ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಷಾರಾಮಿ ಜೀವನ ನಡೆಸುತ್ತಿದ್ದ ಚೋರರ ಬಂಧನ

|
Google Oneindia Kannada News

ಮಂಗಳೂರು, ಜೂನ್ 19: ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರು ವಾಹನ, ಮನೆ ಹಾಗೂ ದೇವಸ್ಥಾನಗಳಲ್ಲಿ ಕಳವು ನಡೆಸುತ್ತಿದ್ದ ಅಂತಾರಾಜ್ಯ ಕಳ್ಳರ ತಂಡದ ಸದಸ್ಯರು ಎಂದು ಹೇಳಲಾಗಿದೆ.

ಬಂಧಿತರನ್ನು ಕಾರ್ನಾಡು ಗ್ರಾಮದ ಸವಾದ್ (24) ಹಾಗೂ ತೋಕೂರು ಗ್ರಾಮದ ಮೊಹಮ್ಮದ್ ಸಿನಾನ್ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 40 ಲಕ್ಷ ರೂಪಾಯಿ ಮೌಲ್ಯದ ಸೊತ್ತುನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಕಾರ್ನಾಡು ನಿವಾಸಿ ಹಿಯಾಜ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಮುಲ್ಕಿ ಪೊಲೀಸರು ಬಲೆ ಬೀಸಿದ್ದಾರೆ.

 ಗಾಂಜಾ ಹಸ್ತಾಂತರಿಸುವಾಗ ಸಿಕ್ಕಿಬಿದ್ದ ನಾಲ್ವರ ಬಂಧನ ಗಾಂಜಾ ಹಸ್ತಾಂತರಿಸುವಾಗ ಸಿಕ್ಕಿಬಿದ್ದ ನಾಲ್ವರ ಬಂಧನ

ಬಂಧಿತ ಆರೋಪಿಗಳಿಂದ ಗೋವಾದಲ್ಲಿ ಕಳವು ಮಾಡಿದ, ನೋಂದಣಿ ಸಂಖ್ಯೆ ಅಳವಡಿಸದ ಫಾರ್ಚುನರ್ ಕಾರು, ಎರಡು ಬುಲೆಟ್ ಬೈಕ್, ಅದಲ್ಲದೆ ಕೃತ್ಯಕ್ಕೆ ಬಳಸಿದ್ದ ಪಿಕ್ ಅಪ್ ವಾಹನ, 2 ಬೈಕ್, 3 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Mangaluru police arrested Gang of car thieves

ಆರೋಪಿಗಳು ಕಳ್ಳತನ ಮಾಡಿದ ಸೊತ್ತುಗಳನ್ನು ಮಾರಾಟ ಮಾಡಿ ಲಭಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ದುಬಾರಿ ಬೆಲೆಯ ಕಾರು, ಬೈಕ್ ‌ಗಳನ್ನೇ ಕಳ್ಳತನ ಮಾಡುತ್ತಿದ್ದರು. ಹಲವು ದೇವಸ್ಥಾನಗಳಲ್ಲೂ ಕಳ್ಳತನ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

English summary
Mulki station police team arrested a Notorious gang of car thieves who were stealing to live a luxurious life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X