ಮುಂಬೈ-ಗೋವಾ ಹೆದ್ದಾರಿ ಮಂಗಳೂರು ತನಕ ವಿಸ್ತರಣೆ; ಗಡ್ಕರಿ

ಮಂಗಳೂರು, ಏಪ್ರಿಲ್ 04; "ಮುಂಬೈ-ಗೋವಾ ಸಂಪರ್ಕಿಸುವ ಹೆದ್ದಾರಿ ಕಾಮಗಾರಿಯನ್ನು ಈ ವರ್ಷದಲ್ಲಿ ಪೂರ್ಣಗೊಳಿಸಲಾಗುತ್ತದೆ. ಈ ಹೆದ್ದಾರಿಯನ್ನು ಕರ್ನಾಟಕದ ಮಂಗಳೂರು ತನಕ ವಿಸ್ತರಣೆ ಮಾಡಲಾಗುತ್ತದೆ" ಎಂದು ನಿತಿನ್ ಗಡ್ಕರಿ ಹೇಳಿದರು.

ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ರಾಯಗಢದಲ್ಲಿ 131.87 ಕೋಟಿ ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮುಂಬೈ-ಗೋವಾ ಹೆದ್ದಾರಿ ಕರಾವಳಿ ಮತ್ತು ಕೊಂಕಣ ಭಾಗದ ಅಭಿವೃದ್ಧಿಗೆ ಸಹಾಯಕವಾಗಲಿದೆ. 11 ಹಂತದಲ್ಲಿ ಈ ಹೆದ್ದಾರಿ ಕಾಮಗಾರಿ ಕೈಗೊಂಡಿದ್ದು, ಈ ವರ್ಷವೇ ಪೂರ್ಣಗೊಳಿಸಲಾಗುತ್ತದೆ" ಎಂದು ಸಚಿವರು ಭರವಸೆ ನೀಡಿದರು.

"ಹೆದ್ದಾರಿ ನಿರ್ಮಾಣದ ಪ್ರಾಥಮಿಕ ಹಂತದ ಕೆಲಸ ಭೂ ಸ್ವಾಧೀನದ ಕಾರಣ ವಿಳಂಬವಾಯಿತು. ಬಳಿಕ ರೈಲ್ವೆ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕಾದ ಕಾರಣ ಕಾಮಗಾರಿ ನಿಧಾನವಾಯಿತು. 11 ಹಂತಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಈ ವರ್ಷ ಪೂರ್ಣಗೊಳ್ಳಲಿದೆ" ಎಂದರು.

Mumbai-Goa Highway Will Extend Till Mangaluru Says Nitin Gadkari

"ಈ ಹೆದ್ದಾರಿ ಗೋವಾ-ಮುಂಬೈ ನಡುವೆ ಮಾತ್ರ ಇರುವುದಿಲ್ಲ. ಇದನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗುತ್ತದೆ. ಈ ಹೆದ್ದಾರಿಯಲ್ಲಿ ಸರ್ಕಾರಿ ಭೂಮಿಯು ಲಭ್ಯವಿದೆ. ಲಾಜಿಸ್ಟಿಕ್ ಪಾರ್ಕ್ ಮತ್ತು ಟ್ರಕ್ ಟರ್ಮಿನಲ್ ಸ್ಥಾಪನೆ ಮಾಡುವ ಉದ್ದೇಶವಿದೆ" ಎಂದು ನಿತಿನ್ ಗಡ್ಕರಿ ತಿಳಿಸಿದರು.

ಕೈಗಾರಿಕಾ ಕಾರಿಡಾರ್‌ಗಳು; ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸಾರಿಗೆ ಸಂಪರ್ಕ ಮೂಲಸೌಕರ್ಯದ ಬೆನ್ನೆಲುಬಾಗಿ ಸಮಗ್ರ ಕೈಗಾರಿಕಾ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮದ ಅಡಿಯಲ್ಲಿ ಗ್ರೀನ್‌ಫೀಲ್ಡ್ ಸ್ಮಾರ್ಟ್ ಕೈಗಾರಿಕಾ ನಗರಗಳನ್ನು ಸ್ಥಾಪಿಸುವ ಉದ್ದೇಶವನ್ನು ಸಹ ಹೊಂದಲಾಗಿದೆ. 4 ಹಂತಗಳಲ್ಲಿ ಅಭಿವೃದ್ಧಿಪಡಿಸಬೇಕಾದ 32 ಯೋಜನೆಗಳನ್ನು ಒಳಗೊಂಡ 11 ಕೈಗಾರಿಕಾ ಕಾರಿಡಾರ್‌ಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ.

ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ 4 ಗ್ರೀನ್‌ಫೀಲ್ಡ್ ಕೈಗಾರಿಕಾ ಸ್ಮಾರ್ಟ್ ನಗರಗಳು/ ನೋಡ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಕೈಗಾರಿಕಾ ನಗರಗಳು/ ನೋಡ್‌ಗಳಲ್ಲಿ ಪ್ರಮುಖ ಪ್ರಧಾನ ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡಿದ್ದು 16,750 ಕೋಟಿ ರೂ.ಗಳಿಗಿಂತಲೂ ಅಧಿಕ ಹೂಡಿಕೆ ಹೊಂದಿರುವ ಕಂಪನಿಗಳಿಗೆ 138 ಪ್ಲಾಟ್‌ಗಳನ್ನು (754 ಎಕರೆ) ಹಂಚಿಕೆ ಮಾಡಲಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಹಾಯಕವಾಗುವಂತೆ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ (ಬಿಎಂಐಸಿ) ಯೋಜಿಸಲಾಗಿದೆ. ಧಾರವಾಡ ಮತ್ತು ಸತಾರಾ (ಮಹಾರಾಷ್ಟ್ರ) ನಗರಗಳನ್ನು ಆದ್ಯತೆಯ ನೋಡ್‌ಗಳಾಗಿ ಗುರುತಿಸಲಾಗಿದೆ.

ತುರ್ತು ಲ್ಯಾಂಡಿಂಗ್ ವ್ಯವಸ್ಥೆ; ದೇಶದ ಇತರ 19 ಸ್ಥಳಗಳಲ್ಲಿ ರಸ್ತೆಯ ಮೇಲೆ ವಿಮಾನ ತುರ್ತು ಲ್ಯಾಂಡಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಇದಕ್ಕೆ ಹೆದ್ದಾರಿ ರನ್‌-ವೇ ಯೋಜನೆ ಎಂದು ಹೆಸರಿಡಲಾಗಿದೆ.

ರಾಜಸ್ಥಾನದ ಫಲೋಡಿ-ಜೈಸಲ್ಮೇರ್ ರಸ್ತೆ ಮತ್ತು ಬರ್ಮರ್‌- ಜೈಸಲ್ಮೇರ್ ರಸ್ತೆ. ಪಶ್ಚಿಮ ಬಂಗಾಳದ ಖರಗ್‌ಪುರ್ - ಬಾಲಸೋರ್ ರಸ್ತೆ, ಖರಗ್‌ಪುರ್- ಕಿಯೋಂಜಾರ್ ರಸ್ತೆ. ತಮಿಳುನಾಡು ರಾಜ್ಯದ ಚೆನ್ನೈನ ಪನಘರ್/ಕೆಕೆಡಿ ಬಳಿ. ಪುದುಚೇರಿ ರಸ್ತೆಯಲ್ಲಿ. ಆಂಧ್ರ ಪ್ರದೇಶದ ನೆಲ್ಲೂರು-ಒಂಗೋಲ್ ರಸ್ತೆ ಮತ್ತು ಒಂಗೋಲ್ - ಚಿಲಕಲೂರಿಪೇಟ್ ರಸ್ತೆಯಲ್ಲಿ ಹೆದ್ದಾರಿ ರನ್-ವೇ ರಸ್ತೆ ನಿರ್ಮಾಣವಾಗಲಿದೆ.

ಹರ್ಯಾಣದ ಮಂಡಿ ಡಬ್ವಾಲಿ-ಓಧನ್ ರಸ್ತೆ. ಪಂಜಾಬ್‌ನ ಸಂಗ್ರೂರ್ ಬಳಿ. ಗುಜರಾತಿನ ಭುಜ್-ನಲಿಯಾ ರಸ್ತೆಯಲ್ಲಿ ಮತ್ತು ಸೂರತ್-ಬರೋಡಾ ರಸ್ತೆಯಲ್ಲಿ. ಜಮ್ಮು-ಕಾಶ್ಮೀರದ ಬನಿಹಾಲ್-ಶ್ರೀನಗರ ರಸ್ತೆ. ಅಸ್ಸಾಂನ ಲೇಹ್/ನ್ಯೋಮಾ ಪ್ರದೇಶ ಮತ್ತು ಜೋರ್ಹತ್-ಬಾರಾಘಾಟ್ ರಸ್ತೆಯಲ್ಲಿ. ಶಿವಸಾಗರ ಬಳಿ ಬಾಗ್ದೋಗ್ರಾ-ಹಶೀಮಾರಾ ರಸ್ತೆ. ಹಶೀಮಾರಾ-ತೇಜ್‌ಪುರ್ ಮಾರ್ಗ ಮತ್ತು ಅಸ್ಸಾಂನ ಹಶೀಮಾರಾ-ಗುವಾಹಟಿ ರಸ್ತೆಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+