• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ 1,269 ಕೊರೊನಾ ಸೋಂಕಿತರ ಅಂತ್ಯಕ್ರಿಯೆ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಸೆಪ್ಟೆಂಬರ್ 25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿತ 1,269 ಮೃತದೇಹಗಳ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ.

ಕೊರೊನಾ ಕಾಲದ ಪ್ರಾರಂಭದಲ್ಲಿ ವೈರಸ್ ಭೀತಿಯ ಕಾರಣದಿಂದಾಗಿ ಸೋಂಕಿತ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕುವ, ಮೃತದೇಹಗಳನ್ನು ಕುಟುಂಬಸ್ಥರೇ ತಿರಸ್ಕರಿಸುವ ಸನ್ನಿವೇಶ ಕಂಡು ಬಂದಿತ್ತು.

ಕೊರೊನಾ ಸೋಂಕಿತ ಮೃತದೇಹಗಳಿಗೆ ಕನಿಷ್ಠ ಗೌರವವನ್ನೂ ನೀಡದೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವ, ಸಾಮೂಹಿಕವಾಗಿ ಹೂತು ಬಿಡುವ ಘಟನಾವಳಿಗಳಿಗೆ ರಾಜ್ಯದ ಜನರು ಸಾಕ್ಷಿಯಾಗಿದ್ದರು.

ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಮುಂದೆ ಬಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು, ಧರ್ಮ ಬೇಧವಿಲ್ಲದೆ ದೇಶದಾದ್ಯಂತ ಕೋವಿಡ್ ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ಕೈಜೋಡಿಸಿದರು.

ಮಹಾರಾಷ್ಟ್ರದ ಪುಣೆಯಲ್ಲಿ ಮೃತದೇಹವೊಂದನ್ನು ಕುಟುಂಬಸ್ಥರೇ ನಿರಾಕರಿಸಿದಾಗ, ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಸ್ಥಳೀಯಾಡಳಿತ ಸಂಸ್ಥೆಯ ಅನುಮತಿಯೊಂದಿಗೆ ಮೊದಲ ಬಾರಿ ಕೋವಿಡ್ ಅಂತ್ಯಸಂಸ್ಕಾರಕ್ಕೆ ಧುಮುಕಿದರು.

ಕರ್ನಾಟಕದಲ್ಲಿ ಕೋವಿಡ್ ಸಾವುಗಳು ಸಂಭವಿಸಲಾರಂಭಿಸಿದಾಗ ಪಾಪ್ಯುಲರ್ ಫ್ರಂಟ್, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತರಬೇತಿ ಪಡೆದ ತನ್ನ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿತು.

   Karnataka ಮತ್ತೊಮ್ಮೆ Lockdown ಆಗಲಿದೆಯೇ ? ಕಂಪ್ಲೀಟ್ ವಿವರ | Oneindia Kannada

   ಕರ್ನಾಟಕ ರಾಜ್ಯಾದ್ಯಂತ ಪಾಪ್ಯುಲರ್ ಫ್ರಂಟ್ ಇಲ್ಲಿಯವರೆಗೆ 1,269 ಮಂದಿಯ ಅಂತ್ಯ ಸಂಸ್ಕಾರವನ್ನು ನಡೆಸಿದ್ದು, ಜಾತಿ, ಧರ್ಮವನ್ನು ಮೀರಿದ ಈ ಮಾನವೀಯ ಕಾರ್ಯವು ವ್ಯಾಪಕವಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

   English summary
   The funeral of 1,269 coronavirus infected bodies has been conducted in the state by the Popular Front of India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X