ನೀರಿಗೆ ಬಿದ್ದವರ ಬದುಕಿಸೋದು ಹೇಗೆ? ಮಂಗಳೂರಿನಲ್ಲಿ ತರಬೇತಿ
ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಕೋಚ್ , ರಾಷ್ಟ್ರೀಯ ಸರ್ಫ್ ಸೇವಿಂಗ್ ಡೈರೆಕ್ಟರ್ ಪಾರ್ಥ ವಾರಾಣಸಿ ತಂಡ ಮಂಗಳೂರಿನ ತಣ್ಣೀರುಬಾವಿ ಬೀಚಿನಲ್ಲಿ ಸುಮಾರು 45 ಮಕ್ಕಳಿಗೆ ಜೀವ ರಕ್ಷಣೆಯ ತರಬೇತಿ ನೀಡಿತು.
ಮಂಗಳೂರು, ಮೇ 24: ಅದು ಮುಂಜಾನೆಯ ಸಮಯ, ರಾತ್ರಿಯ ಬಿರುಸಿನ ಮಳೆಯ ಕಾರಣ ಸಮುದ್ರ ಇನ್ನೂ ಉಕ್ಕೇರುತ್ತಿತ್ತು. ಹಾಲ್ನೊರೆಯಂಥ ಅಲೆಯ ನಡುವೆ ಆಟವಾಡಲು ಹೋಗಿ ಆ ಯುವಕ ಸಮುದ್ರದ ಕಬಂಧ ಬಾಹುಗೆ ಸಿಲುಕಿದ್ದ. ಭೋರ್ಗೆರೆಯುವ ಕಡಲ ಅಲೆಗಳ ನಡುವೆ ನಡೆದ ಯುವಕನ ರಕ್ಷಣಾ ಕಾರ್ಯಾಚರಣೆ ಸಾಹಸ ಪ್ರತೀಕವೆನ್ನಿಸಿತ್ತು.
ಭೋರ್ಗರೆಯುವ ಸಮುದ್ರ, ಸಮುದ್ರದ ಅಲೆಯ ನಡುವೆ ಸಿಲುಕಿರುವ ಯುವಕ... ಇನ್ನೇನು ಉಗ್ರ ಅಲೆಗಳು ಆ ಯುವಕನನ್ನು ಬಲಿ ಪಡೆದುಕೊಳ್ಳುತ್ತದೆ ಅನ್ನೋವಾಗ, ಆ ತಂಡ ಯುವಕ ರಕ್ಷಣೆ ಮಾಡಿತು... ಸಮುದ್ರದ ನಡುವಿನಲ್ಲಿದ್ದ ಯುವಕನನ್ನು ದಡಕ್ಕೆ ಎಳೆದು ತಂದ ಆ ತಂಡ, ಪ್ರಾಥಮಿಕ ಚಿಕಿತ್ಸೆ ನಡೆಸಿ ಯುವಕನ ಪ್ರಾಣ ಉಳಿಸಿತು![ಪ್ರತಿಷ್ಠಿತ ಒಲಿಂಪಿಯಾಡ್ ಗೆ ಮಂಗ್ಳೂರು ಹುಡುಗ ಆದಿತ್ಯ ಪ್ರಕಾಶ್]
ಅಂದ ಹಾಗೆ ಇದು ನೈಜ ಘಟನೆಯಲ್ಲ, ಮಂಗಳೂರಿನ ತಣ್ಣೀರುಬಾವಿಯಲ್ಲಿ ನಡೆದ ಲೈಫ್ ಸೇವಿಂಗ್ ತರಬೇತಿ ಶಿಬಿರ. ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಕೋಚ್ , ರಾಷ್ಟ್ರೀಯ ಸರ್ಫ್ ಸೇವಿಂಗ್ ಡೈರೆಕ್ಟರ್ ಪಾರ್ಥ ವಾರಾಣಸಿ ತಂಡ ಸುಮಾರು 45 ಮಕ್ಕಳಿಗೆ ವಿಶೇಷ ತರಬೇತಿ ನೀಡಿತು. ಸಮುದ್ರದಲ್ಲಿ ಆಪಾಯದಲ್ಲಿರುವ ವ್ಯಕ್ತಿಗಳನ್ನು ರಕ್ಷಣೆ ಮಾಡುವ ಬಗ್ಗೆ ಶಿಬಿರದಲ್ಲಿ ತಿಳಿಸಿಕೊಡಲಾಯಿತು.

ಆಸ್ಟ್ರೇಲಿಯನ್ ಮಾದರಿ

ಯಾರಿಗೆ ತರಬೇತಿ?
ಆರರಿಂದ 18 ವರ್ಷ ಪ್ರಾಯದ ವಿದ್ಯಾರ್ಥಿಗಳು ವಿವಿಧ ಜೀವರಕ್ಷಣಾ ವಿಧಾನಗಳಾದ ಬೋರ್ಡ್ ರೆಸ್ಕ್ಯೂ (ಬೋರ್ಡ್ ಸಹಾಯದಿಂದ ಸಮುದ್ರದಲ್ಲಿ ಮುಳುಗುತ್ತಿರುವ ವ್ಯಕ್ತಿಯ ರಕ್ಷಣೆ), ಟ್ಯೂಬ್ ರೆಸ್ಕ್ಯೂ (ಟ್ಯೂಬ್ ಸಹಾಯದಿಂದ ಮುಳುಗುತ್ತಿರುವವರ ರಕ್ಷಣೆ) ವಿಧಾನಗಳ ಬಗ್ಗೆ ತಿಳಿದುಕೊಂಡರಲ್ಲದೆ ಕಾರ್ಡಿಯೋಪಲ್ಮನರಿ ರಿಸಸಿಯೇಶನ್ (Cardiopulmonary resuscitation) ವಿಧಾನದ ಬಗ್ಗೆಯೂ ಅವರಿಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು.[ಮೊದಲ ಸ್ಟಾರ್ಟ್ ಅಪ್ ಯೋಜನೆಗೆ ಮಂಗಳೂರು ಆಯ್ಕೆ]

ಇದುವರೆಗೂ ತರಬೇತಿ ಪಡೆದವರು
'ತಮ್ಮ ತಂಡ ಈಗಾಗಲೇ ಉಡುಪಿ, ಕಾರವಾರ ಮತ್ತು ಮುರ್ಡೇಶ್ವರದಲ್ಲಿ ಕಳೆದ ವರ್ಷ 60 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಅವರು ಇಲ್ಲಿಯತನಕ 7 ಮಂದಿಯನ್ನು ರಕ್ಷಿಸಿದ್ದಾರೆ' ಎಂದು ಸರ್ಫ್ ಲೈಫ್ ಸೇವಿಂಗ್ ಇಂಡಿಯಾ ನಿರ್ದೇಶಕ ಪಾರ್ಥ ವಾರಾಣಸಿ ಹೇಳಿದ್ದಾರೆ.[ಆಳ್ವಾಸ್ ನಲ್ಲಿ ಬಸ್ ಗಳ ಮೇಲಿಂದ ಹಾರಿದ ಬೈಕ್ ಸಾಹಸ ರೋಮಾಂಚನ!]

ಪ್ರಾಣ ಉಳಿಸುವ ಕಾಯಕ
ದೇಶದಲ್ಲಿ ಪ್ರತಿವರ್ಷ ಸರಾಸರಿ 22,500 ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇಂತಹ ಜೀವರಕ್ಷಕ ವಿಧಾನಗಳನ್ನು ಕಲಿಸುವುದರಿಂದ ಹಲವು ಮಂದಿಯ ಪ್ರಾಣ ಉಳಿಸಬಹುದು. ದೇಶದ ಮೊದಲ ಸರ್ಫ್ ಲೈಫ್ ಸೇವಿಂಗ್ ಕ್ಲಬ್ಬನ್ನು ತಣ್ಣೀರುಬಾವಿಯಲ್ಲಿ ತೆರೆಯುವ ಪ್ರಸ್ತಾಪವಿದ್ದು, ಅದಕ್ಕೆ ಜಿಲ್ಲಾಡಳಿತದ ಸಹಾಯವನ್ನು ಕೋರಲಾಗಿದೆ' ಎಂದು ಅವರು ಹೇಳಿದ್ದಾರೆ.

ಕಲಿಸಿದ್ದೇನೆ?
'ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಹೂಪ್ಸ್ (ತೆರೆಗಳನ್ನು ನಿಭಾಯಿಸುವ ವಿಧಾನ), ಫ್ಲ್ಯಾಗ್ಸ್ (ಮುಳುಗುತ್ತಿರುವವರತ್ತ ಓಡುವ ವಿಧಾನ) ಇವುಗಳನ್ನೂ ಕಲಿಸಲಾಯಿತು' ಎಂದು ಮುಖ್ಯ ತರಬೇತುದಾರ ನಿರೂಪ್ ಜಿ ಆರ್ ತಿಳಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications