ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು

ಮಂಗಳೂರು, ಜನವರಿ 30 : ಬೆಂಗಳೂರು-ಮಂಗಳೂರು ನಡುವೆ ಶೀಘ್ರದಲ್ಲಿಯೇ ಮತ್ತೊಂದು ರೈಲು ಆರಂಭವಾಗಲಿದೆ. ನೈಋತ್ಯ ರೈಲ್ವೆ ವಯಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಇಲಾಖೆ ಒಪ್ಪಿಗೆ ನೀಡಿದ್ದು, ದಿನಾಂಕ ನಿಗದಿ ಮಾತ್ರ ಬಾಕಿ ಇದೆ.

ಬೆಂಗಳೂರು-ಶ್ರವಣಬೆಳಗೊಳ-ಹಾಸನ-ಮಂಗಳೂರು ಸೆಂಟ್ರಲ್ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ವಾರದಲ್ಲಿ ಮೂರು ದಿನಗಳ ಕಾಲ ಈ ರೈಲು ಸಂಚರಿಸಲಿದೆ. ರೈಲು 22 ಬೋಗಿಗಳನ್ನು ಹೊಂದಿರಲಿದೆ.

ನೈಋತ್ಯ ರೈಲ್ವೆ ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಆರಂಭಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ದಿನಾಂಕ ನಿಗದಿ ಪ್ರಕ್ರಿಯೆ ಮಾತ್ರ ಬಾಕಿ ಇದೆ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಈ ರೈಲು ಹೊರಡುತ್ತದೆ.

New express train between Mangaluru and Bengaluru soon

ವೇಳಾಪಟ್ಟಿ : ಮಂಗಳವಾರ, ಶುಕ್ರವಾರ, ಭಾನುವಾರ ಮಧ್ಯಾಹ್ನ 4.30ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು 8 ಗಂಟೆಗೆ ಹಾನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಲುಪುತ್ತದೆ.

ಮಂಗಳೂರಿನಿಂದ ಸೋಮವಾರ, ಬುಧವಾರ, ಶನಿವಾರ ಸಂಜೆ 7 ಗಂಟೆಗೆ ಹೊರಡಲಿರುವ ರೈಲು ತಡರಾತ್ರಿ 1.30ಕ್ಕೆ ಹಾಸನಕ್ಕೆ ತಲುಪಲಿದೆ. ಮುಂಜಾನೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಸೇರಲಿದೆ.

ನಿಲ್ದಾಣಗಳು : ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ, ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

ಹಾಸನ-ಯಶವಂತಪುರ ರೈಲು ಮಾರ್ಗ ನಿರ್ಮಾಣವಾದ ಬಳಿಕ ರೈಲುಗಳ ಸಂಚಾರ ಹೆಚ್ಚುತ್ತಿದೆ. ಬೆಳಗ್ಗೆ 7.10ಕ್ಕೆ ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಮಂಗಳೂರಿಗೆ ರೈಲು ಸಂಚರಿಸುತ್ತಿದೆ.

ಮಧ್ಯಾಹ್ನ 1 ಗಂಟೆಗೆ ಯಶವಂತಪುರ-ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಮೈಸೂರಿಗೆ ಪ್ಯಾಸೆಂಜರ್ ರೈಲು, ಸಂಜೆ 6.10ಕ್ಕೆ ಯಶವಂತಪುರ-ಶ್ರವಣಬೆಳಗೊಳ ಮಾರ್ಗವಾಗಿ ಹಾಸನಕ್ಕೆ ಇಂಟರ್‌ಸಿಟಿ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+