ಮಂಗಳೂರಿನಲ್ಲಿ ಅನಧಿಕೃತ ಸ್ಕಿಲ್ ಗೇಮ್ ಅಡ್ಡೆ ಮೇಲೆ ಮೇಯರ್ ದಾಳಿ
ಮಂಗಳೂರು, ಜುಲೈ 6: ಅನಧಿಕೃತ ಸ್ಕಿಲ್ ಗೇಮ್ ಅಡ್ಡೆಗೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಮಂಗಳೂರಿನ ಜ್ಯೋತಿ ಬಳಿ ಅಕ್ರಮವಾಗಿ ನಡೆಸುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಯುವಕರು ಸ್ಕಿಲ್ ಗೇಮ್ ಆಡುತ್ತಿದ್ದರು. ದಾಳಿ ನಡೆಯುತ್ತಿದ್ದಂತೆ ಯುವಕರು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆದಿದೆ.

ಪಾರ್ಕಿಂಗ್ ಜಾಗವನ್ನು ಆಕ್ರಮಿಸಿ ಸ್ಕಿಲ್ ಗೇಮ್ ಅಡ್ಡೆ ನಡೆಯುತ್ತಿತ್ತು. ಇನ್ನೊಂದೆಡೆ ಪಾಲಿಕೆಯ ಟ್ರೇಡ್ ಲೈಸೆನ್ಸ್ ಸಹ ಇಲ್ಲದೆ ಅಕ್ರಮ ಕಟ್ಟಡದಲ್ಲಿ ಈ ಸ್ಕಿಲ್ ಗೇಮ್ ಅಡ್ಡೆ ಕಾರ್ಯಚರಿಸುತ್ತಿರುವ ಮಾಹಿತಿಯೂ ಬೆಳಕಿಗೆ ಬಂದಿದೆ.












Click it and Unblock the Notifications