Monsoon Rains: ರಾಜ್ಯದ ಬೀಚ್‌ಗಳಲ್ಲಿ 70 ಗೃಹ ರಕ್ಷಕರ ತಂಡ ಕಣ್ಗಾವಲು
ಮಂಗಳೂರು, ಮೇ 27: ಕರ್ನಾಟಕದ ಕರಾವಳಿ ಎಂದರೆ ನೆನಪಾಗುವುದು ಮಂಗಳೂರು, ಉಡುಪಿ ಭಾಗದ ಸಮುದ್ರದ ತೀರ ಪ್ರದೇಶಗಳು, ಮರಳು ಮತ್ತು ಅಲ್ಲಿನ ಆಹಾರ ಪದ್ಧತಿ. ಇದೆಲ್ಲವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ನಾವೀಗ ಬೇಸಿಗೆ ಕಳೆದು ಮಳೆಗಾಲ ಪ್ರವೇಶಿಸುತ್ತಿದ್ದೇವೆ. ಮತ್ತೊಂದೆಡೆ ಚೆಂಡಮಾರುತ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ದಕ್ಷಿಣ ಕನ್ನಡದ ಜಿಲ್ಲೆಯ ವ್ಯಾಪ್ತಿಗೆ ಬರುವ ಮಂಗಳೂರು ಬೀಚ್‌ಗಳಲ್ಲಿ ಮಳೆಗಾಲದಲ್ಲಿ ಯಾವುದೇ ಅವಘಡ, ಸಾವು-ನೋವು ಸಂಭವಿಸದಂತೆ ಎಚ್ಚರ ವಹಿಸಲು ಜೂನ್ 1 ರಿಂದ ಗೃಹರಕ್ಷಕ ದಳ ಕಾರ್ಯನಿರ್ವಹಿಸಲಿದೆ.

ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ಅವರು, ಇಂದು ಸುರತ್ಕಲ್ ಹಾಗೂ ಸಸಿಹಿತ್ಲು ಬೀಚ್‌ಗಳಿಗೆ ಭೇಟಿ ನೀಡಿ ಪರಿಶೀಲಿಸದಿರು. ಪ್ರವಾಹ ರಕ್ಷಣಾ ಕಾರ್ಯಾಚರಣೆಗಳ ಕುರಿತು ಗೃಹರಕ್ಷಕರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸಲಹೆ ನೀಡಿದ್ದಾರೆ.
ವಿಪತ್ತು ನಿರ್ವಹಣಾ ತಂಡ ನಿಯೋಜನೆ
ನಂತರ ಮಾತನಾಡಿದ ಅವರು, ಸದ್ಯ ಸರ್ಕಾರದ ನಿರ್ದೇಶನ ಮೇರೆಗೆ ಬೀಚ್‌ಗಳಲ್ಲಿ ಅಗತ್ಯ ಎಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯಾದ್ಯಂತ 70 ಗೃಹ ರಕ್ಷಕರನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡವನ್ನು ಪ್ರತಿ ವರ್ಷ ಈ ಬಾರಿಯು ನಿಯೋಜಿಸಲಾಗುತ್ತಿದೆ ಎಂದರು.
ಎರಡು ಪಾಳಿಯಲ್ಲಿ 12 ಗಂಟೆ ಅಲರ್ಟ್
ಜಿಲ್ಲೆ ವ್ಯಾಪ್ತಿಯ ಉಳ್ಳಾಲ, ಪಣಂಬೂರು, ತಣ್ಣೀರಭಾವಿ, ಸೋಮೇಶ್ವರ, ಮೊಗವೀರಪಟ್ಣ, ಫಾತಿಮಾ ಬೀಚ್, ಸಸಿಹಿತ್ಲು ಮತ್ತು ಸುರತ್ಕಲ್ ಗೃಹರಕ್ಷಕ ದಳವನ್ನು ನಿಯೋಜನೆಗೊಳ್ಳಲಿದ್ದಾರೆ. ಪ್ರತಿಯೊಂದು ಬೀಚ್‌ನಲ್ಲಿಯೂ ಇಬ್ಬರು ಭದ್ರತಾ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಇವರು ನಿತ್ಯ ಬೆಳಗ್ಗೆ 12 ಗಂಟೆಗಳ ಕಾಲ (ಬೆಳಗ್ಗೆ 7-ಸಂಜೆ 7) ಪಾಳಿ ಪ್ರಕಾರ ಬೀಚ್‌ಗಳಲ್ಲಿ ಅಗತ್ಯ ಕಟ್ಟೆಚ್ಚರ ವಹಿಸಲಿದ್ದಾರೆ.

ಒಂದೆಡೆ ಚಂಡಮಾರುತ ಸೃಷ್ಟಿಯಾಗಿದೆ. ಮತ್ತೊಂದೆ ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸಲಿದೆ. ಈ ವೇಳೆ ಸಮುದ್ರದಲ್ಲಿ ಅಲೆಗಳು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಈ ಸಮಯದಲ್ಲಿ ಕರಾವಳಿ ಬೀಚ್‌ಗಳಿಗೆ ಬರುವ ಪ್ರವಾಸಿಗರಿಗೆ ಅಪಾಯ ಎದುರಾಗುವ ಸಂಭವ ಇರುತ್ತದೆ.
ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕಾರ್ಯನಿರ್ವಹಣೆ
ಪ್ರವಾಸಿಗರಿಗೆ ಅಗತ್ಯ ಎಚ್ಚರಿಕೆ, ಸೂಚನೆಯನ್ನು ಈ ಭದ್ರತಾ ಸಿಬ್ಬಂದಿ ಸೂಚಿಸುತ್ತಾರೆ. ಬೀಚ್‌ಗಳಲ್ಲಿ ಜೀವಹಾನಿಯನ್ನು ತಡೆಯಲೆಂದೇ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎಂಟು ಬೀಚ್‌ಗಳಲ್ಲಿ ಸಿಬ್ಬಂದಿ ಅಲರ್ಟ್ ಇರಲಿದ್ದಾರೆ ಎಂದು ಚೂಂತಾರು ಮಾಹಿತಿ ನೀಡಿದರು.
ಅಷ್ಟೇ ಅಲ್ಲದೇ ವಿಪತ್ತು ಸಂದರ್ಭದಲ್ಲಿ ಗೃಹರಕ್ಷಕರು ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ/ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಲಿದ್ದಾರೆ. ಹೆಚ್ಚುವರಿಯಾಗಿ, ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ 10 ಗೃಹ ರಕ್ಷಕರ ಮೀಸಲು ತಂಡ ಇರಲಿದೆ. ಮಳೆಗಾಲದಲ್ಲಿ ತುರ್ತು ಕರೆಗಳಿಗೂ ಸ್ಪಂದನೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸುಬ್ರಹ್ಮಣ್ಯ ಸ್ನಾನಘಟ್ಟ, ಉಪ್ಪಿನಂಗಡಿ ಸಂಗಮ, ಬಂಟ್ವಾಳ ಮೂಲ್ಕಿ, ಸುಳ್ಯ, ಬೆಳ್ತಂಗಡಿಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕಟ್ಟೆಚ್ಚರ ವಹಿಸಲಾಗುವುದು. ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಪರಿಣಿತ ಈಜುಗಾರರು ಮತ್ತು ಚಾಲಕರಿಗೆ ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ ಎಂದರು.












Click it and Unblock the Notifications