ಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿ
ಮಂಗಳೂರು, ಮೇ 06: ಕಾರ್ ವಿಂಡ್ ಶೀಲ್ಡ್ ಮೇಲೆ, ಬೈಕುಗಳ ಹಿಂದೆ-ಮುಂದೆ, ಮೊಬೈಲ್ ವಾಲ್‌ಪೇಪರ್ ಆಗಿ, ಟಿ ಶರ್ಟ್ ಮೇಲೆ, ವಾಟ್ಸಾಪ್ ಡಿಪಿಯಾಗಿ ಕಾಣುವ ಕಡು ಕೆಂಪು ಕಣ್ಣಿನ ಉಗ್ರ ರೂಪಿ ಹನುಮನ ಚಿತ್ರವನ್ನು ರಚಿಸಿದ್ದ ಕರಣ್ ಆಚಾರ್ಯ ಅವರನ್ನು ಮೋದಿ ನಿನ್ನೆ ಹಾಡಿ ಹೊಗಳಿದರು.
ನಿನ್ನೆ ಮಂಗಳೂರಿನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, 'ಕರಣ್ ಆಚಾರ್ಯ ಅವರು ತಮ್ಮ ಕಲಾಕೃತಿಯಿಂದ ದೇಶದ ಮೆಚ್ಚುಗೆ ಗಳಿಸಿದ್ದಾರೆ. ಅವರ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ನನ್ನ ವಂದನೆಗಳು' ಎಂದು ಮೋದಿ ಹೊಗಳಿದರು.
ಸಂದರ್ಶನ ಪಡೆಯಲು ರಾಷ್ಟ್ರೀಯ ವಾಹಿನಿಗಳು ಅವರ ಮನೆ ಮುಂದೆ ಸಾಲುಗಟ್ಟಿದ್ದವು. ಅವರ ಪ್ರತಿಭೆಯನ್ನು ಇಡೀ ದೇಶವೇ ಕೊಂಡಾಡಿತು ಆದರೆ ಅದನ್ನು ಕಾಂಗ್ರೆಸ್ ಸಹಿಸಲಿಲ್ಲ, ಅವರಿಗೆ ಕಿರುಕುಳ ನೀಡಿತು. ಕಾಂಗ್ರೆಸ್‌ಗೆ ಕರಣ್ ಆಚಾರ್ಯ ಅವರ ಕಲೆಯನ್ನು ಅದಕ್ಕೆ ಸಿಕ್ಕ ಪ್ರಸಿದ್ಧಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೋದಿ ದೂರಿದರು.

ಕರಣ್ ಆಚಾರ್ಯ ಅವರ ಕಲಾಕೃತಿ ಉಗ್ರ ಹಿಂದುತ್ವದ ಸಂಕೇತ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು. ಕೇರಳದ ಲೇಖಕಿಯೊಬ್ಬರು ಉಗ್ರ ಹನುಮನ ಚಿತ್ರ ಇರುವ ಆಟೋ, ಟ್ಯಾಕ್ಸಿಗಳನ್ನು ಹತ್ತುವುದಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದರ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೆಯಿತು.












Click it and Unblock the Notifications