ಮಂಗಳೂರು ಪೊಲೀಸರ ವೆಬ್‌ಸೈಟ್‌ ನೋಡಿ

ಮಂಗಳೂರು, ಏ.8 : ಮಂಗಳೂರು ಪೊಲೀಸರು ಜನಸ್ನೇಹಿಯಾಗಲು ವೆಬ್‌ಸೈಟ್‌ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಪರಾಧ ನಡೆದರೆ ಅದರ ಫೋಟೋವನ್ನು ಜನರು ಮೊಬೈಲ್ ಅಪ್ಲಿಕೇಶನ್ ಮೂಲಕ ಕಂಟ್ರೋಲ್‌ ರೂಂಗೆ ಕಳಿಸುವ ವ್ಯವಸ್ಥೆಯನ್ನು ಅಪ್ಲಿಕೇಶನ್ ಹೊಂದಿದೆ.

ಮಂಗಳವಾರ ಸಂಜೆ ಮಂಗಳೂರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಿಜಿ ಮತ್ತು ಐಜಿಪಿ ಓಂಪ್ರಕಾಶ್ ವೆಬ್‌ಸೈಟ್‌ ಮತ್ತು ಮೊಬೈಲ್ ಅಪ್ಲಿಕೇಶ್‌ನ್‌ ಲೋಕಾರ್ಪಣೆ ಮಾಡಿದರು. ವೆಬ್‍ಸೈಟ್ ನಲ್ಲಿ ಸಾರ್ವಜನಿಕರಿಗೆ ಸಹಾಯಕವಾಗುವಂತೆ ಹಲವು ಸೇವೆಗಳನ್ನು ನೀಡಲಾಗಿದೆ ಎಂದರು. [ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ]

Mangaluru

ವೆಬ್‌ಸೈಟ್‌ನಲ್ಲಿ ಏನಿದೆ : ಸಾರ್ವಜನಿಕರು http://www.mangalorecitypolice.com/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಡಿಎಲ್ ಸೇರಿದಂತೆ ವಿವಿಧ ಸೇವೆಗಳ ಅರ್ಜಿಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ ಬಗ್ಗೆ ಜನರು ಪ್ರತಿಕ್ರಿಯೆಗಳನ್ನು ನೀಡಬಹುದಾಗಿದೆ.

ದೂರ ನೀಡಲು ಸಾಧ್ಯವಿಲ್ಲ : ಮೊಬೈಲ್ ಅಪ್ಲಿಕೇಶನ್ ಮೂಲಕ ಜನರು ದೂರು ನೀಡುವ ಸೌಲಭ್ಯವನ್ನು ಸದ್ಯಕ್ಕೆ ಕಲ್ಪಿಸಲಾಗಿಲ್ಲ. ಸಿಬ್ಬಂದಿ ಕೊರತೆಯ ಕಾರಣದಿಂದಾಗಿ ಈ ಸೇವೆಯನ್ನು ಸದ್ಯಕ್ಕೆ ಆರಂಭಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ನೋಡಿ]

Police

ಈಗ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಮೂಲಕ ತುರ್ತು ದೂರವಾಣಿ ಸಂಖ್ಯೆಗಳು, ವಿವಿಧ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ, ಸಂಚಾರಿ ಪೊಲೀಸರು ವಿಧಿಸಿದ ದಂಡದ ಮಾಹಿತಿ ಜನರಿಗೆ ದೊರೆಯಲಿದೆ. ಪ್ರಮುಖವಾಗಿ ನಗರದಲ್ಲಿ ಉಂಟಾಗಿರುವ ಸಂಚಾರ ದಟ್ಟಣೆ ಬಗ್ಗೆ ತಕ್ಷಣ ಮೊಬೈಲ್‌ನಲ್ಲಿ ಮಾಹಿತಿ ಲಭ್ಯವಾಗುತ್ತದೆ.

ಹೊಸ ಪೊಲೀಸ್ ಠಾಣೆ : ಮಂಗಳೂರಿನಲ್ಲಿ ಹೊಸದಾಗಿ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್‌ ಠಾಣೆ, ಜೆಪ್ಪಿನಮೊಗರು ಹಾಗೂ ಕೈಕಂಬಗಳಲ್ಲಿ ಪೊಲೀಸ್‌ ಠಾಣೆಗಳನ್ನು ಆರಂಭಿಸಲು ಈಗಾಗಲೇ ಪ್ರಸ್ತಾವನೆ ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್‌ ಸಿಬ್ಬಂದಿ ಕೊರತೆಯನ್ನು ನೀಗಿಸಲು ನೇಮಕಾತಿ ನಡೆದಿದ್ದು, ತರಬೇತಿಯ ಬಳಿಕ ನಿಯೋಜನೆಗೊಳ್ಳಲಿದ್ದಾರೆ ಎಂದು ಡಿಜಿ-ಐಜಿಪಿ ಓಂಪ್ರಕಾಶ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+