ವೈರಲ್ ಆಯ್ತು ಹಿಂದೂ ಯುವತಿ, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ
ಮಂಗಳೂರು, ಜನವರಿ 04: ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗುತ್ತಿರುವ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ವಿವಾಹ ಆಮಂತ್ರಣ ಪತ್ರಿಕೆಯೊಂದು ಇದೀಗ ವಿವಾದ ಸೃಷ್ಟಿಸಿದೆ.
ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಪ್ರೇಮ ವಿವಾಹದ ಆಮಂತ್ರಣ ಪತ್ರಿಕೆ ಇದಾಗಿದ್ದು, ಆಮಂತ್ರಣ ಪತ್ರಿಕೆ ಬಹಿರಂಗಗೊಂಡ ಬಳಿಕ ಈಗ ವಿವಾದ ಸೃಷ್ಟಿಯಾಗಿದೆ. ಕಳೆದ 3 ದಿನಗಳಿಂದ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನನ್ನು ವಧು-ವರ ಎಂದು ಹೆಸರಿಸಲಾಗಿದೆ.
ಚೇಳ್ಯಾರು ಪದವಿನ ಬಿಲ್ಲವ ಸಮಾಜದ ಯುವತಿಯ ವಿವಾಹವು, ತಡಂಬೈಲು ಅಝೀಂಖಾನ್ ಎಂಬುವವರ ಮಗನೊಂದಿಗೆ ನಿಶ್ಚಯವಾಗಿದ್ದು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 20 ರಂದು ವಿವಾಹ ನಡೆಯಲಿದೆ ಎಂದು ಬರೆಯಲಾಗಿದೆ.
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಿರಿಯ ಪೊಲೀಸ್ ಆಧಿಕಾರಿಗಳ ನೇತೃತ್ವದಲ್ಲಿ ಸುರತ್ಕಲ್ ಠಾಣೆಯಲ್ಲಿ ಮಾತುಕತೆ ನಡೆದಿದೆ. ವಿಭಾಗದ ಡಿಸಿಪಿ ಹನುಮಂತರಾಯ ಸುರತ್ಕಲ್ ಠಾಣೆಯಲ್ಲಿ ಎರಡೂ ಕುಟುಂಬದವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸುರತ್ಕಲ್ ಇನ್‌ಸ್ಪೆಕ್ಟರ್ ಕೆ.ಜಿ. ರಾಮಕೃಷ್ಣ ಉಪಸ್ಥಿತರಿದ್ದರು. ಮುಂದೆ ಓದಿ...

ವಿವಾಹಕ್ಕೆ ಸಮ್ಮತಿ
ಉಭಯ ಕುಟುಂಬಗಳು ವಿವಾಹಕ್ಕೆ ಸಮ್ಮತಿ ಸೂಚಿಸಿವೆ. ಯುವಕ-ಯುವತಿ ಪ್ರಬುದ್ಧರಾಗಿರುವ ಕಾರಣ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ಆಮಂತ್ರಣ ಪತ್ರಿಕೆ ಹಂಚಿಕೆ
ಚೇಳಾರುವಿನ ಹಿಂದು ಯುವತಿ ಹಾಗೂ ತಡಂಬೈಲ್ ಮಹಮ್ಮದ್ ಸಲೀಂ ಯಾನೆ ಪ್ರವೀಣ್ ಹಲವು ಸಮಯದಿಂದ ಪ್ರೀತಿಸುತ್ತಿದ್ದು, ವಿವಾಹವಾಗಲು ನಿರ್ಧರಿಸಿದ್ದರು. ಇವರ ಮದುವೆ ಜನವರಿ 20ರಂದು ಕಟೀಲು ದೇವಸ್ಥಾನದಲ್ಲಿ ನಡೆಸಲು ಉಭಯ ಕುಟುಂಬಗಳು ನಿರ್ಧರಿಸಿ, ಆಮಂತ್ರಣ ಪತ್ರಿಕೆ ಹಂಚಿದ್ದರು. ಇದನ್ನು ತಿಳಿದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಈ ವಿವಾಹವನ್ನು ಆಕ್ಷೇಪಿಸಿದ್ದಾರೆ. ಲವ್ ಜಿಹಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಅಯ್ಯಪ್ಪ ಮಾಲಾಧಾರಿ
ಮಹಮ್ಮದ್ ಸಲೀಂ ಅವರ ಕುಟುಂಬ ಹಿಂದೂ ನಂಬಿಕೆಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಇದಕ್ಕೆ ಕಾರಣಗಳು ಇದೆ. ಮಹಮ್ಮದ್ ಸಲೀಂ ಅವರ ತಾಯಿ ಹಿಂದೂವಾಗಿದ್ದು ಮೂಲತಃ ಶಿವಮೊಗ್ಗದವರಾಗಿದ್ದಾರೆ. ಇವರು ಕುಟುಂಬ ಕಳೆದ 25 ವರ್ಷಗಳಿಂದ ಚೇಳಾರುವಿನಲ್ಲಿ ವಾಸಿಸುತ್ತಿದ್ದು, ಹಿಂದು ಧರ್ಮದ ನಂಬಿಕೆ, ಆಚರಣೆ ಮೇಲೆ ವಿಶೇಷ ಪ್ರೀತಿಹೊಂದಿದೆ. ಅದಲ್ಲದೇ ಮಹಮ್ಮದ್ ಸಲೀಂ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ.

ಮದುವೆಯಾಗಲು ನಿರ್ಧಾರ
ಮಹಮ್ಮದ್ ಸಲೀಂ 4 ವರ್ಷಗಳಿಂದ ಶಬರಿಮಲೆ ಮಾಲೆ ಹಾಕಿ ವ್ರತಾಚರಣೆ ಮಾಡಿ ಯಾತ್ರೆ ಹೋಗುತ್ತಿದ್ದಾರೆ. ಈ ಬಾರಿ ಜನವರಿ 6ರಂದು ಶಬರಿಮಲೆ ಯಾತ್ರೆಗೆ ತೆರಳಲಿದ್ದು ಯಾತ್ರೆಯಿಂದ ಬಂದ ಬಳಿಕ ಮದುವೆ ಆಗಲು ನಿರ್ಧರಿಸಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications