ಪೋಷಕರೇ ಎಚ್ಚರ..! ಮಂಗಳೂರಿನ ಅಂಗಡಿಗಳಲ್ಲಿ ಸಿಗುತ್ತಿದೆ ಅಮಲೇರಿಸುವ ಚಾಕಲೇಟ್
ವಿದ್ಯಾರ್ಥಿಗಳನ್ನೇ ಹೆಚ್ಚು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಚಾಕಲೇಟ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಬರಿಸುವ ವಸ್ತುಗಳನ್ನು ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಭಾರೀ ಪ್ರಮಾಣದಲ್ಲಿ ಅಮಲು ಭರಿಸುವ ಭಾಂಗ್ ಚಾಕಲೇಟ್‌ಗಳ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದ ಕಾರ್ ಸ್ಟ್ರೀಟ್ ಹಾಗು ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮಾದಕ ವಸ್ತು ಮಿಶ್ರಿತ ಭಾಂಗ್ ಚಾಕಲೇಟ್‌ಗಳನ್ನು ಪತ್ತೆ ಹಚ್ಚಿದ್ದಾರೆ.

ಮಾದಕ ವಸ್ತು ಮಿಶ್ರಿತ ಭಾಂಗ್ ಚಾಕಲೇಟ್‌ಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್(45), ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್(49) ಪೊಲೀಸರು ವಶಕ್ಕೆ ಪಡೆದ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳು ಉತ್ತರ ಭಾರತದಿಂದ ಈ ಮತ್ತು ಭರಿಸುವ ಭಾಂಗ್ ಚಾಕಲೇಟ್‌ಗಳನ್ನು ತಂದು ಮಹಾಶಕ್ತಿ ಮುನಕ್ಕಾ, ಬಮ್‌ಬಮ್ ಮುನೆಕ್ಕಾವಟಿ, ಪಾವರ್ ಮುನಕ್ಕಾ ವಟಿ ಹಾಗೂ ಆನಂದ ಚೂರ್ಣ ಹೆಸರಿನಲ್ಲಿ ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಚಾಕಲೇಟ್ ಒಂದನ್ನು ಮೂವತ್ತು ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ವಿದ್ಯಾರ್ಥಿಗಳೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಆರೋಪಿಗಳಿಂದ 100 ಕೆ.ಜಿ ಭಾಂಗ್ ಚಾಕಲೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾಂಗ್ ಚಾಕೊಲೇಟ್‌ನಲ್ಲಿ ಗಾಂಜಾ ಮಿಶ್ರಣವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಮಲು ಪದಾರ್ಥ ಬೆರೆಸಿರುವ ಬಗ್ಗೆ ತಿಳಿಯಲು ಸ್ಯಾಂಪಲ್ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ.

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಮಾತನಾಡಿದ್ದು, ಮಂಗಳೂರಿನ ಕೆಲವು ಅಂಗಡಿಗಳಲ್ಲಿ ಮತ್ತು ಬರಿಸುವ ಚಾಕಲೇಟ್‌ಗಳ ಮಾರಾಟ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ನೂರಕ್ಕೂ ಹೆಚ್ಚು ಅಂಗಡಿಗಳಲ್ಲಿ ಶೋಧ ಕಾರ್ಯ ನಡೆಸಿ 100ಕ್ಕೂ ಕೆಜಿ ಭಾಂಗ್ ಚಾಕಲೇಟ್ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು. ಭಾಂಗ್ ಚಾಕಲೇಟನ್ನು ಎಫ್‌ಎಸ್‌ಎಲ್ ವರದಿಗಾಗಿ ಕಳುಹಿಸಿದ್ದೇವೆ. ಈ ಚಾಕಲೇಟ್‌ನಲ್ಲಿ ಮಾದಕ ದ್ರವ್ಯ ಇರುವ ಶಂಕೆ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಫ್‌ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications