ಮೈತ್ರಿ ಸರ್ಕಾರ ಉಳಿಸಿದ್ದು ಸಿದ್ದರಾಮಯ್ಯ ಅಲ್ಲ:ಜನಾರ್ಧನ ಪೂಜಾರಿ
ಮಂಗಳೂರು, ಜನವರಿ 24: ಇತ್ತೀಚೆಗೆ ಸೃಷ್ಟಿಯಾಗಿದ್ದ ಬಿಕ್ಕಟ್ಟಿನಿಂದ ರಾಜ್ಯ ಸರಕಾರವನ್ನು ಪಾರು ಮಾಡಿದ್ದೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರು. ಅವರಿಂದಲೇ ಸರಕಾರ ಉಳಿದಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಇತ್ತೀಚಿನ ರೆಸಾರ್ಟ್ ರಾಜಕಾರಣ, ಆಪರೇಷನ್ ಕಮಲದಿಂದ ಸೃಷ್ಟಿಯಾಗಿದ್ದ ಬಿಕ್ಕಟ್ಟನ್ನು ಚಾಣಾಕ್ಷತೆಯಿಂದ ಶಮನಗೊಳಿಸಿ ಸರಕಾರ ಉಳಿಸುವಲ್ಲಿ ದೊಡ್ಡ ಗೌಡರದ್ದೇ ಮಹತ್ವದ ಪಾತ್ರ.
ದೇವೇಗೌಡರು ನನ್ನನ್ನು ಎಲ್ಲಿ ಭೇಟಿಯಾದರೂ 'ಗುರುಗಳೇ' ಎಂದು ಆತ್ಮೀಯತೆಯಿಂದ ಕರೆಯುತ್ತಾರೆ. ದೇವೇಗೌಡರು ನನ್ನನ್ನು ಸುಮ್ಮನೆ ಗುರುಗಳೇ ಎಂದು ಕರೆಯುವುದಿಲ್ಲ. ಇದಕ್ಕೆ ಕಾರಣ ಗಳು ಹಲವಾರು ಇದೆ. ದೇವೇಗೌಡರ ರಾಜಕೀಯ ಅನುಭವವನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ತಿಳಿಸಿದರು.

ಇತ್ತೀಚಿನ ಬಿಕ್ಕಟ್ಟಿನಿಂದ ರಾಜ್ಯದ ಮೈತ್ರಿ ಸರಕಾರವನ್ನು ಉಳಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ . ಮೈತ್ರಿ ಸರಕಾರ ಉಳಿದಿದ್ದೇ ಎಚ್ ಡಿ ಕುಮಾರ ಸ್ವಾಮಿ ಹಾಗೂ ದೇವೇಗೌಡರಿಂದ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದೇ ಪಕ್ಷವನ್ನು ಮುಗಿಸಲು ಎಂದು ಕಿಡಿಕಾರಿದರು.












Click it and Unblock the Notifications