಗುವಿಗೆ ಜನ್ಮ ನೀಡಿದ ಮಹಿಳೆ ತಲೆ ಮರೆಸಿಕೊಂಡಿದ್ದಾಳೆ. ಮಹಿಳೆಯ ಬಂಧನಕ್ಖೂ ಪೋಲೀಸರು ಬಲೆ ಬೀಸಿದ್ದಾರೆ.












Click it and Unblock the Notifications