ಮಂಗ್ಳೂರು ಮುಸ್ಲಿಂ ಸಮುದಾಯ ಸಿದ್ದುಗೆ ಸಲ್ಲಿಸಿದ ಬೇಡಿಕೆಯೇನು?

ಮಂಗಳೂರು, ನವೆಂಬರ್, 18: ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂರ ಮೇಲೆ ಕೋಮುವಾದಿಗಳಿಂದ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸುವಂತೆ ಒತ್ತಾಯಿಸಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ, ಅಶ್ರಫ್ ರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 8 ಬೇಡಿಕೆಗಳನ್ನು ಮುಂದಿರಿಸಿದೆ.

ಸಂಘ ಪರಿಹಾರ, ಬಜರಂಗದಳ, ಯುವಸೇನೆ, ಸನಾತನ ಸಂಸ್ಥೆಗಳು ಮುಸ್ಲಿಮರ ಮೇಲೆ, ಮಂಗಳೂರು ಕಾರಾಗೃಹದಲ್ಲಿ ನವೆಂಬರ್ 2ರಂದು ನಡೆದ ಕೈದಿ ಯೂಸುಪ್ ಮಾಡೂರು ಹತ್ಯೆ ಒಳಗೊಂಡಂತೆ ನಾನಾ ರೀತಿಯ ಹಲ್ಲೆಗಳನ್ನು ನಡೆಸಿವೆ ಎಂದು ಆರೋಪಿಸಿರುವ ನಿಯೋಗ, ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾರ ನೇತೃತ್ವದಲ್ಲಿ ದ.ಕ.ಮುಸ್ಲಿಮ್ ಸಂಘಟನೆಗಳ ಮೂಲಕ ಮನವಿ ಸಲ್ಲಿಸಿದೆ.[ಮಂಗಳೂರಲ್ಲಿ ಮಹಮ್ಮದ್ ಫೈಜ್ ಖಾನ್ ಅವರ 'ಒಂದು ಗೋವಿನ ಕಥಾ']

Muslim community of Dakshina kannada appeal to Chief Minister Siddaramaiah to implement their 8 demands

ಒಕ್ಕೂಟದ ಬೇಡಿಕೆಗಳು :

ರಫೀಉದ್ದೀನ್ ಕುದ್ರೋಳಿ, ಅಬ್ದುಲ್ ಹಮೀದ್ ಕುದ್ರೋಳಿ, ಸಿ.ಎಂ. ಮುಸ್ತಫಾ, ಅಹ್ಮದ್ ಬಾವಾ ಬಜಾಲ್ ಹಾಗೂ ಉದ್ಯಮಿ ಪಿ.ಪಿ.ಮಜೀದ್ ಮೊದಲಾದವರ ಪಾಲ್ಗೊಳ್ಳುವಿಕೆಯಲ್ಲಿ 8 ಬೇಡಿಕೆ ಸಲ್ಲಿಸಿದ್ದಾರೆ.

* ಕಾರಾಗೃಹದಲ್ಲಿ ಹತ್ಯೆಯಾದ ಯೂಸೂಫ್ ಮಾಡೂರ್ ಕುಟುಂಬಕ್ಕೆ ರೂಪಾಯಿ 50 ಲಕ್ಷ ಪರಿಹಾರ ಧನವನ್ನು ಸರಕಾರದ ವತಿಯಿಂದ ಪಾವತಿಸುವುದು.

* ಯೂಸುಫ್ ಮಾಡೂರ್ ಹತ್ಯೆ ಬಗ್ಗೆ ಸಿಓಡಿ ತನಿಖೆ ನಡೆಸುವುದು.

* ಬಂಧಿಖಾನೆ ಇಲಾಖೆ ತನಿಖೆಯ ನೇತೃತ್ವವನ್ನು ಪ್ರಸ್ತುತ ಬೆಳಗಾಮ್ ಜೈಲಿನಲ್ಲಿ ಕರ್ತವ್ಯ ಹೊಂದಿರುವ ಟಿ.ಟಿ ಸಕ್ಸೇನಾರವರಿಗೆ ವಹಿಸಿ ಕೊಡುವುದು.

* ಈ ಹತ್ಯೆಗೆ ಮಾರಕ ಆಯುಧ ಒದಗಿಸಿದ ಜೈಲು ಸಿಬ್ಬಂದಿ ಮತ್ತು ಭಾಹ್ಯ ವ್ಯಕ್ತಿಗಳು ಮತ್ತು ಹಣಕಾಸು ಪೂರೈಸಿದ ವ್ಯಕ್ತಿಗಳನ್ನು ಬಂಧಿಸುವುದು.[ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವರೇ: ಆರೆಸ್ಸೆಸ್ ]

* ಜಿಲ್ಲೆಯಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಮುಸ್ಲಿಮ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು.

* ಪೊಲೀಸ್ ಇಲಾಖೆಯಲ್ಲಿನ ಮತೀಯ ವ್ಯಕ್ತಿತ್ವದ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವುದು.

* ಮುಸ್ಲಿಮ್ ಸಮುದಾಯದ ಆರಾಧನಾಲಯ, ಮಾನವ ಹಕ್ಕುಗಳ ಸಂರಕ್ಷಣೆ, ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಖಾತರಿಗೊಳಿಸುವುದು.

* ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಸದೃಢಗೊಳಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+